Tuesday, January 31, 2012

ಯಜುರ್ವೇದ ಬೋಧಾಯನೀಯ ಸಂಧ್ಯಾವಂದನ ಪೂರ್ಣ ಪಾಠ ಹವ್ಯಕ ಪದ್ಧತಿ(ಸಂಪ್ರದಾಯ)


 ಯಜುರ್ವೇದ ಬೋಧಾಯನೀಯ ಸಂಧ್ಯಾವಂದನ ಪೂರ್ಣ ಪಾಠ ಹವ್ಯಕ ಪದ್ಧತಿ (ಸಂಪ್ರದಾಯ) - ಟೀಕೆ ಮತ್ತು ಅರ್ಥ ಸಹಿತ
                    ||ಓಂ ಶ್ರೀರಸ್ತು||
ಪೀಠಿಕೆ : ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಾಣುತ್ತದೆ. ರಾಮಾಯಣ ಮಹಾಕಾವ್ಯದಲ್ಲಿ ವಿಶ್ವಾಮಿತ್ರ ಋಷಿಯು ಶ್ರೀ ರಾಮನಿಗೆ ಬೆಳಗಾಯಿತು ಏಳು ಸಂಧ್ಯಾ ವಿಧಿಗಳನ್ನು ಮಾಡು ಎಂದು ಎಚ್ಚರಿಸುತ್ತಾನೆ.
ಸಂಧ್ಯಾವಂದನೆಗೆ ತ್ರಿಕಾಲವನ್ನು ಅಥವಾ ತ್ರಿಸಂಧ್ಯೆಯನ್ನು ಹೇಳಿದೆ; ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ. ಅದಕ್ಕೆ ತಕ್ಕಂತೆ ಮಂತ್ರಗಳನ್ನೂ ಜೋಡಿಸಿದೆ.  ಸಧ್ಯದಲ್ಲಿ ಎರಡು ಕಾಲದಲ್ಲಿ ಮಾತ್ರ ಆಚರಣೆ  ಮಾಡುವುದು ರೂಢಿಯಲ್ಲಿರುವುದು - ಬೆಳಗಿನ ಮತ್ತು ಮದ್ಯಾಹ್ನದ ಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಬೆಳಗಿನಲ್ಲಿ ಅಥವಾ ಮಧ್ಯಾಹ್ನ  ಆಚರಿಸುವುದು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಒಮ್ಮೆ  ಸಂಧ್ಯಾವಂದನೆ ಮಾಡುವುದು.  ಶ್ರೌತ ಸ್ಮಾರ್ತ ಪದ್ದತಿಗಳನ್ನೊಳಗೊಂಡ  ಈ ಕ್ರಿಯೆಗಳು ನೈಮಿತ್ತಿಕ  ಕರ್ಮಗಳಲ್ಲಿ ಸೇರಿದೆ. ಇದನ್ನು ಆಚರಿಸುವುದರಿಂದ ಮನಸ್ಸು ಅಥವಾ ಚಿತ್ತ ಶುದ್ಧಿಯಗುವುದೆಂಬುದು ಶ್ರೀ ಶಂಕರರ ಅಭಿಪ್ರಾಯ.  ಈ ಕ್ರಿಯೆ ಮಾಡುವುದರಿಂದ ಪುಣ್ಯವೂ ಇಲ್ಲ : ಬಿಡುವುದರಿಂದ ಪಾಪವೂ ಇಲ್ಲ. ಆದರೆ ಬಿಡುವುದರಿಂದ ಕರ್ತವ್ಯ ಲೋಪವಾಗುವುದೆಂದು ಹೇಳಿದೆ. ಈ ಸಂಧ್ಯಾವಂದನಾದಿ ನಿತ್ಯ ಕ್ರಿಯೆಗಳು ಅದರ  ಹೆಸರೇ ಹೇಳುವಂತೆ ಭಗವಂತನಿಗೆ ಧನ್ಯವಾದವನ್ನು ಅರ್ಪಿಸುವ ಕ್ರಿಯೆಗಳಾಗಿವೆ.
(ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ; ಮಣೆ ಅಥವಾ ಚಾಪೆಯ ಮೇಲೆ ಕುಳಿತು  ಕೈ ಮುಗಿದುಕೊಂಡು  ಪ್ರಾರ್ಥನೆ ಮಾಡಬೇಕು.  ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನ ದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು )  ಸಂಧ್ಯಾವಂದನೆ;- ಹವ್ಯಕರು ಅನುಸರಿದುವ ಬೋಧಾಯನ ಪದ್ಧತಿಯ ಸಂಧ್ಯಾವಂದನೆಯಲ್ಲಿ ಮುಖ್ಯವಾಗಿ ಈ ಹದಿನಾಲ್ಕು ಕ್ರಿಯೆಗಳಿವೆ.

[ಸಂಧ್ಯಾವಂದನ ವಿಧಿ ವಿಧಾನ : ೧.ಪ್ರಾಶನಂ (ಆಚಮನ) ; ೨. ಶುದ್ಧೀಕರಣಂ ಮಂತ್ರ;೩. ಭಸ್ಮ ಧಾರಣಂ ; ೪.ಮಾರ್ಜನಂ ; ೫. ಪಾಪ ನಿವಾರಣಂ ; ೬. ಪುನರ‍್ಮಾರ್ಜನಂ ; ೭ಅಘ್ಯ ಪ್ರದಾನಂ ; ೮.ಐಕ್ಯಾನುಸಂಧಾನಂ ; ೯.ಗಾಯತ್ರೀ ಜಪಂ (-> ಆವಾಹನ-ಧ್ಯಾನ-ಮುದ್ರಾ-ಶಾಪವಿಮೋಚನ-ಜಪ-ಧ್ಯಾನ-ಮುದ್ರಾ -ಉದ್ವಾಸನ); ೧೦. ಮಿತ್ರ(ಸೂರ್ಯ) ಮತ್ತು ವರಣ ಉಪಸ್ಥಾನಂ ; ೧೧. ಸರ್ವದೇವ ನಮಸ್ಕಾರಂ ; ೧೨. ಆಷ್ಟಾಕ್ಷರೀ , ೧೩ ಪಂಚಾಕ್ಷರೀ ಜಪಂ ; ೧೪.ಭಗವದರ್ಪಣಂ.].    [ ನನಗೆ ತಿಳಿದ ಮಟ್ಟಿಗೆ ಟಿಪ್ಪಣಿಗಳನ್ನು ಬರೆದಿದ್ದೇನೆ.  ಯಜುಶ್ಶಾಖೆಯ ಬೋಧಾಯನೀಯ ಸಂಧ್ಯಾವಂದನಾ ಕರ್ಮದ ಪೂರ್ಣ ಪಾಠ. ಈ ಕಳಗಿನ ಪಾಠ ದಿವಂಗತ. ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು (೨೬/೧೦/೧೯೪೨)  ನನಗೆ ೧೯೪೪-೪೫ರಲ್ಲಿ ಬರೆದುಕೊಟ್ಟ ಬೋಧಾಯನೀಯ ಸೂತ್ರದ ಪೂರ್ಣ ಸಂಧ್ಯಾವಂದನಾ ಕರ್ಮದ ಪಾಠ.   ಹಳೆಯ ಹಸ್ತ ಪ್ರತಿಯಲ್ಲಿ ಅಸ್ಪಷ್ಟ ವಿದ್ದುಅನುಮಾನ ಬಂದಕಡೆ ಆವರಣದಲ್ಲಿ ಪರ್ಯಾಯ ಪದ ತೋರಿಸಿದೆ ವಿದ್ವಜ್ಜನರು ಸರಿಯಾ ಪದವನ್ನು ತುಂಬಿಕೊಳ್ಳ ಬೇಕು] ||  (ಹಳೆಯ ಹಸ್ತ ಪ್ರತಿಯಲ್ಲಿ ಅಸ್ಪಷ್ಟ ವಿದ್ದುಅನುಮಾನ ಬಂದಕಡೆ ಆವರಣದಲ್ಲಿ ಪರ್ಯಾಯ ಪದ ತೋರಿಸಿದೆ ವಿದ್ವಜ್ಜನರು ಸರಿಯಾ ಪದವನ್ನು ತುಂಬಿಕೊಳ್ಳ ಬೇಕು)


(ಕುಲ ದೇವತಾಭ್ಯೋ ನಮಃ - ಕುಲದೇವತೆಯನ್ನು/ಗಳನ್ನು ಸ್ಮರಿಸು ; ಉದಾ:)
ಶ್ರೀ ಲಕ್ಷ್ಮಿ ನಾರಾಯಣಾಭ್ಯೋ ನಮಃ | ಶ್ರಿಲಕ್ಷ್ಮಿನಾರಾಯಣಾಯನಮಃ) (೧ ಲಕ್ಷ್ಮಿ ಮತ್ತು ನಾರಾಯಣ ಇಬ್ಬರಿಗೂ ನಮಸ್ಕಾರ - ೨. ಲಕ್ಷ್ಮಿಸಹಿತನಾದ ನಾರಾಯಣನಿಗೆ ಒಬ್ಬನಿಗೇ ನಮಸ್ಕಾರ  ಯಾವುದಾದರೂ ಒಂದು ಕ್ರಮ ಅನುಸರಿಸ ಬೇಕು)
(ಶ್ರೀ ಲಕ್ಷ್ಮಿವೆಂಕಟರಮಣಾಭ್ಯೋ ನಮಃ|| ಶ್ರೀ ಲಕ್ಷ್ಮಿವೆಂಕಟರಮಣಾಯ ನಮಃ |)
(ಇಷ್ಟ ದೇವತಾಭ್ಯೋ ನಮಃ - ತನಗೆ ಪ್ರೀತಿಯುಳ್ಳ ದೇವರನ್ನು ಮತ್ತು ಗುರುಗಳನ್ನು ನೆನೆಯುವುದು, ನಮಿಸುವುದು ಉದಾ;)   ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃಶ್ರೀ ಶಾರದಾಂಬಾಯೈ ನಮಃ |
(ಪುನಹ ಗಣಪತಿಯ ವಂದನೆಯಿಂದ ಸಂಧ್ಯಾವಂದನೆ ಪ್ರಾರಂಭ) :-

ವಂದೇ ವಿಘ್ನೇಶ್ವರಂ  ದೇವಂ ಸರ್ವವಿಘ್ನಾದಿ ದೈವತಂ | ಅಂತರಾಯ ನಿವೃತ್ಯರ್ಥಂ ತನ್ನಮಾಮಿ ಗಜಾನನಂ ||||
ಟಿ* : ಸಂಧ್ಯಾವಂದನೆಯ ಪ್ರಾರಂಭಕ್ಕೆ ಮೊದಲು ವಿಘ್ನಗಳನ್ನು ನಿವಾರಿಸುವ  ವಿಘ್ನಾಧಿದೇವನಾದ ಗಜಾನನನ್ನು ಅಂತರಾಯ ಎಂದರೆ ತೊಂದರೆಗಳನ್ನು ನಿವೃತ್ತಿಮಾಡೆಂದು ಪ್ರಾರ್ಥಸಿ [ತಂ ನಮಾಮಿ] ಗಜಾನನ ನಿನಗೆ ನಮಸ್ಕಾರ ಎಂದು ನಮಿಸುವುದು *
||ಆಚಮನ||
 ಓಂ ರುಗ್ವೇದಾಯ ಸ್ವಾಹಾ ||  ಓಂ ಯಜುರ್ವೇದಾಸ್ವಾಹಾ ||  ಓಂ ಸಾಮವೇದಾಯ ಸ್ವಾಹಾ || ಇತಿ ತ್ರಿರಾಚಮ್ಯ || ಟಿ* : ಸ್ವಲ್ಪವೇ ನೀರನ್ನು ವೇದಗಳ ಹೆಸರಿನಲ್ಲಿ ಸೇವಿಸುವುದು  [ಟಿ*: ಇದು ಶ್ರುತ ಆಚಮನ, ವಿಷ್ಣು ನಾಮದಲ್ಲಿ ಸ್ವೀಕರಿಸುವುದು ಸ್ಮೃತ ಆಚಮನ]
. ||ಮಂತ್ರ ಶುದ್ಧೀಕರಣಂ||
ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋSಪಿ ವಾ ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ || ಇತಿ ಹರಿಸ್ಮರಣಂ ಕೃತ್ವಾ ||  
ತಾತ್ಪರ್ಯ : ಅಪರಿಶುದ್ಧನಾದರೂ, ಪರಿಶುದ್ಧನಾದರೂ ಸಮಸ್ತವಿಧದ ಅವಸ್ಥೆಗಳನ್ನು ಹೊಂದಿದವನಾದರೂಪರಿಶುದ್ಧನಾಗಬೇಕೆಂದು ಯಾವ ಮನುಷ್ಯನು  ಶ್ರೀಮನ್ನಾರಯಣನನ್ನು (ಪುಂಡರೀಕಾಕ್ಷನನ್ನು) ಸ್ಮರಿಸುವದರಿಂದ ದೇಹದ ಒಳಗೂ ಹೊರಗೂ ಪರಿಶುದ್ಧನಾಗುತ್ತಾನೆ.                                                                                                                                                                                                                                               
ಓಂ ರುಗ್ವೇದಾಯ ಸ್ವಾಹಾ ||  ಓಂ ಯಜುರ್ವೇದಾಸ್ವಾಹಾ ||  ಓಂ ಸಾಮವೇದಾಯ ಸ್ವಾಹಾ || ಇತಿ ತ್ರಿರಾಚಮ್ಯ || (ಸ್ಮಾರ್ಥ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ ಸ್ವಾಹಾ, ಅಥವಾ ೧. ಓಂ ಅಚ್ಯುತಾಯ ನಮಃ,೨. ಓಂ ಅನಂತಾಯ ನಮಃ. ೩. ಓಂ ಗೋವಿಂದಾಯ ನಮಃ. ಎಂದು ಹೇಳಿ ಆಚಮನ ಮಾಡುವುದು ಸಂಪ್ರದಾಯ.) ಟಿ* : ಸ್ವಲ್ಪವೇ ನೀರನ್ನು ವೇದಗಳ ಹೆಸರಿನಲ್ಲಿ ಸೇವಿಸುವುದು   ಆಚಮ್ಯ -ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ [ (ಟಿ*: ಇದು ಶ್ರುತ ಆಚಮನ, ವಿಷ್ಣು ನಾಮದಲ್ಲಿ ಸ್ವೀಕರಿಸುವುದು ಸ್ಮೃತ ಆಚಮನ) ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ ನೀರು ಹಾಕಿಕೊಂಡು ಪ್ರತಿ ಮಂತ್ರಕ್ಕೂ ೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು - ಸ್ಮಾರ್ಥ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ ಸ್ವಾಹಾ, ಅಥವಾ ೧. ಓಂ ಅಚ್ಯುತಾಯ ನಮಃ,೨. ಓಂ ಅನಂತಾಯ ನಮಃ. ೩. ಓಂ ಗೋವಿಂದಾಯ ನಮಃ. ಎಂದು ಹೇಳಿ ಆಚಮನ ಮಾಡುವುದು ಸಂಪ್ರದಾಯ.)- ಇದು ಒಂದು ಸುತ್ತು ಆಚಮನ-ತ್ರಿರಾಚಮ್ಯ - ಪ್ರತಿ ಕ್ರಿಯೆಯ  ವಚನವನ್ನು ಹೇಳಿಕೊಂಡು ಕ್ರಿಯೆ ಮಾಡಬೇಕು ; ಆವರಣದಲ್ಲಿರುವುದು ಸೂಚನೆ. 
                                 ***** *****
ಪ್ರತಿ ಸ್ಥಾನಂ ಸಜಲಮಭಿಮೃಶೇತ್ ||
ಟಿ* : ಆಯಾ ದೇಹದ ಭಾಗಗಳಿಗೆ ಆಯಾ ದೇವತೆಗಳು ಅಧಿಪತಿಗಳೆಂದು ಭಾವಿಸಿ ಆ ಭಾಗಗಳನ್ನು ನೀರು ಚಿಮಕಿಸಿ ಆ ದೇವತೆಗಳಿಗೆ ನಮಃ ಹೇಳುತ್ತಾ ಶುದ್ಧ ಗೊಳಿಸುವುದು.
 ಓಂ ಅಥರ್ವವೇದಾಯನಮಃ | ಯಿತ್ಯಂಗುಷ್ಠ ಮೂಲೇ ನೋತ್ತರೋಷ್ಠಂ || ಓಂ ಇತಿಹಾಸ ಪುರಾಣೇಭ್ಯೋ ನಮಃ | ಇತ್ಯಧರೋಷ್ಠಂ (ಅಧೋಷ್ಠಂ ?) || ಓಂ ಅಗ್ನಯೇ ನಮಃ | ಯಿತಿ ಪಾಣಿನಾ ಮುಖಮವಾಙ್ಮೃ ಜೇತ್|| ಓಂ ನಕ್ಷತ್ರೇಭ್ಯೋ ನಮಃ ಯಿತಿ ವಾಮ ಪಾಣಿಮಭ್ಯುಕ್ಷ್ಯ || ಓಂ ವಿಷ್ಣುವೇ ನಮಃ | ಯಿತಿ ಪಾದಾಭ್ಯುಕ್ಷ್ಯ || ಓಂ ಸೂರ್ಯಾಯ ನಮಃ | ಓಂ ಚಂದ್ರಾಯ ನಮಃ | ಯಿತ್ಯಂಗುಷ್ಠನಾಮಿ ಕಾಭ್ಯಾಂ ದಕ್ಷಿಣ ವಾಮ ನೇತ್ರಂ || ಓಂ ಪ್ರಾಣಾಯ ನಮಃ | ಓಂ ಅಪಾನಾಯ ನಮಃ | ಯಿತ್ಯಂಗುಷ್ಠ ತರ್ಜನೀಭ್ಯಾಂ ದಕ್ಷಿಣ ವಾಮ ನಾಸಿಕೇ || ಓಂ ದಿಗ್ಭ್ಯೋ ನಮಃ | ಓಂ ದಿಗ್ಭ್ಯೋ ನಮಃ | ಯಿತ್ಯಂಗುಷ್ಠ ಕನಿಷ್ಠಿಕಾಭ್ಯಾಂ ದಕ್ಷಿಣ ವಾಮ ಶ್ರೋತ್ರೇ || ಓಂ ಯಿಂದ್ರಾಯ ನಮಃ | ಓಂ ಯಿಂದ್ರಾಯ ನಮಃ | ಯಿತ್ಯಂಗುಷ್ಠ ಮಧ್ಯಮಾಭ್ಯಾಂ ದಕ್ಷಿಣ ವಾಮ ಬಾಹು || ಓಂ ಪ್ರಥಿವ್ಯೈ ನಮಃ |ಓಂ ಪ್ರಥಿವ್ಯೈ ನಮಃ | ಯಿತಿ ದಕ್ಷಿಣ ವಾಮ ಪಾದೌ || ಓಂ ಅಂತರಿಕ್ಷಾಯೈ ನಮಃ | ಓಂ ಅಂತರಿಕ್ಷಾಯೈ ನಮಃ | ಯಿತಿ ದಕ್ಷಿಣ ವಾಮ ಜಾನು|| ಓಂ ದಿವೇ ನಮಃ | ಯಿತಿ ಗುಹ್ಯಂ || ಓಂ ಬ್ರಹ್ಮಣೇ ನಮಃ | ಯಿತಿ ಅಂಗುಷ್ಠೇನ ನಾಭಿಂ || ಓಂ ರುದ್ರಾಯ ನಮಃ | ಯಿತಿ ಪಾಣಿ ತಳೇನ ಹೃದಯಂ || ಓಂ ಶಿವಾಯ ನಮಃ | ಯಿತಿ ಸರ್ವಾಭಿ ರಂಗುಲೀಭಿ ಃ ಶಿರಃ || ಓಂ ಸಪ್ತರುಷಿಬ್ಯೋ ನಮಃ | ಯಿತಿ ಶಿಖಾಂಚ ಸ್ಪೃಶೇತ್ || ಇತ್ಯಾಚಮನಂ ||

|| ಅಥ ಭಸ್ಮ ಧಾರಣಂ ||
 ಟಿ*- ಶಿವನ - ರುದ್ರನ - ಮೃತ್ಯುಂಜಯನ ಮಂತ್ರಗಳಿಂದ ಅಭಿಮಂತ್ರಿಸಿದ ವಿಭೂತಿಯನ್ನು ಧರಿಸಿ ದೇಹ ಶುದ್ಧಿಮಾಡಿಕೊಳ್ಳುವುದು.  (ಭಸ್ಮ ಧರಿಸುವ ಮಂತ್ರ - ಕ್ರಿಯೆಯ ಮಂತ್ರಗಳನ್ನೂ ಹೇಳಿಕೊಳ್ಳಬೇಕು.). (ಬಲ ಹೆಬ್ಬೆರಳು, ಮಧ್ಯ ಬೆರಳು, ಅನಾಮಿಕ ಬೆರಳುಗಳಲ್ಲಿ ೧ ಚಿಟಿಕೆ ಭಸ್ಮವನ್ನು ತೆಗೆದುಕೊಂಡು, ಎಡ ಅಂಗೈ ಮಧ್ಯದಲ್ಲಿ ಇಟ್ಟುಕೊಂಡು, ಕೆಳಗಿನ ರುದ್ರ ಗಾಯತ್ರೀ ಮತ್ತು ಮೃತ್ಯಂಜಯ ಮಂತ್ರದಿಂದ ಅಭಿಮಂತ್ರಿಸಬೇಕು)

