Wednesday, March 18, 2015

B.S.Chandrashekhara / ಬಿ.ಎಸ್.ಚಂದ್ರಶೇಖರ ಸಾಗರ

ಬಿ.ಎಸ್.ಚಂದ್ರಶೇಖರ ಸಾಗರ
ಬಿ.ಎಸ್ ಚಂದ್ರಶೇಖರ (28-2-1934) ಇವರು ಸಾಗರದಲ್ಲಿ ವಾಸಿಸುತ್ತಿದ್ದಾರೆ. ತಂದೆ ಶ್ರೀ ಬಿ.ಸೂರ್ಯನಾರಾಯಣ ಭಟ್ ಮತ್ತು ತಾಯಿ ಶ್ರೀಮತಿ ಸರಸ್ತಮ್ಮ. ಇವರು ಸಾಗರದಲ್ಲಿಯೇ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿ ನಂತರ ಬಿ.ಎ. ಬಿ.ಎಡ್ ಪದವಿ ಪಡೆದು ಸರ್ಕಾರಿ ಪ್ರೌಢಶಾಲೆಯ ಉಪಾಧ್ಯಾಯರಾಗಿ ನಂತರ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೋದಿರುತ್ತಾರೆ.

ಸೇವೆ:
ಇವರು ಬೇರೆ ಬೇರೆ ಕಡೆ ಸೇವೆ ಸಲ್ಲಿಸಿ ಸಾಗರಕ್ಕೆ ಬಂದ ನಂತರ  1970-1980 ದಶಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷರಾಗಿ ನಂತರ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕರ ಸಂಘಟನೆಯಲ್ಲಿ ತೊಡಗಿದ್ದರು. ಅಲ್ಲದೆ ಅದೇ ಸಮಯದಲ್ಲಿ ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು.
*
ಸಾಗರದ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಆ ಸಂಘವನ್ನು ಲಾಭಕರ ಸಂಘವಾಗಿ ಪರಿವರ್ತಿಸಿದರು. ಸಾಗರ ತಾಲ್ಲೂಕಿನ ಸ್ಕೌಟ್ಸ್ ಮತ್ತು ಗೈಡ್ಸ್  ಸಂಸ್ಥೆಯ ಕಾರ್ಯದರ್ಶಿಯಾಗಿ ಜೊತೆಯವರ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ ಉತ್ತಮ ಸ್ಕೌಟ್ ಗೈಡ್ಸ್ ಚಳುವಳಿಯನ್ನು ಸಂಘಟಿಸಿ ಅನೇಕರಿಗೆ ತರಬೇತಿ ಕೊಟ್ಟು  ಭಾರತದ ಅಧ್ಯಕ್ಷರ ಬ್ಯಾಡ್ಜ್ ಪಡೆಯುವಂತೆ ಮಾಡಿದರು. ; ತಾಲ್ಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಸಮ್ಮೇಳನಗಳನ್ನು ನಡೆಸಿದರು.  
*
ಸಾಗರದ ಮಲೆನಾಡು ಗಮಕ ಕಲಾ ಸಂಘದಲ್ಲಿ 1982 ರಿಂದಲೂ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು 1993 ರಿಂದ  2007 ರ ವರೆಗೂ ಆ ಸಂಘದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿರುತ್ತಾರೆ. ಸಾಗರದ ಜನತೆಗೂ , ಸಾಗರದ ಗ್ರಾಮಾಂತರ ಜನತೆಗೂ, ಇತರರ ಸಹಯೋಗದೊಡನೆ, ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ. ಗದುಗಿನ ಭಾರತ ,  ಜೈಮಿನಿ ಭಾರತ ಮೊದಲಾದ ಕನ್ನಡದ ಪ್ರಾಚೀನ ಕಾವ್ಯಗಳನ್ನು ತಲುಪಿಸಿರುತ್ತಾರೆ. ಈಗ ಅದೇ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
*
ಈಗ 2011-12  ವರ್ಷದಿಂದ ಕನ್ನಡ ವಿಕಿಪೀಡಿಯಾಕ್ಕೆ  ಅದರ ಸದಸ್ಯರಾಗಿ ಮಾಹಿತಿಗಳನ್ನೂ ಮಾಹಿತಿಗಳುಳ್ಳ ಲೇಖನಗಳನ್ನೂ ತಂಬುತ್ತಿದ್ದಾರೆ. (18-3-2015)