ಪುನಃ ಪೂರ್ವದಾಚಮ್ಯ || ಅಥ ಭಸ್ಮಂ ಗ್ರಹೀತ್ವಾ || ಓಂ ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋನಮೋ|| ಭವೇ ಭವೇ ನಾತಿ ಭವೇ ಭವಸ್ಮಾಂ ಭವೋಧ್ಭವಾಯನಮಃ ||||  ಓಂ ವಾಮದೇವಾಯ ನಮೋ ಜೇಷ್ಠಾಯ ನಮಃ ಶ್ರೇಷ್ಠಾಯ ನಮೋ ರುದ್ರಾಯ ನಮಃ ಕಾಲಾಯ ನಮಃ ಕಲವಿಕರಣಾಯ ನಮೋ ಬಲವಿಕರಣಯನಮೋ ಬಲಾಯ ನಮೋ ಬಲ ಪ್ರಮಥನಾಯ ನಮಃ ಸರ್ವ ಭೂತ ದಮಯನಾಯ ನಮೋ ಮನೋನ್ಮನಾಯ ನಮಃ |||| ಓಂ ಅಘೋರೇಭ್ಯೋSಥ ಘೋರೇಭ್ಯೋ  ಘೋರ ಘೋರ ತರೇಭ್ಯಃ ||||  ಸರ್ವೇಭ್ಯ ಸರ್ವ ಶರ್ವೇಭ್ಯೋ ನಮಸ್ತೇ ಅಸ್ತು ರುದ್ರ ರೂಪೇಭ್ಯಃ ||||  ಓಂ ತತ್ಪರುಷಾಯ ವಿದ್ಮಹೇ ಮಹಾ ದೇವಾಯ ಧೀಮಹಿ| ತನ್ನೋ ರುದ್ರಃ ಪ್ರಚೋದಯಾತ್ |||| ಈಶಾನ ಸರ್ವವಿದ್ಯಾನಾಮೀಶ್ವರಃ  ಸರ್ವ ಭೂತಾನಾಂ ಬ್ರಹ್ಮಾಧಿಪತಿರ್ಬ್ರ ಹ್ಮಣೋಧಿಪತಿರ್ಬ್ರ ಹ್ಮಣೋSಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಂ ||||  ಯಿತಿ ಪಂಚ ಬ್ರಹ್ಮ ಮಂತ್ರೈರಭಿಮಂತ್ರ್ಯ || ಓಂ ಮಾ ನಸ್ತೋ ಕೇ ತನಯೇ ಮಾನ ಆಯುಷಿ ಮಾ ನೋ ಗೋಷು ಮಾ ನೋ ಅಶ್ವೇಷು ರೀರಿಷಃ ||  ವೀರಾನ್ಮಾನೋ ರುದ್ರ ಭಾಮಿತೋSವಧೀರರ್ಹವಿಷ್ಮಂತೋ  ನಮಸಾ ವಿಧೇಮ ತೇ|| ಯಿತ್ಯಾಲೋಡ್ಯ || ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ || ಊರ‍್ವಾರುಕ ಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್||  ಯೇ ತೇ ಸಹಸ್ರಯುತಂ ಪಾಶಾ ಮೃತ್ಯೋರ್ಮತ್ಯಾಯ ಹಂತವೇ | ತಾನ್ಯಜ್ಞಸ್ಯ ಮಾಯಯಾ  ಸರ್ವಾನವ ಯಜಾಮಹೇ || ಅಗ್ನಿರಿತಿ ಭಸ್ಮ || ವಾಯುರಿತಿ ಭಸ್ಮ || ಜಲಮಿತಿ ಭಸ್ಮ || ಸ್ಥಲಮಿತಿ ಭಸ್ಮ ||ವ್ಯೋಮೇತಿ ಭಸ್ಮ || ಸರ್ವ ಗುಂ ಹವಾ ಯಿದಂ ಭಸ್ಮ || ಮನ ಏತಾನಿ ಚಕ್ಷೂ ಗುಂಷಿ ಭಸ್ಮಾನಿ||
|| ಇತಿ ಮಧ್ಯಮಾನಾಮಿಕಾಂಗುಷ್ಠೈರ್ವಾ ತರ್ಜನೀಮಧ್ಯಮಾನಾ ಮಿಕಾಂಗುಷ್ಠೈ ಲಲಾಟೇ ವಾಮನೇತ್ರಾಂತದಾರಭ್ಯದಕ್ಷಿಣ ನೇತ್ರಾಂತ ಪರ್ಯಂತಂ ತ್ರಿಪುಂಡ್ರಂ ಧೃತ್ವಾ ||  ತಥೈವ ಹೃದಯ ನಾಭಿ ಗಲಾಂ ಸ ಬಾಹು ಕುಕ್ಷಿ ಶಿರಃ ಚಕ್ಷು ಸ್ಥಾನೇಷು ಧಾರಯೇತ್ || (ಭಸ್ಮ ಧರಿಸುವ ಮಂತ್ರ - ಕ್ರಿಯೆಯ ಮಂತ್ರಗಳನ್ನೂ ಹೇಳಿಕೊಳ್ಳಬೇಕು.). (ಬಲ ಹೆಬ್ಬೆರಳು, ಮಧ್ಯ ಬೆರಳು, ಅನಾಮಿಕ ಬೆರಳುಗಳಲ್ಲಿ ೧ ಚಿಟಿಕೆ ಭಸ್ಮವನ್ನು ತೆಗೆದುಕೊಂಡು, ಎಡ ಅಂಗೈ ಮಧ್ಯದಲ್ಲಿ ಇಟ್ಟುಕೊಂಡು, ಈಕೆಳಗಿನ ರುದ್ರ ಗಾಯತ್ರೀ ಮತ್ತು ಮೃತ್ಯಂಜಯ ಮಂತ್ರದಿಂದ ಅಭಿಮಂತ್ರಿಸಬೇಕು)||ಅಥ ದ್ವಿರಾಚಮ್ಯ||

 ||ಪ್ರಾಣಾಯಾಮಂ ಕುರ್ಯಾತ್ ||
 ಟಿ* : ಪ್ರಾಣಾಯಾಮವನ್ನು ತಿಳಿದವರಿಂದ ಕೇಳಿ ತಿಳಿದು ಮಾಡುವುದು. ಸರಳ ವಿಧಾನ : ವ್ಯಾಹೃತಿಗಳನ್ನು ಹೇಳುವಾಗ (ಓಂಭೂಃ -ಸತ್ಯಂವರೆಗೆ )ಎಡಮೂಗಿನಿಂದ ಉಸಿರುತೆಗೆದುಕೊಂಡು (ಪೂರಕ), ಗಾಯತ್ರಿ ಹೇಳುವಾಗ ಉಸಿರು ತಡೆ ಹಿಡಿದು (ಅಂತರ್ ಕುಂಭಕ)   ಓಂ ಆಪೋಜ್ಯೋತಿ --ಸ್ಸುವರೋಂ ಹೇಳುವಾಗ ಬಲಮೂಗಿನಿಂದ ಬಿಡುವುದು (ರೇಚಕ). ಅದೇಕ್ರಮ ಅನುಸರಿಸಿ ಬಲದಿಂದ ಪೂರಕಮಾಡಿ, ಮೂಲ ಗಾಯತ್ರಿಗೆ ಕುಂಭಕ ಮಾಡಿ, ಎಡದಿಂದ ರೇಚಕ; ಪುನಃ ಎಡದಿಂದ - ಬಲಮೂಗಿನಲ್ಲಿ ಮುಕ್ತಾಯ.  ಒಟ್ಟು ಮೂರು ಪ್ರಾಣಾಯಾಮವಾಗುತ್ತೆ. ಎಷ್ಟೇ ಪ್ರಾಣಾಯಾಮವಾಗಲಿ ಎಡ ಮೂಗಿನಿಂದ ಪ್ರಾರಂಭ, ಬಲ ಮೂಗಿನಲ್ಲಿ ಮುಕ್ತಾಯ.  ಆದರೆ ಈ ಮಂತ್ರಕ್ಕೆ ಪ್ರಾಣಾಯಾಮ ಕ್ರಮ ಯಾರೂ ಹೇಳುವುದೂ ಇಲ್ಲ ; ಯಾರೂ ಮಾಡುವುದೂ ಇಲ್ಲ. ಮೂಗು ಹಿಡಿದುಕೊಂಡು ಮೂರು ಬಾರಿ ಮಂತ್ರ ಹೇಳುವರು.
ಓಂ ಪ್ರಣವಸ್ಯ ಪರಬ್ರಹ್ಮ ಋಷಿಃ -(ಇತಿ ಶಿರಸಿ) |  ಗಾಯತ್ರೀ ಛಂದಃ (ಇತಿ ಮುಖೇ) | ಪರಮಾತ್ಮಾ ದೇವತಾ (ಇತಿ ಹೃದಯೇ) | ಇತಿ ವಿನ್ಯಸ್ಯ| ಪ್ರಾಣಾಯಾಮೇ ವಿನಿಯೋಗಃ|| ಓಂ ಭೂಃ -ಇತಿ ಪಾದಯೋಃ() | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋSಮೃತಂ ಬ್ರಹ್ಮ ಭೂರ್ಭುವಸ್ಸುವರೋಂ || ಯಿತಿ ತ್ರಿವಾರಮುಚ್ಚಾರಯೇತ್||  (ಪ್ರಾಣಾಯಾಮ :  ಇತ್ಯಂಗುಷ್ಠಕನಿಷ್ಠಾನಾಮಿಕಾಭಿಃ ನಾಸಿಕಾಂ ಪೀಡಯಿತ್ವಾ ವಾಮ ನಾಸಿಕಾಯಾ ವಾಯುಮಾಪೂರಯನ್ ಗಾಯತ್ರೀಂ ಏವಂ ತ್ರಿರ್ಜಪಿತ್ವಾ ದಕ್ಷಿಣ ನಾಸಿಕಯಾ ಶನೈರ್ವಾಯುಂ ಬಹಿರ್ನಿಸ್ಸಾರಯೇತ್-| ಯಿತಿ ಪ್ರಾಣಾನಾಯಮ್ಯ||
|| ಸಂಕಲ್ಪ ||
ವಿಷ್ಣೋ ವಿಷ್ಣೋ ವಿಷ್ಣೋರಾಜ್ಞಯಾ ಪ್ರವರ್ತ ಮಾನಸ್ಯ ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ರೀ ಹರೇಃ ಶ್ವೇತವರಾಹಕಲ್ಪೇ ವೈವಸ್ವತ ಮನ್ವಂತರೇ  ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ ಭರತಖಂಡೇ ಭಾರತವರ್ಷೇ ಮಹಾಮೇರೋರ್ದಕ್ಷಿಣೇ ಪಾರ್ಷ್ವೇ ಶ್ರೀಮದ್ಗೋದಾವರಿಯಾಂ ದಕ್ಷಣೇತೀರೇ ಗೋಕರ್ಣಮಂಡಲೇ ಗೋರಾಷ್ಟ್ರ  ದೇಶೇ ಭಾಸ್ಕರ ಕ್ಷೇತ್ರೇ ಸಹ್ಯಪರ್ವತೇ ಶಾಲಿವಾಹನ ಶಕಾಬ್ದೇ -  ||
ಅಸ್ಮಿನ್ ವರ್ತಮಾನಕಾಲೇ ವ್ಯಾವಹಾರಿಕೇ --ಸಂವತ್ಸರೇ,          --ಅಯನೇ,  --ಋತೌ , --ಮಾಸೇ, --ಪಕ್ಷೇ,  --ತಿಥೌ, --ವಾಸರೇ, ಮಮೋಪಾತ್ತ ದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾಥಃ / ಮದ್ಯಾಹ್ನ / ಸಾಯಂ / ಸಂಧ್ಯಾ ಮುಪಾಸ್ಯೆ || ಯಿತಿ ಸಂಕಲ್ಪ್ಯ ||
ಟಿ*: ಕೊನೆಯ ಎರಡು ಸಾಲು ಹೇಳಿ, ಪ್ರಾತರ್ ಮಧ್ಯಾಹ್ನಹೇಳಿ ಎರಡುಹೊತ್ತಿನ ಸಂದ್ಯಾವಂದನೆಯನ್ನು ಏಕ ಕಾಲಕ್ಕೆ ಮಾಡುವ ಪದ್ದತಿ ಇದೆ.

|| ಅಥ ನವ ಮಾರ್ಜನಂ ಕುರ್ಯಾತ್ ||
ಓಂ ಆಪೋ ಹಿ ಷ್ಠಾ ಮಯೋಭುವಸ್ತಾ ನ ಊರ್ಜೇ ದಧಾತನಃ| ಓಂ ಮಹೇ ರಣಾಯ ಚಕ್ಷಸೇ || ಯಿತಿ ಪಾದಯೋಃ ||||  ಓಂ ಯೋ ವಃ ಶಿವತಮೋ  ರಸಃ ಓಂ ತಸ್ಯ ಭಾಜಯತೇಹ ನಃ | ಓಂ ಉಷತೀರಿವ ಮಾತರ: || ಯಿತಿ ಮೂಧ್ನಿ |||| ಓಂ ತಸ್ಮಾ ಅರಂ ಗಮಾಮ ವಃ | ಓಂ ಯಸ್ಯ ಕ್ಷಯಾಯ ಜಿನ್ವಥಓಂ ಆಪೋ ಜನಯಥಾ ಚ ನಃ||  ಯಿತಿ ಹೃದಯೇ |||| ಓಂ ಆಪೋಹಿಷ್ಠಾ ಮಯೋಭುವಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ಮೂಧ್ನಿ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ || ಯಿತಿ ಹೃದಯೇ ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ || ಯಿತಿ ಪಾದಯೋಃ|| ||  ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ಹೃದಯೇ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ || ಯಿತಿ ಪಾದಯೋಃ ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ || ಯಿತಿ ಮೂದ್ನಿ||||  ಯಿತಿ ನವ ಮಾರ್ಜಯಿತ್ವಾ || (ಹೇಳಿದ ಆಯಾ ಸ್ಥಾನಗಳಿಗೆ ನೀರು ಚಿಮಕಿಸಿಕೊಳ್ಳಬೇಕು)
ತಾತ್ಪರ್ಯ : ಎಲೈ ಜಲಾಧಿಷ್ಠಾನ ದೇವತೆಗಳಿರಾ ನೀವು ನಮಗೆ ಸುಖ ಸಾಧಕರಾಗಿ ಅನ್ನಕ್ಕೂ ರಮಣೀಯವಾದ ಜ್ಞಾನಕ್ಕೂ ನಮ್ಮನ್ನು ಪಾತ್ರರನ್ನಾಗಿಮಾಡಿರಿ.  ಜನನಿಯು ಮಗುವಿಗೆ ಅಮೃತವನ್ನು ಕೊಟ್ಟು ಕಾಪಾಡುವಂತೆ ನಿಮ್ಮಲ್ಲಿರುವ ಅಮೃತವನ್ನು ನಾವು ಹೊಂದುವಂತೆ ಮಾಡಿ.  ನಿಮ್ಮನ್ನು ಶರಣು ಹೊಂದಿರುತ್ತೇನೆ. ಪುರುಷ ಸಾಮರ್ಥ್ಯವನ್ನು ನಮಗೆ ಕೊಡಿ.  [೧;;;ಆಪೋ ಹಿ--ಚ ನಃ :-ಆಪೋ ದೇವತೆಗಳಿರಾ, ನೀವು ಸುಖದಾಯಕರೂ, ಕಲ್ಯಾಣಕಾರಿಗಳೂ ಆಗಿರುವಿರಾದ್ದರಿಂದ ನೀವು ನಮ್ಮ ಬಲವರ್ಧನೆಗಾಗಿಯೂ, ಸೌಂದರ್ಯದ ಪ್ರಾಪ್ತಿಗಾಗಿಯೂ ನಮ್ಮನ್ನು ಹೃಷ್ಟ-ಪುಷ್ಟರನ್ನಾಗಿ ಮಾಡಿರಿ (೧); ನಿಮ್ಮ ಯಾವ ಅತ್ಯಂತ ಕಲ್ಯಾಣ ಕಾರಿಯಾದ  ರಸವಿರುವುದೋ, ತಮ್ಮ ಸಂತಾನವನ್ನು ಅತಿಯಾಗಿ ಪ್ರೀತಿಸುವ ತಾಯಂದಿರಂತೆ, ನೀವು ನಿಮ್ಮಲ್ಲಿರುವ ಆ ರಸವನ್ನು  ನಮಗಿಲ್ಲಿಯೇ ಅನುಗ್ರಹಿಸಿರಿ. :ಋಗ್ವೇದಲ್ಲೂ ಇದೆ; ಅಥರ್ವಣವೇದ: ೧-೫-೨೨,೨೩,೨೪]
ಪಾಪ ನಿವಾರಣಂ;  ಜಲ ಪ್ರಾಶನ ( ದುರಿತ ನಿವಾಣ) ;
||ಅಥ ಜಲಮಾಧಾಯ|| ಅಥಃ ಪ್ರಾತಃ|| ಓಂ ಸೂರ್ಯಶ್ಚ  ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃಪಾಪೇಭ್ಯೋ ರಕ್ಷಂತಾಂ | ಯದ್ರಾತ್ರಿಯಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ | ರಾತ್ರಿಸ್ತದವಲಂಪತು| ಯತ್ಕಿಂಚ ದುರಿತಂ ಮಯಿ| ಯಿದಮಹಂ ಮಾಮಮೃತಯೋನೌ ಸೂರ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ || ಇತ್ಯಾಪಃ ಪೀತ್ವಾ ||
ತಾತ್ಪರ್ಯ : ಸೂರ್ಯಪರಮಾತ್ಮನೇಪಾಪಗಳಿಂದ ಬಿಡಿಸಿ ಅವು ನಮ್ಮ ಹತ್ತಿರ ಬರದಂತೆ ಮಾಡು, ರಾತ್ರ್ಯಭಿಮಾನ ದೇವತೆಯೇ ಮನಸ್ಸು .ವಾಕ್ಕು, ಕೈಕಾಲುಗಳಿಂದ ಹೊಟ್ಟೆ ಗುಹ್ಯೇಂದ್ರಿಯಗಳಿಂದ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೆಲ್ಲಾ ಪರಿಹರಿಸು. ಆತ್ಮ (ಸೂರ್ಯ) ತೇಜಸ್ಸಿನಲ್ಲಿ ಈ ನೀರಿನ ಮೂಲಕ ಹೋಮ ಮಾಡುತ್ತೇನೆ ಅಂದರೆ ಅರ್ಪಿಸುತ್ತೇನೆ.
||ಅಥ ಮಧ್ಯಾಹ್ನೇ|| ಓಂ ಆಪೋವಾ ಇದಗುಂ ಸರ್ವಂ  ವಿಶ್ವಾ ಭೂತಾನ್ಯಾಪಃ ಪ್ರಾಣಾವ ಆಪಃ ಪಶವ ಆಪೋSನ್ನಮಾಪೋSಮೃತಮಾಪಃ ಸಮ್ರಾಡಾಪೋ ವಿರಾಡಾಪಃ  ಸ್ವರಾಡಾಪಃ  ಶ್ಚಂದಾಗುಸ್ಯಾಪೋ ಜ್ಯೋತಿಗುಸ್ಯಾಪೋ ಯಜೂಗುಸ್ಯಾಪಃ  ಸತ್ಯಮಾಪಃ ಸರ್ವಾ ದೇವತಾ ಆಪೋ ಭೂರ್ಭುವಸ್ಸುವರಾಪ ಓಂ || ಯಿತಿ ಜಲಮಭಿಮಂತ್ರ್ಯ || ಓಂ ಆಪಃ ಪುನಂತು ಪೃಥಿವೀಂ  ಪೃಥವೀ ಪೂತಾ ಪುನಾತುಮಾಂ | ಪುನಂತು ಬ್ರಹ್ಮಣ ಸ್ಪತಿ ರ್ಬ್ರಹ್ಮ ಪೂತಾ ಪುನಾತುಮಾಂ ಯದುಚ್ಛಿಷ್ಠಮಭೋಜ್ಯಂ  ಯದ್ವಾ ದುಶ್ಚರಿತಂ ಮಮ ಸರ್ವಂ ಪುನಂತು ಮಾಮಾಪೋS ಸತಾಂಚ ಪ್ರತಿಗ್ರಹ ಗುಂ ಸ್ವಾಹಾ || ಇತ್ಯಾಪಃ ಪೀತ್ವಾ||
ತಾ : ಓಂ ಆಪಃ ಪುನಂತು - ಉದಕಗಳು ಭೂಮಿಯನ್ನು ಪರಿಶುದ್ಧ ಮಾಡಲಿ ; ಭೂಮಿಯು ನನ್ನನ್ನು ಪರಿಶುದ್ಧಮಾಡಲಿ ; ಪರಮಾತ್ಮನು ಮಂತ್ರವನ್ನು ಪರಿಶುದ್ಧ ಮಾಡಲಿ; ಆ ಮಂತ್ರ ತತ್ವವು ನನ್ನನ್ನು ಶುದ್ಧ ಮಾಡಲಿ; ಎಂಜಲು ಮತ್ತು ತಿನ್ನಬಾರದ ಪದಾರ್ಥಗಳ ಸೇವನೆಯಿಂದ ಬಂದ ಪಾಪಗಳನ್ನೂ ಮತ್ತು ಎಲ್ಲಾ ವಿಧದ ಪಾಪಗಳನ್ನೂ ಪ್ರತಿಗ್ರಹಿಸಿ ನನ್ನನ್ನು ಶುದ್ಧನನ್ನಾಗಿ ಮಾಡಲು ಈಉದಕ ಪ್ರಾಶನವನ್ನು (ಪರಮಾತ್ಮನಲ್ಲಿ) ಅರ್ಪಿಸುತ್ತೇನೆ (ಸ್ವಾಹಾ -ಸೇವಿಸುತ್ತೇನೆ)
 ||ಅಥ ಸಾಯಂಕಾಲೇ || ಓಂ ಅಗ್ನಿ ಶ್ಚ  ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃಪಾಪೇಭ್ಯೋ ರಕ್ಷಂತಾಂ | ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ | ಅಹಸ್ತದವಲಂಪತು| ಯತ್ಕಿಂಚ ದುರಿತಂ ಮಯಿ| ಯಿದಮಹಂ ಮಾಮಮೃತಯೋನೌ ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ || ಇತ್ಯಾಪಃ ಪೀತ್ವಾ ||
||ದ್ವಿರಾಚಮ್ಯ ||  
ತಾ|| ಓಂ ಅಗ್ನಿಶ್ಚ -- ಬೆಳಿಗ್ಗೆ ಸೂರ್ಯನು ಅಧಿ ದೇವತಯಾದರೆ ಸಂಜೆ ಅಗ್ನಿ ಅಧಿದೇವತೆ  ಹಗಲು ಮಾಡಿದ ಪಾಪಗಳನ್ನು ನಿವಾರಿಸಲು ಪ್ರಾರ್ಥನೆ.  ಉಳಿದಂತೆ ಅದೇ ಅರ್ಥ.
ಪುನಃ ಮಾರ್ಜನ ; ||ದ್ವಾತ್ರಿಂಶನ್ಮಾರ್ಜನಂ ಕುರ‍್ಯಾತ್ ||  ||ಹೇಳಿದ ಅಂಗಕ್ಕೆ ನೀರು ಚಿಮಕಿಸಿಕೊಳ್ಳುವುದು||
ಓಂ ದಧಿಕ್ರಾವ್ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ ಸುರಭಿನೋ ಮುಖಾ ಕರತ್ಪ್ರಣ ಆಯೂಗುಂಷಿ ತಾರಿಷತ್ ||||  ಓಂ ಆಪೋಹಿಷ್ಠಾ ಮಯೋಭುವ ಸ್ಥಾನ ಊರ್ಜೇ ದಧಾತನಃ | ಮಹೇರಣಾಯ ಚಕ್ಷಸೇ || ಯಿತಿ ದ್ವಾಭ್ಯಾಂ ಶಿರಸಿ ||||  ಓಂ ಯೋವಃ ಶಿವತಮೋರಸಸ್ತಸ್ಯಭಾಜಯತೇ ಹನಃ |ಓಂ ಉಶತೀರಿವ ಮಾತರಃ  ||||  ಓಂ ತಸ್ಮಾ ಅರಂಗಮಾಮವೋ ಯಸ್ಯಕ್ಷಯಾಯ ಜಿನ್ವಥ || ಓಂ ಆಪೋ ಜನಯತಾಚನಃ ||ಯಿತಿ ದ್ವಾಭ್ಯಾಂ ಮುಖೇ||||  ಓಂ ಯಚ್ಛಿದ್ಧೇತೇ ವಿಶೋಯಥಾ ಪ್ರದೇವ ವರುಣವೃತಂ| ಮಿನೀಮಸಿದ್ಯವಿ ದ್ಯವಿ |||| ಓಂ ಯತ್ಕಿಂಚೇದಂ ವರುಣ ದೈವ್ಯೇಜನೇSಭಿದ್ರೋಹಂ ಮನುಷ್ಯಾಶ್ಚರಾಮಸಿ ||  ಅಚಿತ್ತೀ ಯತ್ತವಧರ್ಮಾಯು  ಯೋಪಿ ಮಮಾನಸ್ತಸ್ಮಾ ದೇನಸೋ ದೇವ   ರೀರಿಷಃ ||  ಯಿತಿ ದ್ವಾಭ್ಯಾಸಿಗ್ರೀವಯೋಃ ||||  ಓಂ ಕಿತವಾಸೋ ಯದ್ರಿರಿ ಪುನರ್ (ರ್ನ) ದೀವಿ ಯದ್ವಾಘಾ ಸತ್ಯ ಮುತಯನ್ನ ವಿದ್ಮ ಸರ್ವಾತಾ ವಿಷ್ಯ ಶಿಥಿರೇವ (ಶಿಧಿದೇವ) ದೇವಾಥಾ ತೇ ಸ್ಯಾಮ ವರುಣ ಪ್ರಿಯಾಸಃ ||||  ಓಂ ಹಿರಣ್ಯವರ್ಣಾಃ ಶುಚಯಃ ಪಾವಕಾಃ ಯಾ ಸುಜಾತಃ ಕಶ್ಯಪೋ ಯಾಸ್ವಿಂದ್ರಃ ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾಸ್ಥಾನ ಆಪಃ [ಶಗುಸ್ಯೋನಾ**] ಶಗುಶ್ಯೋನಾ ಭವಂತು || ಯಿತಿ ದ್ವಾಭ್ಯಾಂ ಬಾಹೋ ||||  ಓಂ ಯಾಸಾಗುಂ ರಾಜಾ ವರುಣೋ ಯಾತಿ ಮಧ್ಯೇ ಸತ್ಯಾನೃತೇ ಅವಪಶ್ಯಞ್ಜನಾನಾಂ (ಅವಪಶ್ಯಂಜನಾನಾಂ) | ಮಧು ಶ್ಚುತಃ ಶುಚಯೋ ಯಾಃ ಪಾವಕಾಸ್ತಾನ  ಆಪಃ ಶಗ್ಗ್‌ಸ್ಯೋನಾ ಭವಂತು |||| ಓಂ ಯಾಸಾಂದೇವಾ ದಿವಿಕೃಣ್ವಂತಿಭಕ್ಷಂ ಯಾ ಅಂತರಿಕ್ಷೇ ಬಹುಧಾಭವಂತಿ ಯಾ ಪೃಥಿವೀಂ  ಪಯಸೋಂದಂತಿ ಶುಕ್ರಾಸ್ತಾನ ಆಪಃ  ಶಗುಶ್ಯೋನಾ [ಶಗುಸ್ಯೋನಾ**] ಭವಂತು ||  ಯಿತಿ ವಕ್ಷಸಿ ದ್ವೇ ||೧೦||  ಓಂ ಶಿವೇನಮಾ ಚಕ್ಷುಷಾ  ಪಶ್ಯತಾSSಪಃ ಶಿವಯಾ ತನುವೋಪ ಸ್ಪೃಶತ್ ತ್ವಚಂ ಮೇ || ಸರ್ವಾಗುಂ ಅಗ್ನೀಗುಂ ರಪ್ಸುಷದೋ | ಹುವೇವೋ  ಮಯಿವರ್ಚೋ ಬಲಮೋಜೋನಿಧತ್ತ (*ದೃಪದಾನಿಮುಂಚತು| ದೃಪದಾದಿವೇನುಮೂಚಾನಃ| ಸ್ಸಿನ್ನಸ್ನಾತ್ವೀಮಲಾದಿವ ಪೂತಂ ಪವಿತ್ರೇಣೀವ್ಯಾಜ್ಯಂ ಆಪಶ್ಶುಂಧಂತುಮೈನಸಃ *) || ೧೧||  ಓಂ ಪವಮಾನಃ ಸುವರ್ಜನಃ ಪವಿತ್ರೇಣ ವಿಚರ್ಷಣೀಃ(ಣೇಃ) ಯಃ ಪೋತಾ ಸ ಪುನಾತು ಮಾ ||ಯಿತಿ ಹೃದಿ ದ್ವೇ || ೧೨||   ಓಂ ಪುನಂತು ಮಾ ದೇವ ಜಿನಾಃ ಪುನಂತು ಮನವೋ ಧಿಯಾ ಪುನಂತು ವಿಶ್ವ ಆಯವಃ || ೧೩|| ಓಂ ಜಾತವೇದ ಪವಿತ್ರವತು | ಪವಿತ್ರೇಣ ಪುನಾಹಿ ಮಾಶುಕ್ರೇಣ ದೇವ ದೀದ್ಯತು | ಅಗ್ನೇ ಕ್ರತ್ವಾ ಕ್ರತು ಗುರನು || ಯಿತಿ ನಾಭಿ ದ್ವೇ ||೧೪ ||  ಓಂ ಯತ್ತೀ ಪವಿತ್ರ ಮರ್ಚಷಿ ಅಗ್ನೇ ವಿತತ ಮಾತರಾ  ಬ್ರಹ್ಮ ತೇನ ಪುನೀಮಹೇ ||೧೫|| ಓಂ ಉಬಾಭ್ಯಾಂ ದೇವ ಸವಿತಃ  | ಪವಿತ್ರೇಣ ಸವೇನತ  | ಯಿದಂ ಬ್ರಹ್ಮಾ ಪುನೀಮಹೇ || ಯಿತಿ ಪಾರ್ಶ್ವಯೋಃ ||೧೬||  ಓಂ ವೈಶ್ವದೇವೀ ಪುನತೀ ದೇವ್ಯಾ ಗಾತು | ಯಸ್ಯೈ ಬಹ್ವೀಸ್ತನುವೋ ವೀತ ಪುಷ್ಠಾಃ | ತಯಾ ವಾ ದಂತಃ ಸಧಮಾದ್ಯೇಷು | ವಯಗುಶ್ಯಾಮ ಪತಯೋ ರಯೀಣಾಂ || ೧೭|| ಓಂ ವೈಶ್ವಾನರೋ ರಶ್ಮಿಬಿರ್ಮಾ ಪುನಾತು ವಾತಃ ಪ್ರಾಣೇ ನೇಷಿರೋ ಮಯೋಭೂಃ | ದ್ಯಾವಾ ಪೃಥಿವೀ ಪಯಸಾಪ ಯೋಭಿಃ || ಋತಾವರೀ ಯಜ್ಞಯೇ ಮಾ ಪುನೀತಾಂ || ಯಿತಿ ಕಟ್ಯಾರಿ ದ್ವೇ ||೧೮|| ಓಂ ಬೃಹದ್ಭಿಃ ಸವಿತ ಸ ಭಿಃವರ್ಷಿಷ್ಠೇರ್ದೇವ ಮನ್ಮಭಿಃ | ಅಗ್ನೇ ದಕ್ಷೈಃ ಪುನಾಹಿಮಾ ||೧೯||  ಓಂ ಯೇನ ದೇವಾ ಅಪುನತಯೇ ನಾSSಪೋ ದಿವ್ಯಂ ಕಶಃ | ತೇನ ದಿವ್ಯೇನ ಬ್ರಹ್ಮಣೂ | ಯಿದಂ ಬ್ರಹ್ಮ ಪುನೀಮಹೇ || ಯಿತಿ ಗುಹ್ಯೇ ದ್ವೇ ||೨೦||  ಓಂ ಯಃ ಪಾವಮಾನಿ ರಧ್ಯೇತಾ ಋಷಿಭಿಃ ಸಂಭತಗು ರಸಂ| ಸರ್ವಗುಂ ಸಪೂತ ಮಶ್ನಾತಾ | ಸ್ವದಿತಯಂ ತಂ ಸ್ವನಾ ||೨೧||  ಓಂ ಪವಮಾನಿರ್ಯೋ ಅಧ್ಯೇಶಿ ಋಷಿಭಿಃ ಸಂಭೃತ ಗುಂ ಸಂ(ಸರಿ) | ತಸ್ಮೈ ಸರಸ್ವತೀ ದುಹೇ ಕ್ಷೀರಗುಂ ಸರ್ಪಿರ್ಮಧೂದಕಂ (ಧೂರ್ದಂ) ||ಯಿತ್ಯೂರ್ವೇ ||೨೨||  ಓಂ ಪಾವಮಾನೀಃ ಸ್ವ್ತಸ್ಯಯನೀಃ | ಸುಧುಘಾಹಿ ಪಯಸ್ವತೀಃ ಋಷಿಭಿಃ ಸಂಭ್ಯತೋ ರಸಃ | ಬ್ರಾಹ್ಮಣೇಷ್ವಮೃತ ಗುಂ ಹಿತಂ ||೨೩|| ಓಂ ಪವಮಾನೀರ್ದಿಶಂತುನಃ | ಇಮಾ ಲೋಕಮಥೋ ಅಮುಂ | ಕಾಮಾನ್‌ತ್ಸಮರ್ಧಯಂತುವಃ | ದೈವೀರ್ದೇವೈ ಸಮಾಭ್ಯತಾಃ ||ಯಿತಿ ಜಾನ್ವೋ ದ್ವೇ||೨೪||  ಓಂ ಪವಮಾನೀಃ ಸ್ವಸ್ತೈಯನೀಃ | ಸದುಘಾಹಿ ಘೃತಶ್ಚುತಃಋಷಿಭಿಃ ಸಂಭೃತೋ ರಸಃ | ಬ್ರಾಹ್ಮಣೇಶಮೃತ ಗುಂ ಹಿತಂ ||೨೫||  ಓಂ ಯೇನ ದೇವಾಃ ಪವಿತ್ರೇಣ ಆತ್ಮಾನಾ ಪುನತೇ ಸದಾತೇನ ಸಹಸ್ರ ಧಾರೇಣ | ಪಾವಮಾನ್ಯಃ ಪುನಾತುಮಾ|| ಯಿತಿ ಜಂಘಯೋ ದ್ವೇ ||೨೬||  ಓಂ ಪ್ರಜಾಪತ್ಯಂ ಪವಿತ್ರಂ | ಶತೋದ್ಯಾಮಗುಂ ಹಿರಣ್ಮಯಂ | ತೇನ ಬ್ರಹ್ಮ ವಿದೋ | ವಯಂ ಪೂತಂ  ಬ್ರಹ್ಮಾ ಪುನೀಮಹೇ ||೨೭|| ಓಂ ಇಂದ್ರಃ ಸುನೀತೀ ಸಹ  ಮಾ ಪುನಾತು | ಸೋಮಸ್ವಸ್ತ್ಯಾ ವರುಣಃ ಸಮೀಚ್ಯಾಃ ಯಮೋ ರಾಜಾ ಪೃಮ್ವ ಣೂಭಿಃ ಪುನಾತು ಮಾ ಜಾತವೇದಾ ಮೂರ್ಜಯಂ ತ್ಯಾ  ಪುನಾತು || ಪಾದಯೋ ದ್ವೇ||೨೮||  ಓಂ ಭೂಃ ||೨೯|| ಓಂ ಭುವಃ || ಯಿತಿ ದ್ವಾಭ್ಯಾಂ ಪಾದಾಂಗುಲೀ ||೩೦||  ಓಗುಂ ಸುವಃ ||೩೧|| ಓಂ ಭೂರ್ಭುವಸ್ಸುವಃ ||೩೨|| ಇತಿ ಸರ್ವಾಂಗೇ || ಯಿತಿ ದ್ವಾತ್ರಿಂಶನ್ಮಾರ್ಜನಂ||
ತಾತ್ಪರ್ಯ : (೧) ಓಂ ದಧಿಕ್ರಾವ್ಣೋ ಅಕಾರಿಷಂ --ಜಯಶೀಲನೂ, ವ್ಯಾಪಕನೂ , ಅನ್ನದಿಂದ ಯುಕ್ತನೂ ಆದ ಅಗ್ನಿದೇವನೇ ದಧಿ-ಹವಿಸ್ಸನ್ನು ;ಕ್ರಾವ್ಣಃ- ತಿನ್ನುವವನಾದ್ದರಿಂದ ಅಗ್ನಿಯು; (ದಧಿ ಎಂದರೆ ಇಲ್ಲಿ ಮೊಸರೆಂದರ್ಥವಲ್ಲ); ನಮಗೆ ಮುಖದಲ್ಲಿ ಬ್ರಹ್ಮ ತೇಜಸ್ಸನ್ನೂ ಧೀರ್ಘಾಯುಷ್ಯವನ್ನೂ ಕೊಡೆಂದು ಪ್ರಾರ್ಥಿಸುತ್ತೇವೆ. (೨;;೪)     ಎಲೈ ಜಲಾಧಿಷ್ಠಾನ ದೇವತೆಗಳಿರಾ ನೀವು ನಮಗೆ ಸುಖ ಸಾಧಕರಾಗಿ ಅನ್ನಕ್ಕೂ ರಮಣೀಯವಾದ ಜ್ಞಾನಕ್ಕೂ ನಮ್ಮನ್ನು ಪಾತ್ರರನ್ನಾಗಿಮಾಡಿರಿ.  ಜನನಿಯು ಮಗುವಿಗೆ ಅಮೃತವನ್ನು ಕೊಟ್ಟು ಕಾಪಾಡುವಂತೆ ನಿಮ್ಮಲ್ಲಿರುವ ಅಮೃತವನ್ನು ನಾವು ಹೊಂದುವಂತೆ ಮಾಡಿ.  ನಿಮ್ಮನ್ನು ಶರಣು ಹೊಂದಿರುತ್ತೇನೆ. ಪುರುಷ ಸಾಮರ್ಥ್ಯವನ್ನು ನಮಗೆ ಕೊಡಿ ||;;|| ; [|||| ಯತ್ಕಿಂಚೇದಂ : ವರುಣನೇ! ಯಾವರೀತಿಯಲ್ಲಿ ಸಂಸಾರದ ಮಾನವರು ನಿನ್ನ ವೃತಾನುಷ್ಠಾನದಲ್ಲಿ ಭ್ರಾಂತರಾಗುತ್ತಾರೋ, ಅದೇಪ್ರಕಾರ ನಾವಾದರೂ ಪ್ರತಿ ದಿನವೂ ಪ್ರಮಾದ ಮಾಡುತ್ತೇವೆ. ||||ಋಗ್ವೇದ :]

||;|| ಎಲೈ ವರುಣನೇ, ದೇವಲೋಕವಾಸಿಯಾದ ನಿನ್ನಲ್ಲಿ ಮನಷ್ಯರಾದ ನಾವುದ್ರೋಹ ಮಾಡುತ್ತಿರುವೆವೋ ಅಥವಾ ನಿನ್ನ ಸಂಬಂಧವಾದ ಧರ್ಮವನ್ನು ನಾಶಮಾಡಿದೆವೋ, ಈಲೋಪಗಳ ದೋಷದಿಂದ ನಮ್ಮನ್ನು ಹಿಂಸಿಸದೆ ಕಾಪಾಡು  . |||| ಪ್ರಕಾಶಮಾನನಾದ ವರುಣನೇ! ವಂಚಕರಾಗಿ ಯಾವ ಕರ್ಮವನ್ನು ನಾಶಪಡಿಸಿದೆವೋ, ಧರ್ಮವಾಗಿ ಎಲ್ಲಿ ವ್ಯವಹರಿಸಲಿಲ್ಲವೋ, ಪರಬ್ರಹ್ಮ ಸ್ವರೂಪವನ್ನೂ, ಧರ್ಮಸ್ವರೂಪವನ್ನೂ ಎಲ್ಲೆಲ್ಲಿ ತಿಳಿಯಲಿಲ್ಲವೋ ಅಂತಹ ಎಲ್ಲಾ ಪಾಪಗಳನ್ನೂ ಪರಿಹರಿಸಿ ನಿನ್ನ ಪ್ರೀತಿ ಪಾತ್ರರನ್ನಾಗಿ ಮಾಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ||||

 (೮)  ಓಂ ಹಿರಣ್ಯವರ್ಣಾಃ ಶುಚಯಃ -ತಾ || ಉದಕದಲ್ಲಿಯೇ ತೇಜೋಮಯನಾಗಿಯೂ , ಪರಿಶುದ್ಧನಾಗಿಯೂ, ಇರುವ ಸೂರ್ಯನು ಹುಟ್ಟಿದನು, ಇಂದ್ರನೂ, ಹುಟ್ಟಿದನು ಈ ಉದಕವೇ ಬಡಬಾಗ್ನಿ, ಜಠರಾಗ್ನಿಗಳನ್ನು ಗರ್ಭದಲ್ಲಿರುವ ಪ್ರಾಣಿಯಂತೆ ತನ್ನಲ್ಲಿ ಧರಿಸಿರತ್ತೆಇಂತಹ ನಾನಾ ರೂಪಗಳನ್ನು ಧರಿಸಿರುವ ಜಲಾಧಿಷ್ಠಾನ ದೇವತೆಗಳಿರಾ ನಮಗೆ ಜ್ಞಾನ ಸುಖವನ್ನುಂಟುಮಾಡಿರಿ.[ಬಂಗಾರದ ಬಣ್ಣದಂತಿರುವ ಹೊಳಪುಳ್ಳವುಗಳೂ, ಶುದ್ಧವಾದವುಗಳೂ, ಪವಿತ್ರವಾದವುಗಳೂ ಆದ ಉದಕಗಳನ್ನು ಹೊತ್ತಿರುವ ಗಗನ ಸಂಚಾರಿಗಳಾದ ಮೇಘಗಳು ನಮಗೆ ಶಖ ಶಾಂತಿಗಳನ್ನು ಕೊಡಲಿ, ಆ ಅಂತರಿಕ್ಷ ಗಾಮಿಗಳಾದ ಆಪಸ್ಸುಗಳಲ್ಲಿ ಸೂರ್ಯನು ಹುಟ್ಟಿರುವನು.  ಉತ್ತಮವಾದ ವರ್ಣಗಳುಳ್ಳ ಆ ಪಯಸ್ಸುಗಳು ತಮ್ಮ ಗರ್ಭದಲ್ಲಿ ವಿದ್ಯತ್ ರೂಪದಲ್ಲಿರುವ ಅಗ್ನಿಯನ್ನು ಧರಿಸಿರುವುವು.  ಆಉದಕಗಳು ನಮಗೆ ಆರೋಗ್ಯವನ್ನ ದಯಪಾಲಿಸಲಿ. ಕನ್ನಡ ಯಜುರ್ವೇದ ೧-೩೩-೧೪೧] 
|||| ಓಂ ಯಾಸಾಗುಂ - ತಾ : ಜಲಾಧಿಷ್ಠಾನ ದೇವತೆಗಳಿಗೆ ದೊರೆಯಾದ ವರುಣನು ಜನಗಳ ಪುಣ್ಯ-ಪಾಪಗಳನ್ನು (ಸತ್ಯ-ಅನೃತ)ವಿವೇಚನೆ ಮಾಡುತ್ತಾ ಯಾವ ಉದಕ ಮಧ್ಯದಲ್ಲಿ ವಾಸವಾಗಿರುವನೋ, ಯಾವವು ಅಮೃತವನ್ನು ಸ್ರವಿಸುತ್ತವೋ, ಪರಿಶುದ್ಧಗಳಾಗಿವೆಯೋ, ಪರಿಶುದ್ಧಗಳಾಗಿ ಮಾಡುತ್ತವೆಯೋ ಅಂತಹ ಜಲಾಧಿಷ್ಠನ ದೇವತಾಶಕ್ತಿಗಳು ನಮಗೆ ಸುಖವನ್ನುಂಟು ಮಾಡಲಿ. [ಮಧ್ಯೆ ಇದ್ದು ವರುಣರಾಜನು ಜನರ ಸತ್ಯವನ್ನೂ ಅಸತ್ಯವನ್ನೂ ಅವಲೋಕಿಸುತ್ತಾಹೋಗುವನೋ ಅವನು  ನಮಗೆ ಆರೋಗ್ಯವನ್ನ ದಯಪಾಲಿಸಲಿ. ಯಜುರ್ವೇದ ೧-೩೩-೧೪೨] 
 ||೧೦|| ಓಂ ಯಾಸಾಂದೇವಾ---ತಾ : ಪರಿಶುದ್ಧವಾದ ಅಮೃತರಸವಾಗಿರುವ (ಗಂಗಾಜಲವನ್ನು) ದೇವತೆಗಳು ಸ್ವರ್ಗದಲ್ಲಿ ಪಾನ ಮಾಡುತ್ತಾರೋ , ಯಾವ ಶುಭ್ರವಾದ ಉದಕಗಳು ಆಕಾಶದಲ್ಲಿದ್ದು ಭೂಮಿಯನ್ನು ಉದಕದಿಂದ ತೋಯಿಸುತ್ತಲಿವೆಯೋ ಅಂತಹ ಜಲಾಭಿಮಾನ ದೇವತೆಗಳೇ ನಮಗೆ ಜ್ಞಾನವನ್ನು ಕೊಡಿ. [ದೇವತೆಗಳು ದ್ಯಲೋಕದಲ್ಲಿ ಯಾವವುಗಳ ಭಕ್ಷಣವನ್ನು ಮಾಡುವರೋ ಯಾವವು ಅಂತರಿಕ್ಷದಲ್ಲಿ ನಾನಾರೀತಿಯಲ್ಲಿ ಉದ್ಭವಿಸುವುವೋ ಅವು ನಮಗೆ ಆರೋಗ್ಯವನ್ನ ದಯಪಾಲಿಸಲಿ.  ಯಜುರ್ವೇದ ೧-೩೩-೧೪೩] 
||೧೧|| ಓಂ ಶಿವೇನ ಮಾ - ತಾ : ವರುಣನೇ! ಸುಖಸ್ವರೂಪವಾದ ನೋಟದಿಂದ ನನ್ನನ್ನು ನೋಡು. ಮಂಗಳಕರವಾದ ನಿನ್ನ ಹಸ್ತದಿಂದ ನನ್ನ ಮೈಯನ್ನು ಸ್ಪರ್ಶಮಾಡು ನಿನ್ನಲ್ಲಿ ವಾಸವಾಗಿರತಕ್ಕ ಅಗ್ನಿಯನ್ನು ಬೇಡಿಕೊಳ್ಳುತ್ತೇನೆ, ನನಗೆ ವರ್ಚಸ್ಸನ್ನೂ, ಶಕ್ತಿಯನ್ನೂ, ಉತ್ಸಾಹವನ್ನೂ ಉಂಟುಮಾಡಿಕೊಡಿ. [ಆಪಸ್ಸುಗಳೇ ಕಲ್ಯಾಣಕಾರಿ ದೃಷ್ಟಿಯಿಂದ ನನ್ನನ್ನು ನೋಡಿರಿ. ಆರೋಗ್ಯಕರವಾದ ಶರೀರದಿಂದ ನನ್ನ ತ್ವಚೆಯನ್ನು ಸ್ಪರ್ಶಸಿರಿ. ತುಪ್ಪದಂತಿರುವ ತೇಜವನ್ನು ಕೊಡುವ ಆಪಸ್ಸುಗಳು ನಮಗೆ ಆರೋಗ್ಯವನ್ನ ದಯಪಾಲಿಸಲಿ. ಯಜುರ್ವೇದ ೧-೩೩-೧೪೪]  ||೧೧|| [ಉಳಿದ ಮಂತ್ರಗಳ ಅರ್ಥ, ಇದೇ ಬಗೆಯ ಪ್ರಾರ್ಥನೆ. ]
. ಅರ್ಘ್ಯ ಪ್ರದಾನ; || ಅರ್ಘ್ಯಂ ದದ್ಯಾತು||  ಪ್ರಾತಃ||
ಮಮ ಸೃತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಯೋಗ್ಯತಾ ಫಲ ಸಿದ್ಧ್ಯರ್ಥಂ  ಮಮೋಪಾತ್ತ ದುರಿತ ಕ್ಷಯ ದ್ವಾರಾ ಶ್ರೀಪರಮೇಶ್ವರ ಪ್ರೀತ್ಯರ್ಥಂ ಪ್ರಾತಃ (ಮಧ್ಯಾಹ್ನ / ಸಾಯಂ ) ಸಂಧ್ಯಾ ಕಾಲಾತಿಕ್ರಮಣ  ದೋಷ ಪರಿಹಾ ರಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರರ್ಘ್ಯ (ಮಧ್ಯಾಹ್ನಸಂಧ್ಯಾರ್ಘ್ಯ / ಸಾಯಂಸಂಧ್ಯಾರ್ಘ್ಯ) ಪ್ರದಾನಮಹಂಕರಿಷ್ಯೆ ||
 ತಾ : ಅರ್ಘ್ಯದ ಉದ್ದೇಶ ಮತ್ತು ಅರ್ಥ :  ಮಂದೇಹರೆಂಬ ರಾಕ್ಷಸರು    ( ಮಂದ+ಈಹ=ಮಂದ ಸ್ವಭಾವ , ದುರಾಶೆ) ಬ್ರಹ್ಮನಿಂದ ವರ ಪಡೆದು ಅದರಂತೆ ಸದಾ ಸೂರ್ಯನೊಡನೆ ಯುದ್ಧ ಮಾಡುತ್ತಿರುತ್ತಾರೆ. ಸೂರ್ಯನ ರಕ್ಷಣೆಗಾಗಿ ಅರವತ್ತು ಸಾವಿರ ವಾಲಿಖಿಲ್ಯ ಋಷಿಗಳು ಅವನ ಸುತ್ತ ನಿಂತು ವೇದ ಮಂತ್ರ ಹೇಳುತ್ತಿರುತ್ತಾರೆ.  ನಾವು ಸೂರ್ಯನಿಗೆ ಗಾಯತ್ರೀ ಮಂತ್ರದಿಂದ ಅರ್ಘ್ಯ ಕೊಟ್ಟಾಗ ಮತ್ತು ಸೂರ್ಯನ ಕಡೆ ಮಂತ್ರಪೂರ್ವಕ ನೀರು ಚಿಮುಕಿಸಿದಾಗ ಅದು ಅಸ್ತ್ರ ರೂಪದಲ್ಲಿ  ರೂಪದಲ್ಲಿ ಸೂರ್ಯ ಮಂಡಲಕ್ಕೆ ಹೋಗಿ ಸೂರ್ಯನ ರಕ್ಷಣೆಗೆ ಸಹಾಯಮಾಡುವುದು. ಇದು ವೇದದಲ್ಲಿರುವ ಕಥೆಯೆಂದು ಹೇಳಿದೆ. [ಆದ್ದರಿಂದ ಅರ್ಘ್ಯಾನಂತರ ಅಸ್ತ್ರೋಪಸಂಹಾರ ಮಾಡಿ  ಗಾಯತ್ರಿಯನ್ನು ಪುನಃ ನಮ್ಮ ಹೃದಯದಲ್ಲಿ ನೆಲೆಗೊಳಿಸಿಕೊಳ್ಳಬೇಕು. ಆದರೆ ಪ್ರಾಯಶ್ಚಿತ್ತಾರ್ಘ್ಯವು ಕಾಲಮೀರಿದ್ದಕ್ಕೆ. ]
||ಉತ್ತಿಷ್ಠ ||ಅಂಜಲಿನಾಜಲಮಾದಾಯ || [ಸೂರ್ಯಾಭಿಮುಖಃ ಕಿಂಚಿತ್‌ಪ್ರಹ್ವಸ್ತಷ್ಠನ್‌ಅಂಗುಷ್ಠವರ್ಜಿತಾಂಜಲಿನಾ ಅಪಃ (ಆಪಃ) ತ್ರಿರೂರ್ಧ್ವಮುತ್ ಕ್ಷಿಪೇತ್ | ಆ: ಪಾಠ ಬೇಧ; ನಿಂತು ಸೂರ್ಯನ ಕಡೆ ತಿರುಗಿ ಅರ್ಘ್ಯ ಕೊಡುವುದು ]
ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||  ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ |ಓಂ ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||  ಯಿತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ||
|| ಅಥಾರ್ಘ್ಯಂ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಂ| ಓಂ ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||  ||| |||| ತ್ರಿ ಪ್ರಧಾನಾರ್ಘ್ಯಂ||
|| ಅಥ ಮಧ್ಯಾಹ್ನೆ ||
ಮಧ್ಯಾಹ್ನ ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯಪೂರ್ವಕ ಮದ್ಯಾಹ್ನಾರ್ಘ್ಯ ಪ್ರದಾನ ಮಹಂ ಕರಿಷ್ಯೆ||ಉತ್ತಿಷ್ಠ ||
||ಪ್ರಾತಃ ಕಾಲವತ್ ಪ್ರಾಯಶ್ಚಿತ ಅರ್ಘ್ಯಂ ದತ್ವಾ ||
|| ಪ್ರಧಾನಾರ್ಘ್ಯಂ ||
ಓಂ ಹಗುಂ ಸಃ ಶುಚಿಷ ದ್ವಸುರಂತರಿಕ್ಷ ಸದ್ಧೋತಾ ವೇದಿಷ ದತಿಥಿರ್ದುರೋಣಸತುನೃಷದ್ವರ ಸದೃತ ಸದ್ವ್ಯೋಮ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತು ||  ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ (ಇದಂ ತೇ ಅರ್ಘ್ಯಂ)  ||||  ಓಂ ಆಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ ಹಿರಣ್ಯಯೇನ ಸವಿತಾ ರಥೇನ ದೇವೋಯಾತಿ ಭುವನಾವಿಪಶ್ಯನ್ || ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||||  ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್| ಶ್ರೀ ಭಾಸ್ಕರಾಯ ನಮಃ | ಇದಂವೋ ಅರ್ಘ್ಯಂ ||||   ಯಿತಿ ಪ್ರಧಾನಾರ್ಘ್ಯಂ||
ತಾ|| |||| ಓಂ ಹಗುಂ ಸಃ ಶ್ಯುಚಿ --ಪರಿಶುದ್ಧವಾದ ಸ್ಥಳಅಂತರಿಕ್ಷ , ಬ್ರಹ್ಮಾಡ ವೆಂಬ ಗೃಹಶ್ರೇಷ್ಠವಾದ ತೀರ್ಥ, ಹೃದಯ ಕಮಲಯಜ್ಞ, ನೀರುಗೋವು, ಪರ್ವತಗಳಲ್ಲಿ ವಾಸಿಸುವ  ಅಗ್ನಿರೂಪನಾದ ಸೂರ್ಯನು ಅನುಗ್ರಹಿಸಲಿ.  |||| ಆಸತ್ಯೇನ - ಅಂತರಿಕ್ಷಮಂಡಲದಲ್ಲಿ ಸತ್ಯರೂಪವಾದ ಸುವರ್ಣ ರಥವನ್ನೇರಿ  ಸಮಸ್ತ ಲೋಕಕ್ಕೂ ಪ್ರಕಾಶ ಉಂಟುಮಾಡಿ ದೇವತೆಗಳನ್ನೂ ಮನುಷ್ಯರನ್ನೂ ತಮ್ಮ ತಮ್ಮ ಕರ್ಮಗಳಲ್ಲಿ ನಿಯಮಿಸುತ್ತಾ ಸಂಚರಿಸುತ್ತಿರುವ  ಸೂರ್ಯ ಭಗವಾನನೇ - ನಿನಗೆ ಈ ಅರ್ಘ್ಯವನ್ನು ಅರ್ಪಿಸುತ್ತೇನೆ. 
|| ಸಾಯಂಕಾಲೇ ||
ಸಾಯಂ ಸಂಧ್ಯಾಕಾಲಾತಿಕ್ರಮಣ ದೋಷ ಪರಿಹಾರಾರ್ಥಂ ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಸಾಯಮರ್ಘ್ಯ ಪ್ರದಾನ ಮಹಂ ಕರಿಷ್ಯೆ || ||ಉತ್ತಿಷ್ಠ ||ಸೂರ್ಯಾಭಿಮುಖಃ ||
ಪ್ರಾತಃಕಾಲವತ್ ಪ್ರಾಯಶ್ಚಿತ್ತಾರ್ಘ್ಯ, ಪ್ರಧಾನಾರ್ಘ್ಯಂದತ್ವಾ ||
|| ಅಥ ತರ್ಪಣ ||
ಗಾಯತ್ರೀಂ ತರ್ಪಯಾಮಿ || ಸಾವಿತ್ರೀಂ ತರ್ಪಯಾಮಿ || ಸರಸ್ವತೀಂ ತರ್ಪಯಾಮಿ ||  ಛಂದರ್ಷೀಂ ತರ್ಪಯಾಮಿ ||ಸಂಧ್ಯಂ ತರ್ಪಯಾಮಿ || ಋಗ್ವೇದಂ ತರ್ಪಯಾಮಿ || ಯಜುರ್ವೇದಂ ತರ್ಪಯಾಮಿ || ಸಾಮವೇದಂ ತರ್ಪಯಾಮಿ || ಯಿತಿ ತರ್ಪಯಿತ್ವಾ ||
ಉದ್ಯಂತ ಮಸ್ತಂ ಯನ್ತಮಾದಿತ್ಯಮಭಿಧ್ಯಾಯನ್ಕುರ್ವನ್ ಬ್ರಾಹ್ಮಣೋ ವಿದ್ವಾನ್ಸಕಲಂ ಭದ್ರಮಶ್ನುತೆSಸಾವಾದಿತ್ಯೋ ಬ್ರಹ್ಮೇತಿ ಬ್ರಹ್ಮೈವ ಸನ್ಬ್ರಹ್ಮಾಪ್ಯೇತಿ ಯ ಏವಂ ವೇದ |||| ಜಲಹಸ್ತಪ್ರದಕ್ಷಿಣಂ ಕೃತ್ವಾ || ಅನೇನ ಪ್ರಾತರ್ ಅರ್ಘ್ಯ ಪ್ರದಾನ ವಿಧಿ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ || ಪೂರ್ವದಾಚಮ್ಯ || ತಾ ||: ಆಸಾವಾದಿತ್ಯೋಬ್ರಹ್ಮ - ನಮಗೆ ಗೋಚರನಾಗಿರುವ ಆದಿತ್ಯನು ಪರಬ್ರಹ್ಮ ಸ್ವರೂಪನು. ಆ ಪರಬ್ರಹ್ಮ ಸ್ವರೂಪನೇ ನಾನಾಗಿರುವೆನು.
ಊರ್ಧ್ವ ಕೇಶಿ ವಿರೂಪಾಕ್ಷೀ ಮಾಂಸ ಶೋಣಿತ ಭಕ್ಷಣೀ | ತಿಷ್ಠದೇವಿ ಶಿಖಾಬದ್ಧೇ ಚಾಮುಂಡೇಹ್ಯಪರಾಜಿತೇ ||  ಯಿತಿ ಶಿಖಾಬಧ್ವಾ ||
ಪ್ರಾತಃ ಸಂಧ್ಯಾ ಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ  ಬ್ರಹ್ಮಾ ಋಷಿಃ | ಗಾಯತ್ರೀ ಛಂದಃ ಸವಿತಾ ದೇವತಾ || 
|| ಮಧ್ಯಾಹ್ನೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ಶಿವಾತ್ಮಕ ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
||ಸಾಯಂಕಾಲೇ || ಓಂ ಅಸ್ಯಶ್ರೀ ಅಸ್ತ್ರೋಪಸಂಹಾರ ಮಂತ್ರಸ್ಯ ವಿಷ್ಣು ಋಷಿಃ | ತ್ರಿಷ್ಟುಪ್ ಛಂದಃ ||ಸವಿತಾ ದೇವತಾ||
ಸೋಹಮರ್ಕ ಪರಂ ಜ್ಯೋತಿ ರರ್ಕಜ್ಯೋತಿ ರಹಂಶಿವಃ || ಆತ್ಮಜ್ಯೋತಿ ರಹಂ ಸೂರ್ಯ ಸರ್ವಜ್ಯೋತಿರಸೋಮಹೋಂ||  ಆ ವಾಯವ್ಯಾ ಯಾ ವಾಯವ್ಯಾ ಯಯಾ ವಾಯವ್ಯಾ ಯಂ ವಾಯವ್ಯಾ | ಔರ್ವಾ ಯಯಾವಾ || (ಪ್ರಾತಃ)ಹರೋಸಿ ಪಾಪ್ಮಾನಂ ಮೇ ವಿದ್ಧಿ|| || ಮದ್ಯಾಹ್ನೇ|| ಉದ್ವರ್ತೋಸಿ ಪಾಪ್ಮಾನಂ ಮೇ ವಿದ್ಧಿ || ಸಾಯಂಕಾಲೇ || ಸಂವರ‍್ತೋಸಿ ಪಾಪ್ಮಾನಂ ಮೇ ವಿದ್ಧಿ ||  ***
ಐಕ್ಯಾನುಸಂಧಾನಂ ;
ಉತ್ತಿಷ್ಠದೇವಿ ಗಂತವ್ಯಂ ಪುನರಾಗಮನಾಯಚ || ಉತ್ತಿಷ್ಠದೇವಿ ಸ್ಥಾತವ್ಯಂ [ಗಾಯತ್ರಿ] ಪ್ರವಿಶ್ಯ ಹೃದಯಂ ಮಮ || : ಇತಿ ಅಂಕುಶ ಮುದ್ರಯಾ ಸೂರ್ಯಮಂಡಲಾತ್ತೇಜ ಆಕೃಷ್ಯ ಸ್ವಾತ್ಮನ್ಯುಪಸಂಹೃತ್ಯ)
ತಾತ್ಪರ್ಯ :- ಎಲೌ ಸಂಧ್ಯಾದೇವಿಯೇ! ನೀನುಎಚ್ಚರಗೊಂಡು ಪ್ರಸನ್ನತೆಯಿಂದ ನನ್ನ ಹೃದಯ ಎಂದರೆ ಸಹಸ್ರಾರ ಕಮಲವನ್ನು ಪ್ರವೇಶಿಸಿ ಸಂತುಷ್ಟಳಾಗಿ ಪನಃ ಅಲ್ಲಿಂದ ಬರುವವಳಾಗು.

ಓಂ ಅಪಸರ್ಪಂತು ಯೇ ಭೂತಾಃ  ಯೇ ಭೂತಾ ಭೂಮಿ ಸಂಸ್ಥಿತಾಃ | ಯೇ ಭೂತಾ ವಿಘ್ನ ಕರ್ತಾರ ಸ್ತೇ ನಶ್ಯಂತಿ ಶಿವಾಜ್ಞಯಾ ||   ಪೃಥಿವ್ಯಾಂ ಮೇರುಪೃಷ್ಠಷಿಃ | ಸುತಲಂ ಛಂದಃ | ಆದಿಕೂರ್ಮೋ ದೇವತಾ | ಆಸನೇ ವಿನಿಯೋಗಃ ಪೃಥ್ವೀ ತ್ವಯಾ ಧೃತಾ ಲೋಕಾ ದೇವೀ ತ್ವಂ ವಿಷ್ಣುನಾ ಧೃತಾ | ತ್ವಂ ಚ ಧಾರಯ ಮಾಂ ದೇವೀ ಪವಿತ್ರಂ ಕುರುಚಾಸನಂ || ಓಂ ಕೂರ್ಮಾಸನಾಯ ನಮಃ ||  ಇತ್ಯಾಸನಭಿಮಂತ್ರ್ಯ ||  ಅಪಕ್ರಾಮಂತು ಭೂತಾದ್ಯಾಃ ಸರ್ವೇ ತೇ ಭೂಮಿ ಭಾರಕಾಃ || ಸರ್ವೇಷಾಮ ವಿರೋಧೇನ  ಬ್ರಹ್ಮಕರ್ಮ ಸಮಾರಭೇತ್  ||  ವಾಮ ಪಾದತಲೇ ನಾಥ ಭೂಮಿಮಾ ಸ್ಫಾಲಯೇ ತ್ತ್ರಿಧಾ | ಸಾರ್ಧ[ಂ]ತಾಲ ತ್ರಯೇಣೈವ ಭೂತಮುಚ್ಛಾಟಯೇದ್ಗುರುಃ ||  ಓಂ ಹ್ರೀಂ ಅಸ್ರಾಯ ನಮಃ || ( ದಕ್ಷಿಣ ಹಸ್ತೇನ ವಾಮಪಾದಾಂಗುಷ್ಠಂ ಗೃಹೀತ್ವಾ ತತ್ಪಾಪಾದ ಪಾರ್ಷ್ಣಿನಾ ಭೂಮಿಂ ತ್ರಿರಾಸ್ಫಾಲ್ಯ|| ಅಥ ಉಪಸ್ಪೃಶ್ಯ||)  ||ಯಿತಿ ಭೂತಮುತ್ಸಾದ್ಯ||  ಓಂ ಹ್ರೀಂ ಪರಮಾತ್ಮಾದ್ಯಶೇಷ ಗುರುಪಾರಂಪರ‍್ಯ ಕ್ರಮೇಣ ಸ್ವಗುರು ಪಾದಾಂಬುಜಂ ಯಾತ್ತಾವತ್ಪಣಾಮಿ|| (ಇತಿ ಪ್ರಣಮ್ಯ ) || ತೀಕ್ಷ್ಣ ದಂಷ್ಟ್ರ ಮಹಾಕಾಯ ಕಲ್ಪಾಂತ ದಹನೋಪಮ || ಭೈರವಾಯ ನಮಸ್ತುಭ್ಯಂ  ಅನುಜ್ಞಾಂ ಧಾತುಮರ್ಹಸಿ|| ( : ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ | ಚಕ್ಷರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಇತಿ ಗುರುಂ ನಮಸ್ಕೃತ್ಯ )
|| ತಾತ್ಪರ್ಯ || ಅಪಸರ್ಪಂತು---ಭೂಮಿಯಲ್ಲಿದ್ದುಕೊಂಡು ವಿಘ್ನವನ್ನುಂಟುಮಾಡವ ಭೂತಗಳು ಪರಮಾತ್ಮನ ಅನುಜ್ಞೆಯಿಂದ ನಾಶ ಹೊಂದಲಿ.||||
|||| ಅಪಕ್ರಾಮಂತು---ಭೂಭಾರನ್ನುಂಟುಮಾತಕ್ಕ ಭೂತದಿಗಳು ಹೊರಟು ಹೋಗಲಿ. ಯಾರಿಗೂ ಇರೋಧವಿಲ್ಲದಂತೆ ನಾನು ಬ್ರಹ್ಮ ಕರ್ಮವನ್ನು ಪ್ರಾರಂಭಿಸುವೆನು. 
|||| ಪೃಥಿವ್ಯಾಂ - ಎಲೌ ಭೂಮಾತೆಯೇ! ನೀನು  ಲೋಕಗಳನ್ನು ಧರಿಸಿರುವೆ . ನಿನ್ನನ್ನು ಪರಮಾತ್ಮನು ಧರಿಸಿರುವನು. ನೀನು, ಪವಿತ್ರ ಆಸನವನ್ನು ಕೊಟ್ಟು , ನನ್ನನ್ನು ಧರಿಸಿಕೊಂಡಿರಬೇಕೆಂದು ಬೇಡುತ್ತೇನೆ.

|| ಓಂ ಗುಂ ಗುರುಭ್ಯೋ ನಮಃ | ಯಿತಿ ಶಿರಸಿ| ಓಂ ಗಂ ಗಣಪತಯೇ ನಮಃ | ಯಿತಿ ದಕ್ಷಿಣ ಬಾಹು ಮೂಲೇ | ಓಂ ದುಂ ದುರ್ಗಾಯನಮಃ |ಯಿತಿ ವಾಮ ಬಾಹು ಮೂಲೇ| ಓಂ ಕ್ಷಂ ಕ್ಷೇತ್ರಪಾಲಾಯ ನಮಃ ||ಯಿತಿ ಜಾನ್ವೋಃ | ಓಂ ಸಂ ಸರಸ್ವತ್ಯೈ ನಮಃ | ಯಿತಿ ನಾಭೋರಧಃ | ಓಂ ಪಂ ಪರಮಾತ್ಮನೇನಮಃ | ಯಿತಿ ಹೃದಯೇ || ಓಂ ಭೂರಿತಿ ಪಾದಯೋಃ | ಓಂ ಭುವರಿತಿ ಜಾನ್ವೋಃ | ಓಂ ಸುವರಿತಿ ಊರ‍್ವಯೋಃ | ಓಂ ಮಹಯಿತಿ ಜಠರೇ | ಓಂ ಜನಃ ಯಿತಿ ಕಂಠೇ | ಓಂ ತಪಃ ಯಿತಿ ಮುಖೇ || ಓಂ ಸತ್ಯಮಿತಿ ಶಿರಸಿ || ಯಿತಿ ವಿನ್ಯಸ್ಯ||
(ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಯಥಾ ಶಕ್ತಿ ಗಾಯತ್ರೀ ಜಪಂ ಕರಿಷ್ಯೇ || ಇತಿ ಸಂಕಲ್ಪ್ಯ ||) 
ಕರಷಡಂಗ ಹೃದಯಾದಿ ನ್ಯಾಸಃ
ಓಂ ವಿಶ್ವಾಮಿತ್ರ ಋಷಿಃ | (ಇತಿ ಶಿರಸಿ) | ದೇವೀ ಗಾಯತ್ರೀ ಛಂದಃ |( ಇತಿ ಮುಖೇ ) ಸವಿತಾ ದೇವತಾ (ಇತಿ ಹೃದಯೇ ) ಓಂ ತತ್ಸವಿತುರ್ಬ್ರಹ್ಮಾತ್ಮನೇ  ಅಂಗುಷ್ಠಿಕಾಭ್ಯಾಂ ನಮಃ || ಓಂ ವರೇಣ್ಯವಿಷ್ಣುವಾತ್ಮನೇ | ತರ್ಜನೀಭ್ಯಾಂ ನಮಃ||  ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಮಧ್ಯಮಾಭ್ಯಾಂ ನಮಃ |\ಓಂ ಧೀಮಹೀ ಈಶ್ವರಾತ್ಮನೇ | ಅನಾಮಿಕಾಭ್ಯಾಂ ನಮಃ ||  ಓಂ ಧಿಯೋ ಯೋ ನಃ ಸದಾಶಿವಾತ್ಮನೇ | ಕನಿಷ್ಠಿಕಾಭ್ಯಾಂ ನಮಃ || ಓಂ ಪ್ರಚೋದಯಾತ್ ಸರ್ವಾತ್ಮನೇ ಕರತಲಕರ ಪೃಷ್ಠಾಭ್ಯಾಂ ನಮಃ | ಯಿತಿ ಕರಷಡಂಗನ್ಯಾಸಃ || ಅಥ ಹೃದಯಾದಿ ನ್ಯಾಸಃ||  ಓಂ ತತ್ಸವಿತುರ್ಬ್ರಹ್ಮಾತ್ಮನೇ  | ಹೃದಯಾಯ ನಮಃ || ಓಂ ವರೇಣ್ಯವಿಷ್ಣುವಾತ್ಮನೇ | ಶಿರಸೇ ಸ್ವಾಹಾ|| ಓಂ ಭರ್ಗೋ ದೇವಸ್ಯ ರುದ್ರಾತ್ಮನೇ | ಶಿಖಾಯೈ ವೌಷಟ್ || ಓಂ ಧೀಮಹೀ ಈಶ್ವರಾತ್ಮನೇ | ಕವಚಾಯ ಹುಂ || ಓಂ ಧಿಯೋ ಯೋ ನಃ ಸದಾಶಿವಾತ್ಮನೇ ನೇತ್ರತ್ರಯಾಯೈ ವೌಷಟ್|| ಓಂ ಪ್ರಚೋದಯಾತ್ ಸರ್ವಾತ್ಮನೇ |ಅಸ್ತ್ರಾಯ  ಫಟ್ || ಯಿತಿ ಹೃದಯಾದಿ ನ್ಯಾಸಃ || ಓಂ ಭೂರ್ಭುವಸ್ಸುವರೋಂ ಇತಿ ದಿಗ್ಬಂಧಃ||
ತಾತ್ಪರ್ಯ : ದೇಹದ ಅಂಗಗಳು ನಿಶ್ಚಲವಾಗಿರುವುದಕ್ಕೂಈದೇಹ ಭಾವವನ್ನು ತ್ಯಜಿಸಿ ಮಂತ್ರಮಯವಾದ ದೇಹವಿರುತ್ತದೆಂದು ಭಾವಿಸಿಕೊಳ್ಳುವುದಕ್ಕೆ ನ್ಯಾಸ ವಿರುವ ತತ್ವವಾಗಿರುವುದು.  ನ್ಯಾಸಎಂದರೆ ಬಚ್ಚಿಡು - ತ್ಯಾಗ ಎಂಬ ಅರ್ಥಗಳಿರುವುವು.. ದಿಗ್ಬಂಧಃ - ಎಂದರೆ ದಿಕ್ಕುಗಳ ಬಂಧನವೆಂದರ್ಥ -ಹೊರಗಿನ ವಿಷಯಗಳಿಗೆ ಮನಸ್ಸು ಕೊಡದಂತೆ ಬಂಧಿಸುವುದು.
 ||ಅಥ ಧ್ಯಾನಂ ||  ಮಂದಾರಾಹ್ವಯ ರೋಚನಾಂ ಜನಜಪಾಖಾ[ಕಾ]ಭೈರ್ಮುಖೈ ರಿಂದು ಮದ್ರತ್ನೋದ್ಯನ್ಮುಕುಟಾಂಶು ಸಂತತ ಚತುರ್ವಿಂಶಾರ್ಣ ಚಿತ್ರಾತನೂಃ[ತನುಃ] | ಅಂಭೋಜೇರಿದರಾಹ್ವಯಾ ಗುಣಕಪಾಲಾಭ್ಯಾಂಚ  ಪಾಶಾಂಕುಶೇಷ್ಟಾ ಭೀತಿರ್ದಧತೀ ಭವೋದ್ಭವ ಭಯ ಪ್ರೋತ್ಸಾರಿಣೀ ತಾರಿಣೀ ||
ಅರ್ಥ: [ಗಾಯತ್ರಿಗೆ ಐದು ಮುಖಗಳು] ಅವು ಮಂದಾರ ಹೂವಿನಂತೆಬಿಳೀ ಬಣ್ಣದ್ದು, ರೋಚನದಂತೆ ಅರಿಸಿನದ್ದು, ಅಂಜನದಂತೆ ಕಪ್ಪು ಬಣ್ಣದ್ದು, ಆಕಾಶದಂತೆ ನೀಲಿ ಬಣ್ಣದ್ದು, ಆಗಿವೆ.  ಚಂದ್ರಕಲೆಯಿಂದ ಮತ್ತು ವಿವಿಧ ರತ್ನಗಳಿಂದ ಪ್ರಕಾಶಿಸುವ ಕಿರೀಟವಿದೆ.  ಅವುಗಳ ಪ್ರಭೆಯಲ್ಲಿ ಪ್ರಕಾಶಿಸುವ ಗಾಯತ್ರೀ ದೇವಿಯ ದೇಹವು ಗಾಯತ್ರೀ ಮಂತ್ರ ಅಕ್ಷರಾತ್ಮಕವಾಗಿದೆ.  ಅವಳ ಎರಡು ಕೈಗಳಲ್ಲಿ  ಕಮಲಗಳು, ಎರಡು ಕೈಗಳಲ್ಲಿ ವರದ ಅಭಯ ಮುದ್ರೆ ಮತ್ತು ಉಳಿದ ಆರು ಕೈಗಳಲ್ಲಿ ಚಕ್ರ, ಶಂಖ, ಹಗ್ಗ, ಕಪಾಲ ಮತ್ತು ಅಂಕುಶಗಳಿವೆ.  ಈಗಾಯತ್ರಿಯು ನಮ್ಮ ಸಂಸಾರ ಭಯವನ್ನು ನೀಗುವವಳಾಗಲಿ. [ಈ ಧ್ಯಾನ ಶ್ಲೋಕವು ಪ್ರಪಂಚ ಸಾರ ಗ್ರಂಥದಿಂದ ತೆಗೆದುಕೊಂಡಿದೆ]  (ವಾ.ಕಾರಂತರ ಗಾಯತ್ರೀ ಜಪ ಗ್ರಂಥದಿಂದ)
 (ಅಥವಾ : )
ಮುಕ್ತಾವಿದ್ರುಮ ಹೇಮನೀಲಧವಲಚ್ಛಾಯೈ ರ್ಮುಖೈ ಸ್ತ್ರೀಕ್ಷಣೈಃ| ಯುಕ್ತಾ ಮಿಂದುಕಲಾನಿಬದ್ಧ ಮುಕುಟಾಂ ತತ್ವಾರ್ಥ ವರ್ಣಾ ತ್ಮಿಕಾಂ ||  ಗಾಯತ್ರೀಂ  ವರದಾಭಯಾಂಕುಶಕಶಾಃ ಶುಬ್ರಂ ಕಪಾಲಂ ಗುಣಂ(ಗದಾಂ)| ಶಂಖಂ ಚಕ್ರಮಥಾರವಿಂದಯುಗಲಂ ಹಸ್ತೈರ್ವಹಂತೀಂ ಭಜೇ ||ಯಿತಿ ದ್ಯಾನಂ ||
ತಾತ್ಪರ್ಯ :- ಮುತ್ತು, ಹವಳ, ನೀಲಮಣಿ, ಸ್ಪಟಿಕಗಳ ಕಾಂತಿಯಂತೆ ಮುಖವುಳ್ಳ , ಮೂರು ಕಣ್ಣುಗಳುಳ್ಳ , ಚಂದ್ರಕಳೆಗಳಿಂದ ಕೂಡಿದ , ರತ್ನಖಚಿತವಾದ ಕಿರೀಟಗಳುಳ್ಳ , ಪರಮ ತತ್ವಾರ್ಥಗಳನ್ನು ಪ್ರತಿಪಾದಿಸುವ, ತೇಜೋರೂಪಳಾದ, ಮತ್ತು ಓಂಕಾರ ಮುಂತಾದ ವರ್ಣ(ಅಕ್ಷರ) ರೂಪಳಾಗಿರುವ, ಅಂಕುಶ, ಶೂಲ, ಕಶಾ, ಗದಾ, ಕಪಾಲ, ಶಂಖ, ಚಕ್ರ, ಕಮಲದ ಮೊಗ್ಗುಗಳನ್ನು ಹಸ್ತದಲ್ಲಿ ಧರಿಸಿರುವ, ಉಪಾಸಕರಿಗೆ ವರವನ್ನೂ, ಅಭಯವನ್ನೂ ಕೊಟ್ಟು ಕಾಪಾಡುವ ವರದಾಭಯ ಹಸ್ತಗಳುಳ್ಳ ಗಾಯತ್ರೀದೇವಿಯ ದಿವ್ಯಸುಂದರಮೂರ್ತಿ ಸ್ವರೂಪವನ್ನು  ನಾನು ಧ್ಯಾನ ಮಾಡುತ್ತೇನೆ. 
ಓಮಿತ್ಯೇಕಾಕ್ಷರಂ ಬ್ರಹ್ಮ | ಅಗ್ನಿರ್ದೇವತಾ | ಬ್ರಹ್ಮ ಯಿತ್ಯಾರ್ಷಂ | ಗಾಯತ್ರಂ ಛಂದಂ | ಪರಮಾತ್ಮಂ ಸರೂಪಂ | ಸಾಯುಜ್ಯಂ ವಿನಿಯೋಗಂ ||||   ಆಯಾತು ವರದಾ ದೇವೀ ಅಕ್ಷರಂ ಬ್ರಹ್ಮ ಸಮ್ಮಿತಂ ಗಾಯತ್ರೀಂ ಛಂದಸಾಂ ಮಾತೇದಂ ಬ್ರಹ್ಮ ಜುಷಸ್ವ ಮೇ ಯದಹ್ನಾತ್ಕುರುತೇ ಪಾಪಂ ತದಹ್ನಾತ್ ಪ್ರತಿಮುಚ್ಯತೇ || ಯದ್ರಾತ್ರಿಯಾತ್ಕುರುತೇ ಪಾಪಂ ತದ್ರಾತ್ರಿಯಾತ್ಪ್ರತಿಮುಚ್ಯತೇ || ಸರ್ವ ವರ್ಣೇ ಮಹಾದೇವಿ ಸಂಧ್ಯಾವಿದ್ಯೇ ಸರಸ್ವತೀ ||
ಅಜರೇ ಅಮರೇ ದೇವಿ ಸರ್ವದೇವಿ ನಮೋಸ್ತುತೇ ||  ಓಜೋSಸಿ | ಸಹೋSಸಿ | ಬಲಮಸಿ | ಭ್ರಾಜೋSಸಿ | ದೇವಾನಾಂ  ಧಾಮನಾಮಾಸಿ | ವಿಶ್ವಮಸಿ ವಿಶ್ವಾಯುಃ ಸರ್ವಮಸಿ ಸರ್ವಾಯುರಭಿಭುರೋಂ |
 || ತಾತ್ಪರ್ಯ || ಓಂ ಎಂಬ ಏಕಾಕ್ಷರವು ಪರಬ್ರಹ್ಮವು; ಇದಕ್ಕೆ ಅಗ್ನಿಯು ದೇವತೆಯು ; ಚತುರ್ಮುಖ ಬ್ರಹ್ಮ ಋಷಿ; ಗಾಯತ್ರೀ ಛಂದಸ್ಸು; ಪರಮಾತ್ಮ ಸ್ವರೂಪವು ಮೋಕ್ಷದಲ್ಲಿ ವಿನಿಯೋಗವು.  ಮೋಕ್ಷವನ್ನು ಕೊಡುವವಳು. ||||  [ಗಾಯತ್ರಿಯು ಛಂದಸ್ಸಿಗೆಲ್ಲಾ ಮಾತೃ ಸ್ವರೂಪಳು] ವೇದಮಾತೆ.  ನಾಶರಹಿತಳು ಪರಮಾತ್ಮ ಸ್ಡರೂಪಳು. ಹಗಲು ಮತ್ತು ರಾತ್ರಿ ಮಾಡಿದ ಪಾಪಗಳನ್ನು ನಾಶಮಾಡುವವಳು. ಸರ್ವ  ಅಕ್ಷರಗಳ [ಸರ್ವವರ್ಣೇ] ಸ್ವರೂಪಳು.  ಸಂಧ್ಯಾವಿದ್ಯೇಯೂ, ಸರಸ್ವತಿಯೂ ಎಂದರೆ ಮೋಕ್ಷಪ್ರದಾಯಕಳು. ||||  [ಅಜರಳು, ಅಮರಳು- ಹುಟ್ಟು ಸಾವು ಇಲ್ಲದವಳು; ಎಲ್ಲಾದೇವಿಯರನ್ನೂ ಒಳಗೊಂಡವಳು ] ; ವೇದ ಮಾತೆಯಾದ ಗಾಯತ್ರಿಯೇ ನೀನು ಓಜೋಸಿ-ಶಕ್ತಿ ರೂಪಳಾಗಿರುವೆ ; ಸಹೋಸಿ- ಶತ್ರುನಿಗ್ರಹ ಶಕ್ತಿಯಾಗಿರುವೆ ; ಬಲಮಸಿ -ಇಂದ್ರಿಯಗಳ ಸ್ಥೂಲಶಕ್ತಿ [ಸಾಮರ್ಥ್ಯ] ರೂಪಳಾಗಿರುವೆ; ಭ್ರಾಜೋಸಿ-ಜ್ಞಾನ ತೇಜೋ ರೂಪಳಾಗಿರುವೆ.  ದೇವಾನಾಂ - ಇಂದ್ರಾದಿ ದೇವತೆಗಳಿಗೆಧಾಮನಾಮಾಸಿ -ನಿವಾಸಸ್ಥಾನವಾಗಿರುವೆ ; ವಿಶ್ವಮಸಿ - ಸರ್ವ ಜಗದ ಸ್ವರೂಪಳಾಗಿರುವೆವಿಶ್ವಾಯುಃ - ವಿಶ್ವಕ್ಕೆ ಆಯುಷ್ಯ (ಸ್ಥಿತಿ) ಸ್ವರೂಪಳಾಗಿದ್ದೀಯೆ ; ಸರ‍್ವಮಸಿ ಸರ‍್ವಾಯುಃ - ಸರ್ವವೂ ನೀನೆ, ಅದರ ಸ್ಥಿತಿರೂಪಳೂ ನೀನೆ ; ಅಭಿಭೂಃ -ಪ್ರಣವಸ್ವರೂಪಳಾಗಿರುವೆ. ಮುಂದೆ : ಗಾಯತ್ರೀಂ ಆವಾಹಯಾಮಿ -ಗಾಯತ್ರೀದೇವಿಯನ್ನು ಆವಾಹನೆ ಮಾಡಿಕೊಳ್ಳುತ್ತೇನೆ ;(ನನ್ನಲ್ಲಿ ತುಂಬಿಕೊಳ್ಳುತ್ತೇನೆ) ; ಇದೇ ರೀತಿ ಇತರೆ ಆವಾಹನೆಗಳು.
ಗಾಯತ್ರೀಮಾವಾಹಯಾಮಿ |ಸಾವಿತ್ರೀಮಾ ವಾಹಯಾಮಿ | ಸರಸ್ವತೀಮಾವಾಹಯಾಮಿ | ಛಂದರ್ಷೀನಾವಹಯಾಮಿ | ಶ್ರೀಯಮಾವಾಹಯಾಮಿ |
|ಗಾಯತ್ರ್ಯಾ ಗಾಯತ್ರೀ ಛಂದೋ | ವಿಶ್ವಾಮಿತ್ರ ಋಷಿಃ | ಸವಿತಾದೇವತಾSಗ್ನಿರ್ಮುಖಂ | ಬ್ರಹ್ಮಾಶಿರೋ | ವಿಷ್ಣುರ್ಹೃದಯಂ | ರುದ್ರ ಶಿಖಾ | ಪ್ರಥವೀ ಯೋನಿಃ | ಪ್ರಾಣಾಪಾನ ವ್ಯಾನೋದಾನ ಸಮಾನಾ ಸಪ್ರಾಣಾ ರಕ್ತವರ್ಣ(ಪ್ರಾತಃ): ಶ್ವೇತ ವರ್ಣ (ಮಧ್ಯಾಹ್ನೇ): ಕೃಷ್ಣ ವರ್ಣ (ಸಾಯಂಕಾಲೇ) ಸಾಂಖ್ಯಾಯನ ಸಗೋತ್ರಾ ಗಾಯತ್ರೀ ಚತುರ್ವಿಗುಂ ಶತ್ಯಕ್ಷರಾ ತ್ರಿಪದಾ ಷಟ್ಕುಕ್ಷಿಃ | ಪಂಚ ಶೀರ್ಷೋಪನಯನೇ ವಿನಿಯೋಗಃ |
ತಾತ್ಪರ್ಯ: ಗಾಯತ್ರ್ಯಾ ಗಾಯತ್ರೀ ಛಂದೋ - ಪದಗಳಲ್ಲಿನ ಅಕ್ಷರಗಳ ಎಣಿಕೆಯ ಮೇಲೆ ಛಂದಸ್ಸು ನಿರ್ಣಯವಾಗುತ್ತದೆ.   ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್ [೨೪ ಅಕ್ಷರಗಳ ಮೂರು ಸಾಲಿನ ]ಈ ಮಂತ್ರಕ್ಕೆ ಗಾಯತ್ರೀ ಛಂದಸ್ಸೆಂದು ಹೆಸರು. ವಿಶ್ವಾಮಿತ್ರ ಋಷಿಃ : ಈ ಮಂತ್ರವನ್ನು ಪ್ರಚಾರಕ್ಕೆ ತಂದವರು. [ಮಂತ್ರವನ್ನು ಧ್ಯಾನದಲ್ಲಿ ಕಂಡವರು - ದೃಷ್ಟಾರರು.]  ಸವಿತಾ ದೇವತಾ ; [ಸೂರ್ಯನಿಗೆ ಸವಿತೃ ವೆಂದು ಹೆಸರು] ಸೂರ್ಯನಲ್ಲಿ ಅಡಗಿರುವ  ಪರಾಶಕ್ತಿ ಯೇ ದೇವತೆ.   ಬ್ರಹ್ಮಾಶಿರೋ---ಸಪ್ರಾಣಾ ಗಾಯತ್ರೀದೇವಿಗೆ ಶಿರಸ್ಸಿನಲ್ಲಿ ಚತುರ್ಮುಖ ಬ್ರಹ್ಮ ; ಮುಖದಲ್ಲಿ ಅಗ್ನಿ; ಹೃದಯದಲ್ಲಿ ವಿಷ್ಣು; ಶಿಖೆಯಲ್ಲಿ ರುದ್ರ; ಪೃಥಿವಿಯೇಆವಾಸ ಸ್ಥಳ; [ಜಗತ್ತಿನ] ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ಈ ಪಂಚಪ್ರಾಣವಾಯುಗಳೇ [ಅವಳ ಪ್ರಾಣ]. ಜ್ಷಾನಮಾರ್ಗವೇ ಅವಳ ಗೋತ್ರ; ಈಮಂತ್ರವು ಇಪ್ಪತ್ನಾಲ್ಕು ಅಕ್ಷರವುಳ್ಳದ್ದು; ಮೂರು ಪಾದಗಳುಳ್ಳದ್ದುರು ಉದರ-ಹೋಟ್ಟೆ ಎಂದರೆ ನಾಲ್ಕುದಿಕ್ಕುಗಳು , ಮೇಲೆ ಮತ್ತು ಕೆಳಗೆ ಆರುದಿಕ್ಕುಗಳು ಅವಳ ಉದರಸ್ಥಾನ ಎಂದರೆ ಬ್ರಹ್ಮಾಂಡ ಸ್ವರೂಪಳು ಅಥವಾ ಕುಂಡಲಿನಿಯಲ್ಲಿರುವ ಆರು ಚಕ್ರಗಳು ಅವಳ ಹೊಟ್ಟೆ ; ಐದು ಶಿರಗಳು - ಆದಿತ್ಯ, ಅಂಬಿಕಾ, ವಿಷ್ಣು, ಗಣನಾಥ, ಮಹೇಶ್ವರ, ಈ ಪಂಚ ಬ್ರಹ್ಮರೇ ಅವಳ ಐದು  ಶಿರಸ್ಸುಗಳು. [ಅಥವಾ ಪಂಚ ಭೂತಗಳೇ ಆಕಾಶ, ಅಗ್ನಿ, ವಾಯು, ಜಲ, ಭೂಮಿ ಇವು ಅವಳ ಶಿರಸ್ಸುಗಳು.] ಪುನಃ ಪ್ರಾಣಾಯಾಮ ಮಾಡಬೇಕೆಂದು ಹೇಳಿದೆ. [- ಮುಂದೆ ಪ್ರಾಣಾಯಾಮ ಮಂತ್ರವೂ ಇದೆ;   ಓಂ ಭೂಃ | ಓಂ ಭುವಃ | ಓಗುಂ ಸುವಃ | ಓಂ ಮಹಃ | ಓಂ ಜನಃ | ಓಂ ತಪಃ | ಓಗುಂ ಸತ್ಯಂ ೧ನೇ ಪಾದ;   ಓಂ ಭೂರ್ಭುವಸ್ಸುವಃ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್ ||  ೨ನೇ ಪಾದ ;    ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಂ| ೩ನೇಪಾದ ;
[ಓಂ ಭೂಃ -ಇತಿ ಪಾದಯೋಃ | ಓಂ ಭುವಃ - ಇತಿ ಜಾನುನೋ | ಓಗ್ಂ ಸುವಃ - ಇತ್ಯೋರ್ವೋಃ | ಓಂ ಮಹಃ - ಇತಿ ಜಠರೇ | ಓಂ ಜನಃ -ಇತಿ ಕಂಠೇ | ಓಂ ತಪಃ - ಇತಿ ಮುಖೇ | ಓಗ್ ಂ ಸತ್ಯಂ - ಇತಿ ಶಿರಸಿ | ಇತಿ ವಿನ್ಯಸ್ಯ | ಓಂ ಭೂರ್ಭುವಸ್ಸುವಃ | ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋ ದಯಾತ್||.]
|| ಅಥ ಮುದ್ರ ||  
ಸುಮುಖಂ ಸಂಪುಟಂ ಚೈವ ವಿತತಂ ವಿಸೃತಂ ತಥಾ | ದ್ವಿಮುಖಂ  ತ್ರಿಮುಖಂ ಚೈವ ಚತುಃ ಪಂಚ ಮುಖಂ ತಥಾ || ಷಣ್ಮುಖೋSಧೋಮುಖಂ ಚೈವ ವ್ಯಾಪಕಾಂಜಲಿಕಂ ತಥಾ |
 ಶಕಟಂ ಯಮ ಪಾಶಂ ಚ ಗ್ರಥಿತಂ [ಚೋ]ಸನ್ಮುಖೋನ್ಮುಖಂ ||  
 ಪ್ರಲಂಬಂ ಮುಷ್ಟಿಕಂ ಚೈವ ಮತ್ಸ್ಯ ಕೂರ್ಮ ವರಾಹಕಂ |
ಸಿಂಹಾ ಕ್ರಾಂತಂ ಮಹಾ ಕ್ರಾಂತಂ ಮುದ್ಗರಂ ಪಲ್ಲವಂ ತಥಾ ||
ಯೇತಾ ಮುದ್ರಾ ಚತುರ್ವಿಂಶಾ ಗಾಯತ್ರ್ಯಾ ಸುಪ್ರತಿಷ್ಠಿತಃ ||
ಯಿತಿ ಮುದ್ರಾ ನಜಾನಾತಿ ಗಾಯತ್ರಿಯಾ ನಿಷ್ಫಲಂ ಭವೇತ್ ||  ಯಿತಿ ಮುದ್ರಃ || 
|| ಶಾಪವಿಮೋಚನಂ ||
ಓಂ ಅಸ್ಯಶ್ರೀ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಂತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪ ವಿಮೋಚನ ಮಹಾಮಂತ್ರಸ್ಯ || ಬ್ರಹ್ಮ ನಾರಸಿಂಹ ಮಹಾರುದ್ರ ಋಷಯಃ || ಗಾಯತ್ರೀ ತ್ರಿಷ್ಟುಪ್ ಅನುಷ್ಟುಪ್ ಛಂದಃ || ಸಮಸ್ತ ಶಾಪ ವಿಮೋಚನ ಮಹಾಮಾತ್ರೋ(ಮಂತ್ರೋ) ದೇವತಾ | ಸಾಂ ಬೀಜಂ | ಸೀಂ ಶಕ್ತಿಃ | ಸೂಂ ಕೀಲಕಂ | ಮಮ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಾತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪ ವಿಮೋಚನಾರ್ಥೇ ಜಫೇ ವಿನಿಯೋಗಃ || ಓಂ ಸ್ರಾಂ ಹೃದಯಾಯ ನಮಃ | ಓಂ ಸ್ರೀಂ ಶರಸೇ ಸ್ವಾಹಾ | ಸ್ರೂಂ ಶಿಖಾಯೈ ವೌಷಟ್ | ಓಂ ಸ್ರೈಂ ಕವಚಾಯ ಹುಂ | ಓಂ ಸ್ರೌಂ ನೇತ್ರತ್ರಯಾಯೈ ವೌಷಟ್ || ಓಂ  ಸ್ರಃ ಅಸ್ತ್ರಾಯ ಫಟ್ || ಯಿತಿ ದಿಗ್ಬಂಧಃ || ಆಥ ಧ್ಯಾನಂ || ಅಜಪಾದಿ ಸಮಸ್ತೇಷಾಂ ಸರ್ವಮಂತ್ರಾದ್ಯಶೇಷತಃ || ಗಾಯತ್ರ್ಯಾದಿ ಸಮಸ್ತೇಷಾಂ ಮಂತ್ರಯಂತ್ತ್ರಾದಿ ತಂತ್ರಭಿಃ || ಸಬಾಹ್ಯಾಭ್ಯಂತರ ಸ್ವಾಮಿನ್ ಸರ್ವ ಶಾಪಾನ್ವಿನಾಶಯ || ಮೋಚನಾಕುರು ತೀವ್ರೇಣಾ ಬ್ರಹ್ಮಾ ವಿಷ್ಣು ಹರಾದಿಷು || ಮಹಾಋಷೀಣಾಂಚ ಕಥಂ ಶಾಪಾನ್ ಸರ್ವಾಯ ಮೋಚಯ ||  ಅಥ ಪಂಚೋಪಚಾರಃ || ಓಂ ಲಂ ಪೃಥಿವ್ಯಾತ್ಮಿಕಾಯೈ ನಮಃ | ಗಂಧಂ ಸಮರ್ಪಯಾಮಿ | ಓಂ ನಮಹಂ (ಹಂ)  ಆಕಾಶಾತ್ಮಿಕಾಯೈ ನಮಃ | ಪುಷ್ಪಂ ಸಮರ್ಪಯಾಮಿ |ಓಂ ಯಂ ವಾಯುವ್ಯಾತ್ಮಿಕಾಯೈ ನಮಃ | ಧೂಪಂ ಸಮರ್ಪಯಾಮಿ | ಓಂ ರಂ ತೇಜೋಮಯಾತ್ಮಿಕಾಯೈ ನಮಃ | ದೀಪಂ ಸಮರ್ಪಯಾಮಿ | ಓಂ ಅಂ ಅಮೃತಾತ್ಮಿಕಾಯೈ ನಮಃ | ನೈವೇದ್ಯಂ ಸಮರ್ಪಯಾಮಿ | ಸಂ ಸೋಮಾತ್ಮಿಕಾಯೈ ನಮಃ | ತಾಂಬೂಲಂ ಸಮರ್ಪಯಾಮಿ || ಯಿತಿ ಪಂಚೋಪಚಾರ ಪೂಜಾಂ ಸಮರ್ಪಯಾಮಿ ||
ಓಂ ನಮೋ ಭಗವತೇ ಸರ್ವಸಾಕ್ಷಿಣೀ ಸಕಲ ಮೃತ್ಯುಂಜಿತ ಸ್ಥೂಲ ಸೂಕ್ಷ್ಮ ಕಾರಣ ದೇಹ ತ್ರಯ ಬ್ರಹ್ಮ ನಾರಸಿಂಹ ತ್ರ್ಯಂಬಕ ಮಹಾರುದ್ರ ಸಮಸ್ತ ವೇದ ಗಾಯತ್ರೀ ಸಾವಿತ್ರೀ ಸರಸ್ವತ್ಯಾದಿ ಸಪ್ತ ಕೋಟಿ ಮಹಾಮಂತ್ರ ಸ್ಥಿತ ಭವ ಭವ್ಯ ಸಮಸ್ತ ಶಾಪಾನ್ ರಂ ರಂ ಜ್ವಲ ಜ್ವಲ  ಪ್ರಜ್ವಲ ಪ್ರಜ್ವಲ ಹನ ಹನ ದಹ ದಹ ಪಚ ಪಚ ಭಸ್ಮೀಕುರು ಕುರು ನಾಶಯ ನಾಶಯ  ಕೃಪಯ  ಕೃಪಾಂ ದೇ ಕೃಪಾಂ ಕುರು ಯೇಹಿ ಯೇಹಿ ಸ್ವಾಹಾ ||||  ಭದ್ರಂ ಕರ್ಣೇಭಿ ಶೃಣುಯಾಮದೇವಾಃ ಭದ್ರಂ ಪಶ್ಯೇಮ ಕ್ಷಭಿಃ ರ‍್ಯಜತ್ರಾಃ  ಸ್ಥಿರೇ ರಂಗೈಃ ಸುಷ್ಟುವಾಗುಂ ಸಸ್ತನೂಭಿಃ | ವ್ಯಸೇಮ ದೇವ ಹಿತಂ ಯದಾಯುಃ |||| ಹಗುಂ ಸಃ ಶುಚಿಷದ್ವಸುರಂತರಿಕ್ಷ ಸದ್ಧೋತಾ ವೇದಿಷದತಿಥಿರ್ದುರೋಣಸತುನೃಷದ್ವರ ಸದೃತ ಸದ್ವ್ಯೋಮ ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತು |||| ಯಿತಿ ಶಾಪ ವಿಮೋಚನಂ ||  (ಗಾಯತ್ರೀ ಮಂತ್ರಕ್ಕೆ ಗೌತಮ ಮನಿಗಳ ಶಾಪವಿದ್ದು ಅದರ ಪರಿಹಾರಕ್ಕೆ ಶಾಪ ವಿಮೋಚನಾ ಕ್ರಿಯೆ ಹೇಳಿದೆ )
|| ಅಥ ಜಪಂ  (ಗಾಯತ್ರೀ)||
[ಋಗ್ವೇದ ಮಂಡಲ ೩. ಸೂಕ್ತ ೬೨. ಶ್ಲೋಕ ೧೦.] ಗಾಯತ್ರೀ ಮಂತ್ರದ ತಾತ್ಪರ್ಯ ಮತ್ತು ಅರ್ಥ :
(೧) ಸಾಯಣಾಚಾರ್ಯರ ಭಾಷ್ಯ :- ಯಃ-ಯಾವ ಪರಮಾತ್ಮನು ; ನಃ-ನಮ್ಮ ; ಧಿಯುಃ-ಬುದ್ಧಿವೃತ್ತಿಗಳನ್ನು ; ಪ್ರಚೋದಯಾತ್ -ಪ್ರೇರಿಸುತ್ತಲಿರುವನೋ ; ತತ್-ಅಂಥಾ ; ದೇವಸ್ಯ- ಪ್ರಕಾಶಮಾನವಾದ ; ಸವಿತುಃ- ಸರ್ವಾಂತರ್ಯಾಮಿಯಾಗಿಯೂ , ಸರ್ವಪ್ರೇರಕನಾಗಿಯೂ, ಜಗತ್ ಸ್ರಷ್ಟೃವಾಗಿಯೂ ಇರುವ ಪರಮೇಶ್ವರನ ಆತ್ಮ ಭೂತವಾದಂಥಾ ; ವರೇಣಿಯಂ - ಶ್ರೇಷ್ಠವಾದ , ಸರ್ವಪ್ರಾಣಿಗಳಿಂದಲೂ ಉಪಾಸ್ಯವಾದ ; ಭರ್ಗಃ-ಅವಿದ್ಯಾ ತತ್ಕಾರ್ಯ ನಾಶಕವಾದ, ಸ್ವಯಂ ಪ್ರಕಾಶವಾದ, ಪರಮಾತ್ಮ ಸಂಬಂಧಿಯಾದ ತೇಜಸ್ಸನ್ನು ಧೀಮಹಿ-ಧ್ಯಾನ ಮಾಡುತ್ತೇನೆ.
(೨) ಸೂರ್ಯಪರವಾದ ಭಾಷ್ಯ :-ಯಃ - ಯವ ಸೂರ್ಯರೂಪನಾದ ಈಶ್ವರನು, ನಃ-ನಮ್ಮ , ಧಿಯಃ - ಬುದ್ಧಿವೃತ್ತಿಗಳನ್ನು , ಪ್ರಚೋದಯಾತ್ -ಪ್ರೇರಿಸುತ್ತಾನೋ , ತತ್ - ಅಂಥಾ , ದೇವಸ್ಯ -  ಪ್ರಕಾಶಮಾನನಾದ , ಸವಿತುಃ - ಸಕಲಪ್ರಾಣಿಗಳಿಗೂ ಸುಖಹೇತುವಾದ ವೃಷ್ಠಿಯನ್ನುಂಟುಮಾಡುವ , ವರೇಣಿಯಂ-ಶ್ರೇಷ್ಠನಾದ, ಭರ್ಗಃ-ತೇಜೋರೂಪನಾದ ಸೂರ್ಯನನ್ನು ಧೀಮಹಿ-ಧ್ಯಾನಮಾಡುತ್ತೇನೆ.
[ ಯಾವ ಸೂರ್ಯರೂಪನಾದ ಈಶ್ವರನು,ನಮ್ಮ ಬುದ್ಧಿ ವೃತ್ತಿಗಳನ್ನು ಪ್ರೇರಿಸುತ್ತಾನೋ ಅಂಥಾ   ಪ್ರಕಾಶಮಾನನಾದ ಸಕಲಪ್ರಾಣಿಗಳಿಗೂ ಸುಖಹೇತು (ಕಾರಣ) ವಾದ ವೃಷ್ಠಿ(ಮಳೆ)ಯನ್ನುಂಟುಮಾಡುವ , ಶ್ರೇಷ್ಠನಾದ, ತೇಜೋರೂಪನಾದ ಸೂರ್ಯನನ್ನು ಧ್ಯಾನಮಾಡುತ್ತೇನೆ. ]
(೩) ಸೂತ ಸಂಹಿತೆಯಲ್ಲಿರುವ ಭಾಷ್ಯ :-ಯಃ - ಅಂತರ್ಯಾಮಿ ರೂಪದಿಂದಿರತಕ್ಕ ಯಾವ; ದೇವಸ್ಯ-ಸ್ವಯಂ ಪ್ರಕಾಶನಾಗಿಯೂ, ಚಿದ್ರೂಪನಾಗಿಯೂ, ಸರ್ವಪ್ರಾಣಿಗಳ ಹೃದಯಕಮಲದಲ್ಲಿ ಇರುವವನಾಗಿಯೂ, ಅಂತಃಕರಣ ಸಾಕ್ಷಿಯಾಗಿಯೂ ಇರುವ ಆತ್ಮನು, ನಃ-ನಮ್ಮಧಿಯ ಃ-ಬುದ್ಧಿಗಳನ್ನು , ಪ್ರಚೋದಯಾತ್ -ಧರ್ಮಜ್ಞಾನಾದಿಗಳಲ್ಲಿ ಪ್ರೇರಿಸುತ್ತಲಿರುವನೋ, ತತ್-ಅಂಥ; ದೇವಸ್ಯ- ಸ್ವಯಂ ಪ್ರಕಾಶನಾದ, ಸವಿತುಃ-ಸ್ವರೂಪ ಪ್ರೇರಕನಾದ ಯಾವ ಆತ್ಮನ; ವರೇಣಿಯಂ- ಸರ್ವ ಪ್ರಾಣಿಗಳಿಂದ ಸೇವಿಸಲು ಯೋಗ್ಯವಾದ; ಭರ್ಗಃ- ಸರ್ವ ಪಾಪ ನಿವರ್ತಕವಾದ, ತನ್ನ ಮಾಯಾಶಕ್ತಿಯಿಂದ ಶಿವ,ವಿಷ್ನ್ವಾದಿ ರೂಪಗಳನ್ನು ಹೊಂದಿರುವ, ಸೂರ್ಯಮಂಡಲದಲ್ಲಿದ್ದು, ಸೂರ್ಯದೇವತೆಗೂ ಪ್ರೇರಕನಾಗಿರತಕ್ಕ ಮತ್ತು ವಾಕ್ಕಿಗೂ ಮನಸ್ಸಿಗೂ ಅಗೋಚರನಾಗಿರುವ  ಪರಬ್ರಹ್ಮ ವಸ್ತುವನ್ನು ; ಧೀಮಹಿ-ಅಂಥಾ ಬ್ರಹ್ಮವೇ ನಾನೆಂಬುದಾಗಿ ಧ್ಯಾನ ಮಾಡುತ್ತೇನೆ.
(೪) ಧರ್ಮಶಾಸ್ತ್ರಗಳ ಚರಿತ್ರೆ ಬರೆದ ಶ್ರೀ ಪಿ.ವಿ. ಕಾಣೆಯವರ ಸುಲಭ ಅರ್ಥ :- ನಮ್ಮ ಬುದ್ಧಿಯನ್ನು [ ಕಾರ್ಯಗಳನ್ನು] ಪ್ರೇರಿಸಲಿಕ್ಕಿರುವ ಸವಿತೃ ದೇವನ ಮಹತ್ತಾದ ತೇಜಸ್ಸನ್ನು [ಮಹಿಮೆಯನ್ನು] ನಾವು ಧ್ಯಾನಿಸುತ್ತೇವೆ.
(೫) ವ್ಯಾಸರು ಬರೆದ ಅರ್ಥ :-ಯಾವ ಸವಿತೃದೇವನು ನಮ್ಮ ಬುದ್ಧಿಯನ್ನು ತತ್ವ ಜ್ಞಾನದಕಡೆಗೆ ಪ್ರೇರಿಸುತ್ತಾನೋ ಆ ಪರಮಾತ್ಮನ ಶ್ರೇಷ್ಠವಾದ ಅಜ್ಞಾನ ನಾಶಕ ತೇಜಸ್ಸನ್ನು ನಾವು ಧ್ಯಾನ ಮಾಡುತ್ತೇವೆ
(೬) ಸ್ವಾಮಿ ಸಚ್ಚಿದಾನಂದ ಸರಸ್ವತಿಯವರು ಕೊಟ್ಟ ಅರ್ಥ (ಹೊಳೆನರಸಿಪುರದವರು -ಗೀತಾ ಉಪನ್ಯಾಸದಲ್ಲಿ) :-ಜಗತ್ಕಾರಣನಾದ ಪರಮಾತ್ಮನ ತೇಜಸ್ಸನ್ನು ನಾವು ದ್ಯಾನ ಮಾಡುತ್ತೇವೆ.  ಅವನು ನಮ್ಮ ಬುದ್ಧಿಯನ್ನು ಪ್ರೇರಣೆ ಮಾಡಲಿ.
(೭)  (ತತ್) ಜಗತ್ ಕರ್ತೃವಾದ (ಸವಿತುಃ),ಹೃದಯಾಕಾಶದಲ್ಲಿ ಸೂರ್ಯ ನಂತಿರುವ (ವರೇಣ್ಯಂ) ಅಜ್ಞಾನವನ್ನು ನಾಶಮಾಡುವ (ಭಗಃ ದೇವಸ್ಯ)ದೇವರ ತೇಜಸ್ಸನ್ನು (ಧೀಮಹಿ)ದ್ಯಾನ ಮಾಡುತ್ತೇನೆ.  (ಧಿಯೋ ಯೋನಃ ) ಆತನು ನಮ್ಮ ಧೀಶಕ್ತಿಯನ್ನು (ಪ್ರಚೋದಯಾತ್) ಪ್ರಚೋದಿಸಲಿ. (ವಾ.ಕಾರಂತ)
(೮)ವಿವಿಧ ಅರ್ಥಗಳ ಸಂಗ್ರಹ :  ತತ್- ೧,.ಅದು ; ,ಪರ ಬ್ರಹ್ಮ , ಸವಿತುಃ - ೧,ಸೂರ್ಯನು ; , ಸರ್ವೇಶ್ವರನು ವರೇಣ್ಯಂ- ಶ್ರೇಷ್ಠವಾದ ಭರ್ಗಃ -೧, ತೇಜಸ್ಸು (ಆದ) ೨, ಅವಿದ್ಯೆಯನ್ನು ನಾಶಗೊಳಿಸಿ ಜ್ಞಾನ ಕೊಡುವ ಮಹಿಮೆ (ಆದ) ದೇವಸ್ಯ - ದೇವನು, ಜ್ಞಾನರೂಪನು, (ಆದ) ; ಧೀಮಹಿ- (ಅವನನ್ನು) ನಾವು ಧ್ಯಾನ ಮಾಡುತ್ತೇವೆಧಿಯಃ- ೧. ಬುದ್ಧಿ , ೨. ಸದ್ಬುದ್ಧಿ, , ದೇವರ ಕಡೆಗೆ ಪ್ರೇರಿಸುವ ಧೀಶಕ್ತಿ (ಯನ್ನು) ; ಯಃ - ಯಾವ ಆ ತೇಜಸ್ಸು ; ನಃ - ನಮ್ಮ (ಧಿಯಃ -ಬುದ್ಧಿಯನ್ನು) ; ಪ್ರಚೋದಯಾತ್ - ಪ್ರಚೋದಿಸಲಿ ಪ್ರೇರಿಸಲಿ.
[ಸಚ್ಚಿದಾನಂದ ಸರಸ್ವತಿಯವರು ಕೊಟ್ಟಿರವ ಅರ್ಥ (೬) ಸರಳವೂ , ಸುಂದರವೂ, ಧ್ಯಾನಕ್ಕೆ ಅನುಕೂಲವೂ ಆಗಿದೆ. ] (ಗಾಯತ್ರೀ ಜಪ ಮಂತ್ರದಲ್ಲಿ ಎರಡನೆಯ ಓಂ ಕಾರವನ್ನು ಬ್ರಹ್ಮಚಾರಿಗಳೂ,ಗೃಹಸ್ತರೂ ಸೇರಿಸಿಕೊಳ್ಳಬಾರದೆಂದು ಕೆಲವರು ಹೇಳುತ್ತಾರೆ.  ಸೇರಿಸಿ ಜಪ ಮಾಡಿದರೆ ಮಕ್ಕಳಾಗುವುದಿಲ್ಲವೆಂಬ ಮಾತಿದೆ.)

ಓಂ ಭೂರ್ಭುವಸ್ಸುವಃ | (ಓಂ) ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ || ||  ** ಯಿತಿ ಜಪಂ ||
|| ಯೇವಮಷ್ಟ ಸಹಸ್ರ ಮಷ್ಟ ಶತಂ ದಶವಾರಂ ವಾ ಯಥಾಶಕ್ತಿ ಜಪಿತ್ವಾ || ಗಾಯತ್ರ್ಯಾ ಮಂತ್ರೇಣ ದಶಾಂಶ ಅರ್ಘ್ಯಂ  (?) || (೧೦೦೮;೧೦೮;೧೦ ಅಥವಾ ಶಕ್ಯಾನಸಾರ ಜಪಮಾಡುವುದುಜಪಮಾಡಿದ ಹತ್ತನೇ ಒಂದುಬಾಗದಷ್ಟು ಅರ್ಘ್ಯ ಕೊಡುವುದು)

||ಉತ್ತರ ಮುದ್ರೆ ||
ಸುರಭಿ ಜ್ಞಾನ ಚಕ್ರಾಚ ಯೋನಿಃ ಕೂರ್ಮೋ ಥ ಪಂಕಜಂ| ಲಿಂಗಂನಿರ‍್ಯಾಣ ಮುದ್ರಾಚ ಅಷ್ಟಮುದ್ರಾ ಪ್ರಕೀರ್ತಿತಾ ಃ ||ಯಿತಿ ಉತ್ತರ ಮುದ್ರ || ಪೂರ್ವವತ್ ಕರಷಡಂಗಧ್ಯಾನಂ ತಂ ಕೃತ್ವಾ || ಓಂ ಭೂರ್ಭುವಸ್ಸುವರೋಂ ಇತಿ ದಿಗ್ವಿಮೋಕಃ ||

ಗಾಯತ್ರೀಮುದ್ವಾಹಯಾಮಿ |ಸಾವಿತ್ರೀಮದ್ವಾಹಯಾಮಿ | ಸರಸ್ವತೀಮುದ್ವಾಹಯಾಮಿ | ಛಂದರ್ಷೀನುದ್ವಾಹಯಾಮಿ | ಶ್ರೀಯಮುದ್ವಾ ಹಯಾಮಿ|| [ ಗಾಯತ್ರೀಮುದ್ವಾಸಯಾಮಿ |ಸಾವಿತ್ರೀಮದ್ವಾಸಯಾಮಿ | ಸರಸ್ವತೀಮುದ್ವಾಸಯಾಮಿ | ಛಂದರ್ಷೀನುದ್ವಾಸಯಾಮಿ | ಶ್ರೀಯಮುದ್ವಾ ಸಯಾಮಿ ] || ಯಿತಿ ಉದ್ವಾಸ್ಯ||
ಮಿತ್ರ(ಸೂರ್ಯ) ಮತ್ತು ವರಣ ಉಪಸ್ಥಾನಂ
(ಪ್ರಾತಃ :ಅಥೋತ್ಥಾಯ ಪ್ರಾಙ್ಮುಖಃಸೂರ್ಯಮುಪತಿಷ್ಠತೇ -ಸೂರ್ಯೋಪಸ್ಥಾನಂ-ಪೂರ್ವಾಭಿಮುಖವಾಗಿನಿಂತು *)   ಓಂ ಮಿತ್ರಸ್ಯ ಚರ್ಷಣೀ ಧೃತಃ | ಶ್ರವೋ ದೇವಸ್ಯ ಸಾನಸಿಂ | ಸತ್ಯಂ ಚಿತ್ರ ಶ್ರವಸ್ತಮಂ |  (ಓಂ ಮಿತ್ರೋ ಜನಾನ್ಯಾತಯತಿ ಪ್ರಜಾನನ್ಮಿತ್ರೋ ದಾಧಾರ ಪ್ರೃಥಿವೀ ಮುತದ್ಯಾಂ| ಮಿತ್ರಃ ಕೃಷ್ಟೀರ ನಿಮಿಷಾಭಿಚಷ್ಟೇ ಸತ್ಯಾಯ ಹವ್ಯಂ ಘೃತವದ್ವಿಧೇಮ ||||  ಓಂ ಪ್ರಸಮಿತ್ರ ಮರ‍್ತೋ ಅಸ್ತು ಪ್ರಯಸ್ವಾ ನ್ಯಸ್ತ ಆದಿತ್ಯಾ(ತ್ಯ)ಶಿಕ್ಷತಿ ವ್ರತೇನ | ನ ಹನ್ಯತೇ ನಜೀಯತೇ ತ್ಪೋ[ತ್ವೋ]ತೋ ನೈನಮಗುಂ[ಹೋ]  ಅಶ್ನೋತ್ಯಂತಿ ತೋನ ದೂರಾತ್ |||| ಓಂ ಉದ್ವಯಂ ತಮಸಸ್ಪರಿ ಪಶ್ಯಂತೋ  ಜ್ಯೋತಿರುತ್ತರಂ | ದೇವಂ ದೇವತ್ರಾ ಸೂರ್ಯ ಮಗನ್ಮ ಜ್ಯೋತಿರುತ್ತಮಂ ||||  ಓಂ ಉದುತ್ಯಂ  ಜಾತವೇದಸಂ ದೇವಂ ವಹಂತಿ ಕೇತವಃ ದೃಶೇ ವಿಶ್ವಾಯ ಸೂರ್ಯಂ |||| ಓಂ ಚಿತ್ರಂ ದೇವಾ ನಾಮುದಗಾದನೀಕಂ  ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ || ಆಪ್ರಾದ್ಯಾವಾ ಪೃಥವೀ ಅಂತರಿಕ್ಷಗುಂ  ಸೂರ್ಯ ಆತ್ಮ (ಆತ್ಮಾ)ಜಗತಸ್ತ ಸ್ಥುಷಶ್ಚ |||| ಯಿತಿ ಷಡ್ಭಿಃ ಸೂರ್ಯಮುಪಸ್ಥಾಯ ||ದಿಶ ಉಪತಿಷ್ಠತೇ ||
        ತಾತ್ಪರ್ಯ :-(ಶ್ಲೋಕ ೧-೨)ಅಹರಭಿ (ಭ) ಮಾನ ದೇವತೆಯಾಗಿ ಪ್ರಾಣಿಗಳನ್ನು ರಕ್ಷಿಸತಕ್ಕ ದೇವ ಶ್ರೇಷ್ಠನಾದ, ಸೂರ್ಯ ಭಗವಂತನ ಭಜನಯೋಗ್ಯವಾದ ಆಶ್ಚರ್ಯವನ್ನೂ, ಉಂಟುಮಾಡುವ ಯಶಸ್ಸನ್ನೂ, ಸ್ತೋತ್ರಮಾಡುತ್ತೇನೆ. ಸೂರ್ಯ ಭಗವಂತನು ಪ್ರಾಣಿಗಳನ್ನು ಕರ್ಮಾನುಸಾರವಾಗಿ ನಿಯಮಿಸುತ್ತಾ ಭೂಮ್ಯಾಕಾಶಗಳನ್ನು ಧರಿಸಿ ಪ್ರಾಣಿಗಳನ್ನು ಜಾಗರೂಕನಾಗಿ ಎಲ್ಲಾಕಡೆಯಲ್ಲಿಯೂ ಪ್ರಕಾಶ ಪಡಿಸುತ್ತಾನೆ.  ಇಂತಹ ಸತ್ಯಾತ್ಮಕನಿಗೆ ಅಹುತಿಗಾಗಿ ಘೃತಯುಕ್ತವಾದ ಚರುವನ್ನು ಸಮರ್ಪಿಸೋಣ. ||೧/೨|| ಎಲೈ ಸೂರ್ಯ ಭಗವಂತನೇ ನಿನ್ನ ಸಂಬಂಧವಾದ ಕರ್ಮಾನಷ್ಠಾನ ಮಾಡಲು ಯಾವನು ಸಮರ್ಥನೋ ಅಂತಹ ಅಧಿಕಾರಿಯು ನಿನ್ನಿಂದ ರಕ್ಷಿತನಾಗುತ್ತಾನೆ.  ಇವನನ್ನು ಯಾರೂ ಸಂಹರಿಸಲಾರರು. ರೋಗಾದಿಗಳು ಪೀಡಿಸಲಾರವು, ಶತ್ರು ಗಳು ತಿರಸ್ಕರಿಸಲಾರರು, ಪಾಪಗಳು ಸೇರಲೇ ಆರವು.||||  ಉಪಾಸಕರದ ನಾವು ಅಜ್ಞಾನಾಂಧಕಾರಕ್ಕೆ ಸಂಬಂಧವಿಲ್ಲದ ದೇವತೆಗಳೊಳಗೆ ಪ್ರಕಾಶಮಾನವಾದ ಸೂರ್ಯಭಗವಂತನನ್ನು ದರ್ಶನ ಮಾಡಿ ಶ್ರೇಷ್ಠವಾದ, ಆದಿತ್ಯ ಜ್ಯೋತಿ ಸ್ವರೂಪನಾದ ಸಾಯುಜ್ಯವನ್ನು ಹೊಂದುತ್ತೇವೆ.  |||| ಹೆಗ್ಗುರುತಾದ ಸೂರ್ಯ ಕಿರಣಗಳು ಪ್ರಾಣಿಗಳ ದರ್ಶನಕ್ಕೋಸ್ಕರ ಸೂರ್ಯ ಭಗವಂತನನ್ನು ಅಂತರಿಕ್ಷದ ಮೇಲ್ಭಾಗಕ್ಕೆ ಒಯ್ಯುತ್ತಲಿವೆ. ||||  ದೇವತೆಗಳ ಸಮೂಹ ರೂಪನಾದ,  ಸೂರ್ಯ , ವರುಣನ, ಮತ್ತು ಅಗ್ನಿಯ ಚಕ್ಷುಸ್ಸಾಗಿ ಆಶ್ಚರ್ಯಕರವಾಗಿರುವ ಸೂರ್ಯಮಂಡಲವು ಉದಯಿಸಿ ಭೂಮ್ಯಾಕಾಶಗಳಲ್ಲಿ ಎಲ್ಲೆಲ್ಲಿಯೂ ತನ್ನ ಬೆಳಕಿನಿಂದ ತುಂಬಿತು. ಈ ಮಂಡಲದೊಳಗಿರುವ  ಸೂರ್ಯ ಪರಮಾತ್ಮನು ಚರಾಚರ ರೂಪವಾದ ಜಗತ್ತಿಗೆ ಆತ್ಮ ಸ್ವರೂಪನಾಗಿರುವನು. ದೇವತೆಗಳಿಗೆ ಹಿತವಾದ ಚಕ್ಷುರೂಪನಾದ ಸೂರ್ಯನು ತೇಜಸ್ಸನ್ನುಂಟು ಮಾಡಲಿ.||||
  

 || ಅಥ ಮದ್ಯಾಹ್ನೇ ||
ದಾತಾರಂ ತರ್ಪಯಾಮಿ |||| ಆರ್ಯಮಣಂ ತರ್ಪಯಾಮಿ |||| ಮಿತ್ರ ತರ್ಪಯಾಮಿ ಂ  |||| ವರುಣಂ ತರ್ಪಯಾಮಿ  |||| ಅಂಶುಂ ತರ್ಪಯಾಮಿ |||| ಭಗಂ ತರ್ಪಯಾಮಿ |||| ಇಂದ್ರಂ ತರ್ಪಯಾಮಿ |||| ವಿವಸ್ವಂತಂ ತರ್ಪಯಾಮಿ |||| ಪೂಷಾಣಂ  ತರ್ಪಯಾಮಿ |||| ಪರ್ಜನ್ಯಂ ತರ್ಪಯಾಮಿ  ||೧೦|| ತ್ವಷ್ಠಾರಂ ತರ್ಪಯಾಮಿ ||೧೧|| ವಿಷ್ಣುಂ ತರ್ಪಯಾಮಿ ||೧೨|| ಯಿತಿ ತರ್ಪಯಿತ್ವಾ ||
ಸೂರ್ಯಾಯ ಪುಷ್ಪಾಣೀ ದತ್ವಾ||ಊರ್ಧ್ವಬಾಹುರಾಯತಾಕ್ಷಃ ಸೂರ್ಯಮುಪ ತಿಷ್ಠತೇ ||
|| ಓಂ ಉದ್ವಯಂ ತಮಸಸ್ಪರಿ ಪಶ್ಯಂತೋ  ಜ್ಯೋತಿರುತ್ತರಂ | ದೇವಂ ದೇವತ್ರಾ ಸೂರ್ಯ ಮಗನ್ಮಜ್ಯೋತಿರುತ್ತಮಂ  |||| ಓಂ ಉದುತ್ಯಂ  ಜಾತವೇದಸಂ ದೇವಂ ವಹಂತಿ ಕೇತವಃ ದೃಶೇ ವಿಶ್ವಾಯ ಸೂರ್ಯಂ  |||| ಓಂ ಚಿತ್ರಂ ದೇವಾ ನಾಮುದಗಾದನೀಕಂ  ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ || ಆಪ್ರಾದ್ಯಾವಾ ಪೃಥವೀ ಅಂತರಿಕ್ಷಗುಂ  ಸೂರ್ಯ ಆತ್ಮ ಜಗತಸ್ತ ಸ್ಥು ಷಶ್ಚ |||| ಓಂ ತಚ್ಚಕ್ಷುರ್ದೇವಹಿತಂ ಪುರಸ್ತಾಚ್ಛು| ಕ್ರಮಚ್ಚರತು | ಪಶ್ಯೇಮ ಶರದಃ ಶತಂ ಜೀವೇಮ ಶರದಃ ಶತಂ  ನಂದಾಮ ಶರದಃ ಶತಂ ಮೋದಾಮ ಶರದಃ ಶತಂ | ಭವಾಮಿ ಶರದಃ ಶತಗುಂ ಶೃಣುವಾಮ ಶರದಃಶತಂ ಪ್ರಬ್ರವಾಮ ಶರದಃ ಶತಮಜೀತಾಃ ಸ್ಯಾಮ ಶರದಃ ಶತಂ  ಜ್ಯೋಕ್ಚ ಸೂರ್ಯಂ ದೃಶೇ |||| ಓಂ ಯ ಉದಗಾನ್ಮ ಹತೋರ್ಣವಾ ದ್ವಿಬ್ರಾಜಮಾನಃ ಸರಿರಸ್ಯ (ಸಲಿಲಸ್ಯೆ *) ಮಧ್ಯಾತ್ಸಮಾ ವೃಷಭೋ ಲೋಹಿತಾಕ್ಷಃ ಸೂರ‍್ಯೋವಿಪಶ್ಚಿನ್ಮನಸಾ ಪುನಾತು |||| ಯಿತಿ ಸೂರ್ಯಮುಪಸ್ಥಾಯ || ದಿಶ ಉಪತಿಷ್ಠತೇ ||  
ತಾತ್ಪರ್ಯ :- ಉಪಾಸಕರದ ನಾವು ಅಜ್ಞಾನಾಂಧಕಾರಕ್ಕೆ ಸಂಬಂಧವಿಲ್ಲದ ದೇವತೆಗಳೊಳಗೆ ಪ್ರಕಾಶಮಾನವಾದ ಸೂರ್ಯಭಗವಂತನನ್ನು ದರ್ಶನ ಮಾಡಿ ಶ್ರೇಷ್ಠವಾದ, ಆದಿತ್ಯ ಜ್ಯೋತಿ ಸ್ವರೂಪನಾದ ಸಾಯುಜ್ಯವನ್ನು ಹೊಂದುತ್ತೇವೆ.  |||| ಹೆಗ್ಗುರುತಾದ ಸೂರ್ಯ ಕಿರಣಗಳು ಪ್ರಾಣಿಗಳ ದರ್ಶನಕ್ಕೋಸ್ಕರ ಸೂರ್ಯ ಭಗವಂತನನ್ನು ಅಂತರಿಕ್ಷದ ಮೇಲ್ಭಾಗಕ್ಕೆ ಒಯ್ಯುತ್ತಲಿವೆ. ||||  ಮಿತ್ರನಿಗೂ, ವರುಣನಿಗೂ, ಅಗ್ನಿಗೂ, ನೇತ್ರ ಸ್ವರೂಪವಾದ ಆಶ್ಚರ್ಯಕರವಾದ, ದೇವತೆಗಳ ಸೈನ್ಯವು ಹುಟ್ಟಿತು. |||| ದೇವತೆಗಳಿಗೆ ಇಷ್ಟನಾಗಿ, ನೇತ್ರ ಪ್ರಾಯನಾಗಿ, ಪೂರ್ವದಿಕ್ಕಿನಿಂದ ಸಂಚರಿಸುವ ಶುದ್ಧ ಸ್ವರೂಪನಾದ, ಸೂರ್ಯ ಭಗವಂತನನ್ನು ನೂರು ಸಂವತ್ಸರ ದರ್ಶನ ಮಾಡುವೆವು ; ನೂರು ಸಂವತ್ಸರ ಬದುಕುವೆವು ಆನಂದವನ್ನು ಹೊಂದುವೆವು ; ಸಂತುಷ್ಟಿಗೊಳ್ಳುವೆವು ; ಅಭಿವೃದ್ಧಿಯನ್ನು ಹೊಂದುವೆವು ; ಶುಭವಾರ್ತೆಗಳನ್ನು ಕೇಳುವೆವು ; ಇಷ್ಟ ವಚನಗಳನ್ನೇ ನುಡಿಯುವೆವು ; ಅಜೇಯರಾಗುವೆವು ; ಸೂರ್ಯಾತ್ಮಕವಾದ ಪರತರ ಜ್ಯೋತಿಯನ್ನು ದರ್ಶಿಸಲು ಅಪೇಕ್ಷಿಸುವೆವು. ||||  ವಿಸ್ತಾರವಾದ ಸಮುದ್ರದಲ್ಲಿ ಉದ್ಭವಿಸಿದ ಜಲಮಧ್ಯದಲ್ಲಿ ಹೊಳೆಯುತ್ತಿರುವ, ಕೆಂಪಾದ, ಕಿರಣವುಳ್ಳವನಾದ , ಜ್ಞಾನರೂಪನಾದ, ಸೂರ್ಯಭಗವಂತನು ನನ್ನನ್ನು ಉದ್ಧಾರ ಮಾಡಲಿ. ||||

|| ಅಥ ಸಾಯಂಕಾಲೇ ||ವರುಣಮುಪತಿಷ್ಠತೇ || (ಉಪಸ್ಥಾನಂ -ಪಶ್ಚಿಮಾಭಿಮುಖವಾಗಿನಿಂತು *)
ಓಂ ಇಮಮ್ಮೇ ವರುಣ ಶ್ರುಧಿ ಹವಾ (ಶ್ರುಧೀ ಹವಮದ್ಯಾ ಚ**) ಮಧ್ಯಾ ಚ ಮೃಡಯ | ತ್ವಾಮವಸ್ಯು ರಾ ಚಕೇ ||||  ಓಂ ತತ್ವಯಾಮೀ ಬ್ರಹ್ಮಣಾ ವಂದಮಾನಸ್ತ ದಾಶಾಸ್ತೇ ಯಜಮಾನೋ ಹವಿರ್ಬಿಃ|| ಅಹೇಡ ಮಾನೋ ವರುಣೇ ಹಬೋಧ್ಯುರುಶಗುಂ ]ರಶಗುಂ]  ಸಮಾನ ಆಯುಃ ಪ್ರಮೋಷಿ[ಃ]  |||| ಯಿತಿ ದ್ವಾಭ್ಯಾಂ ವರುಣಮುಪಸ್ಥಾಯ|| [ಯತ್ಕಿಂಚೇದಂ ವರುಣದೈವ್ಯೇ ಜನೇಭಿದ್ರೋಹಂ ಮನುಷ್ಯಾಶ್ಚರಾಮಸಿ| ಅಚಿತ್ತೀಯತ್ತವ ಧರ‍್ಮಾಯು ಯೋಪಿಮಾ ಮಾನಸ್ತಸ್ಮಾ ದೇನಸೋದೇವ ರೀರಿಷಃ | ಕಿತವಾಸೋ ಯದ್ರಿರಿ ಪುರ‍್ನದಿವಿ ಯದ್ವಾಘಾ ಸತ್ಯಮುತಯನ್ನ ವಿದ್ಮ | ಸರ‍್ವಾತಾವಿಷ್ಯ ಶಿಥಿರೇವ ದೇವಾ ಥಾತೇಸ್ಯಾಮವರುಣ ಪ್ರಿಯಾಸಃ || ಈ ಮಂತ್ರಗಳನ್ನೂ ಸೇರಿಸುತ್ತಾರೆ**]
ತಾತ್ಪರ್ಯ :- ( ವರುಣನೇ! ನನ್ನ ಆಹ್ವಾನವನ್ನು ಅವಧರಿಸು. ಇಂದು ನನ್ನನ್ನು ಸಂತೋಷ ಗೊಳಿಸು.  ನನ್ನ ರಕ್ಷಣೆಗಾಗಿ ನಾನು ನಿನ್ನನ್ನು ಕರೆಯುತ್ತೇನೆ. ||||  ಋಗ್ವೇದ)  ಎಲೈ ವರುಣನೇ, ನಿನ್ನನ್ನು ಶರುಣು ಹೊಂದಿರುವೆನು. ನನ್ನ ಪ್ರಾರ್ಥನೆಯನ್ನು ಲಾಲಿಸಿ, ನನಗೆ ಅಮೃತ ಸುಖವನ್ನುಂಟುಮಾಡುವವನಾಗು. ಎಲೈ ವರಣನೇ, ನಾನು ವೇದ ಮಂತ್ರದಿಂದ ವಂದಿಸಿ ನಿನ್ನನ್ನು ಶರಣ್ಯನನ್ನಾಗಿಹೊಂದುವೆನು. ಯಜ್ಞ ಕರ್ತನು ಹವಿದ್ರವ್ಯಗಳಿಂದ ತೃಪ್ತಿಪಡಿಸುತ್ತಾ ಸುಖವನ್ನು ಬಯಸುತ್ತಿರುವನು. ನನ್ನ ಪ್ರಾರ್ಥನೆಯನ್ನು ಅನಾದರಣೆ ಮಾಡದೆ ಬಹು ಮಂತ್ರಗಳಿಂದ ಹೊಗಳಿಸಿಕೊಳ್ಳುವ ನೀನು ಪೂರ್ಣಾಯು ರ್ಯೋಗವನ್ನು ಅನುಗ್ರಹಿಸಿ ಕಾಪಾಡು. ||೧/೨|| ಪ್ರಕಾಶಮಾನನಾದ ವರುಣನೇ ನಿನ್ನುದ್ದೇಶಿಸಿ ಪ್ರಕೃಷ್ಟವಾದ ಕರ್ಮವನ್ನಾದರೋ ಅಜ್ಞರಂತೆ ಪ್ರತಿ ದಿನವೂ ಆಲೋಚಿಸತ್ತೇವೆಯೇ ಹೊರತು ಸರಿಯಾಗಿ ಅನುಷ್ಟಿಸುವುದಿಲ್ಲ. ಎಲೈ ವರುಣನೇ, ದೇವಲೋಕವಾಸಿಯಾದ ನಿನ್ನಲ್ಲಿ ಮನಷ್ಯರಾದ ನಾವುದ್ರೋಹ ಮಾಡುತ್ತಿರುವೆವೋ ಅಥವಾ ನಿನ್ನ ಸಂಬಂಧವಾದ ಧರ್ಮವನ್ನು ನಾಶಮಾಡಿದೆವೋ, ಈಲೋಪಗಳ ದೋಷದಿಂದ ನಮ್ಮನ್ನು ಹಿಂಸಿಸದೆ ಕಾಪಾಡು  . |||| ಪ್ರಕಾಶಮಾನನಾದ ವರುಣನೇ! ವಂಚಕರಾಗಿ ಯಾವ ಕರ್ಮವನ್ನು ನಾಶಪಡಿಸಿದೆವೋ, ಧರ್ಮವಾಗಿ ಎಲ್ಲಿ ವ್ಯವಹರಿಸಲಿಲ್ಲವೋ, ಪರಬ್ರಹ್ಮ ಸ್ವರೂಪವನ್ನೂ, ಧರ್ಮಸ್ವರೂಪವನ್ನೂ ಎಲ್ಲೆಲ್ಲಿ ತಿಳಿಯಲಿಲ್ಲವೋ ಅಂತಹ ಎಲ್ಲಾ ಪಾಪಗಳನ್ನೂ ಪರಿಹರಿಸಿ ನಿನ್ನ ಪ್ರೀತಿ ಪಾತ್ರರನ್ನಾಗಿ ಮಾಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ||||
ಸರ್ವದೇವ ನಮಸ್ಕಾರಂ  || ಅಭಿವಾದನಂ ||
|| ಪ್ರಾತಃ ||
ಓಂನಮಃ ಸಂಧ್ಯಾಯೈ ನಮಃ || ಓಂ ನಮೋ ಮಿತ್ರಾಯೈ ನಮಃ || ಓಂ ನಮೋ ವರುಣಾಯ ನಮಃ || ಓಂ ನಮೋ ದೇವೇಭ್ಯೋ ನಮಃ || ಓಂ ನಮಃ ಪಿತೃಭ್ಯೋ ನಮಃ || ಓಂ ನಮಃ ಪ್ರಾಚ್ಚ್ಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮೋ ದಕ್ಷಿಣಾಯೈ   ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ ಪ್ರತೀಚ್ಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | ಉದೀಚ್ಯೈ  ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | ಊರ್ಧ್ವಾಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ |   ಅಧರಾಯೈ ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ ಅವಾಂತರಾಯೈ  ದಿಶೇ ಯಾಶ್ಚ ದೆವತಾ  ಏತಸ್ಯಾಂ ಪ್ರತಿವಸಂತೇತಾಭ್ಯಶ್ಚ  ನಮೋ ನಮಃ | | *ನಮೋ ನಮೋ ಗಂಗಾಯಮುನೇ ಯೋರ್ಮಧ್ಯೇ ಯೇವಸಂತಿ | ತೇ ಮೇ ಪ್ರಸನ್ನಾತ್ಮಾನಃ ಚಿರಂಜೀವಿತಂ ವರ್ಧಯಂತಿ *|    ಗಂಗಾಯಮುನಯೋರ‍್ಮುನಿಭ್ಯಶ್ಚ ನಮೋನಮೋ ಗಂಗಾಯಮುನಯೋ ರ‍್ಮುನಿಭ್ಯಶ್ಚ ನಮೋನಮಃ || ನಮೋ ಬ್ರಹ್ಮಣೇ ನಮೋಸ್ತ್ವಗ್ನಯೇ ನಮಃ ಪೃಥಿವೈ    ನಮಃ ಓಷದೀಭ್ಯಃ | ನಮೋ ವಾಚೇ ನಮೋ ವಾಚಸ್ಪತಯೇ ನಮೋವಿಷ್ಣವೇ ಬೃಹತೇ ಕರೋಮಿ |||| ಭದ್ರಶ್ನೋ ಅಪಿವಾತಯಾಮನಃ|| ಓಂ ಶಾಂತಿಃ ಶಾಂತಿಃ ಶಾಂತಿಃ || ( ಹಸ್ತಾಭ್ಯಾಂ ಸ್ವಸ್ತಿಕಂ ಕೃತ್ವಾ ಕರ್ಣೌ ಸ್ಪೃಷ್ಟ್ವಾ )
ಓಂ ಸಂಧ್ಯಾಯೈ ನಮಃ | ಓಂ ಗಾಯತ್ರ್ಯೈ ನಮಃ | ಓಂ ಸಾವಿತ್ರ್ಯೈ ನಮಃ  | ಓಂ ಸರಸ್ವತ್ಯೈ ನಮಃ | ಓಂ ಸರ್ವಾಭ್ಯೋ ದೇವತಾಭ್ಯೋ ನಮಃ | ಓಂ ಸರ್ವೇಭ್ಯೋ ದೇವೇಭ್ಯೋ ನಮಃ || ಓಂ ಋಷಿಬ್ಯೋ ನಮಃ ಓಂ ಮುನಿಭ್ಯೋ ನಮಃ | ಓಂ ಗುರುಭ್ಯೋ ನಮಃ | ಓಂ ಆಚಾರ್ಯಾಭ್ಯೋ ನಮಃ | ಓಂ ಇಷ್ಟದೇವತಾಭ್ಯೋ ನಮಃ (ಇಷ್ಟದೇವರ ಹೆಸರು ಹೇಳುವುದು; ಉದಾ:ಶ್ರೀ ರಾಮಚಂದ್ರಾಯನಮಃ) | ಓಂ ಈಶಾನ ಗೋ ಪಿತೃ ಮಾತೃ ಗುರುದೇವತಾ ಭ್ಯೋನಮಃ || ಸಂಧ್ಯಾ ಸರಸ್ವತೀಭ್ಯೋ ನಮೋ ಅಸ್ತು ||
ಕಾಶ್ಯಪಾವತ್ಸಾರ ನೈದೃವ ತ್ರಯಾ ಋಷಯ ಪ್ರವರಾನ್ವಿತ ಕಾಶ್ಯಪಗೋತ್ರೋತ್ಪನ್ನ ಚಂದ್ರಶೇಖರ ಶರ‍್ಮ ಅಹಮಸ್ಮಿ ಅಹಂಭೋ ಅಭಿವಾದಯೇ || ಯಿತಿ ಸ್ವ ಸ್ವ ಗೋತ್ರೋಚ್ಚಾರಣಂ ಕೃತ್ವಾ (ಇತಿ ಭೂಮಿಂ ಸ್ಪೃಷ್ಟ್ವಾ ತ್ರಿರಭಿವಾದ್ಯ )||
||ತತೋಂಜಲಿನಾ ದಕ್ಷಿಣ ಮುಖೇಯಮಮುಪತಿಷ್ಠತೇ || ಓಂ ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯಚ || ವೈವಸ್ವತಾಯ ಕಾಲಾಯ  ಸರ್ವ ಭೂತ ಕ್ಷಯಾಯಚ |||| ಔದಂಬರಾಯ ದದ್ನಾಯ ನೀಲಾಯ ಪರಮೇಷ್ಠಿನೇ | ವೃಕೋದರಾಯ ಚಿತ್ರಾಯ ಚಿತ್ರಭುಕ್ತಾಯ ವೈ ನಮೋನಮಃ |||| ತತೋತ್ತರ ಮುಖಃ || ಋತಗುಂ ಸತ್ಯಂ ಪರಂಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ||  ಊಧ್ವಕೇಶಿ ವಿರೂಪಾಕ್ಷಂ ವಿಶ್ವರೂಪಾಯ ವೈ ನಮೋ ನಮಃ || [(ಅಥೋದಙ್ಮಖಃ || ಓಂ ಯಾ? ಸದಾ ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚಸಾಯಂ ಪ್ರಾತರ್ನಮಸ್ಯಂತಿ ಸಾ ಮಾ ಸಂಧ್ಯಾಭಿ ರಕ್ಷತು | ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನಿ| ಬ್ರಾಹ್ಮಣೇಭ್ಯೋSಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಂ | ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತೀ ಪವನೇ ದ್ವಿಜಾತಾ | ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪ್ರಜಾತುಂ ಬ್ರಹ್ಮಲೋಕಂ )||  ತತಃ ಪ್ರದಕ್ಷಿಣಃ ||] ಓಂ ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ್ಯ ಹಿತಾಯಚ | ಜಗದ್ದಿತಾಯ ಕೃಷ್ಣಾಯ ಗೋವಿಂದಾಯ ವೈ ನಮೋನಮಃ |||| ಯಿತಿ ಪ್ರದಕ್ಷಿಣ ತ್ರಯಂ ಕೃತ್ವಾ ||
ತಾತ್ಪರ್ಯ :-(೧) ಉತ್ತಮೇ ಶಿಖರೇ ---ಯಥಾ ಸುಖಂ : ಎಲೌ ಸಂಧ್ಯಾದೇವಿಯೇ !  ಭೂಲೋಕದಮೇಲೆ ನೆಲೆಸಿರುವ ಉತ್ತರ ಮೇರುಪರ್ವತ ಶಿಖರಗಳ ಮಧ್ಯಶಿಖರದ ದಿವ್ಯಮಂದಿರದಲ್ಲಿ ಜನಿಸಿದವಳಾದುದರಿಂದ  ಆಸ್ಥಳದಲ್ಲಿ ವಾಸಿಸಲು ಸಂಧ್ಯಾ ಕರ್ಮಾನುಷ್ಠಾನ ತತ್ಪರರಾದ ಬ್ರಾಹ್ಮಣರಿಂದ ಪ್ರಾರ್ಥಿತಳಾಗಿ ಸುಖವಾಗಿ ತೆರಳುವವಳಾಗು. ನಿನಗೆ ಮನಃ ಪೂರ್ವಕವಾಗಿ ವಂದಿಸುವೆನು.   (೨) ಸ್ತುತೋ ಮಯಾ---ಬ್ರಹ್ಮಲೋಕಂ :- ಸಮಸ್ತ ಪ್ರಾಣಿಗಳಲ್ಲಿಯೂ ಅಂತರ‍್ಯಾಮಿಯಾಗಿ, ಪ್ರೇರಿಸುವ ವೇದ ಜನನಿಯಾದ ಪರಬ್ರಹ್ಮ ಮತ್ತು ಸೂರ್ಯಮಂಡಲ ಸ್ಥಾನಗಳೆರಡರಲ್ಲಿ ಉದ್ಭವಳಾದ ಇಷ್ಟಾರ್ಥಪ್ರದಳಾದ ಗಾಯತ್ರೀದೇವಿಯೇ ! ನಾನು ಮಾಡುವ ಪ್ರಾರ್ಥನೆಗೆ ಅನುಗ್ರಹಿಸಿನನಗೆ ಆಯುಸ್ಸನ್ನೂ, ಧನವನ್ನೂ, ಬ್ರಹ್ಮವರ್ಚಸ್ಸನ್ನೂ ಕೊಟ್ಟು ನಿನ್ನ ಆವಿರ್ಭವದ ಉತ್ಕೃಷ್ಟ ಸ್ಥಳವಾದ ಪರಬ್ರಹ್ಮ ಸ್ಥಾನಕ್ಕೆ ಹೋಗಿ ನೆಲಸು.


|| ಅಥ ಮಧ್ಯಾಹ್ನೆ ||  ||ಉತ್ತಿಷ್ಠನ್||
ಓಂ ಉದ್ಯನ್ನದ್ಯಮಿತ್ರಮಹ ಆರೋಹದ್ನುತ್ತರಾದಿವಂ || ಹೃದ್ರೋಗಮವಂ ಸೂರ್ಯ  ಹರಿಮಾಣಂ ಚ ನಾಶಯ |||| ಓಂ ಸುಕೇಶು ಮೇ ಹರಿಮಾಣಂ ರೋಪಣಾ ಕಾಸುದದ್ಮಸಿ || ಅಥೋ ಹಾರಿದ್ರ ವೇಷುಮೇ ಹರಿಮಾಣಂಸಿ ದದ್ಮಸಿ||||  ಓಂ ಉದಗಾದಯಮಾದಿತ್ಯೋ ವಿಶ್ವೇನ ಸಹಸಾಹಸಿ| ದ್ವಿಶಂತಂ ಮಹ್ಯಂ ರಂದ್ಯಯನ್ಮೋ ಅಹಂ ದ್ವಿಷತೇರಧಂ ||||  || ಯಿತಿ ಸೂರ್ಯಾವಲೋಕನಂ ಕೃತ್ವಾ || 
               ತಾತ್ಪರ್ಯ :- ಜಗತ್ತಿಗೆ ಹಿತವನ್ನುಂಟುಮಾಡುವ ಸೂರ್ಯ ಭಗವಂತನೇ! ಅಂತರಿಕ್ಷದ ಮಧ್ಯ ಕೇಂದ್ರದಲ್ಲಿ ಏರಿ ಪ್ರಕಾಶಮಾನನಾಗಿರುವೆ .  ನನ್ನ ಅಂತರ ಮತ್ತು ಬಾಹ್ಯ ರೋಗಗಳನ್ನು ಪರಿಹರಿಸು. |||| ಶರೀರ ರೋಗದಿಂದುಂಟಾದ ಹಸಿರು ಮೊದಲಾದ ವರ್ಣಗಳನ್ನು ಗಿಣಿ ಮತ್ತು ತಾಳೆಗಿಡಗಳಲ್ಲಿಟ್ಟು ನಾನು ನಿನ್ನ ತೇಜಸ್ಸನ್ನು ಹೊಂದುವಂತೆ  ಅನುಗ್ರಹಿಸು. |||| ಈಸೂರ್ಯ ಭಗವಂತನು ವಿಶ್ವಬಲದಿಂದ ನನಗೆ ಹಗೆಯಾದ ರೋಗವನ್ನು ನನ್ನ ಪ್ರಯತ್ನ ವಿಲ್ಲದೇ ನಾಶಗೋಳಿಸಲಿ ||||
||ಉತ್ತಿಷ್ಠನ್||
|| ಶಿಶು ಕುಮಾರ ಪ್ರಾರ್ಥನೆ ||?||
ಓಂ ಭೂಃ ಪ್ರಪದ್ಯೇ  ಭುವಃ ಪ್ರಪದ್ಯೇ  ಸ್ವಃ ಪ್ರಪದ್ಯೇ  ಭೂರ್ಭುವಃ ಸ್ವಹ ಪ್ರಪದ್ಯೇ  ಬ್ರಹ್ಮ ಪ್ರಪದ್ಯೇ  ಬ್ರಹ್ಮ ಕೋಶಂ ಪ್ರಪದ್ಯೇ  ಮೃತಂ ಪ್ರಪದ್ಯೇ  ಮೃತಕೋಶಂ ಪ್ರಪದ್ಯೇ  |   ಚತುರ್ಜಾಲಂ ಬ್ರಹ್ಮ ಕೋಶಂ ಯಂ ಮೃತ್ಯುರ್ನಾಪಪಶ್ಯತಿ ತಂ ಪ್ರಪದ್ಯೆ ದೇವಾನ್ ಪ್ರಪದ್ಯೇ | ದೇವ ಪುರಂ ಪ್ರಪದ್ಯೇ | ಪರೀವೃತೋ ಪರೀವೃತೋ ಬ್ರಹ್ಮಣಾ ಮರ್ಮಣೂಹಂ ತೇಜಸಾ ಕಶ್ಯ ಪಶ್ಯ ಯಸ್ಮೈನ ಮಸ್ತಚ್ಛೆರೋ ಧರ್ಮೋ ಮೂರ್ಧಾನಂ ಬ್ರಹ್ಮೋತ್ತರಾ ಹನುರ್ಯರ್ಜೋSಧರಾ ವಿಷ್ಣು ಹೃದಯಸಂವತ್ಸರಃ ಪ್ರಜನನಮಶ್ವಿನೌ ಪೂರ್ವಪದಾವತ್ರಿಮಧ್ಯಂ  ಮಿತ್ರಾವರುಣ ವಪರ ಪಾಧಾವಗ್ನಿಃ ಪುಚ್ಚಸ್ಯ ಪ್ರಥಮಂ ಕಾಂಡಂ ತತಃ ಇಂದ್ರಸ್ತತಃ  ಪ್ರಜಾಪತಿರಭಯಂ ಚತುರ್ಥಗುಂಸ ವಾ ಏಷದಿವ್ಯಃ ಶಾಕ್ಷರಃ ಶಿಶುಕುಮಾರಸ್ತಗುಂ  ಹಯ ಏವಂ ವೇದ ಪಪುನರ್ಮುತ್ಯುಂಜಯತಿ ಜಯತಿ ಸ್ವರ್ಗಂ  ಲೋಕಂ ನಾಧ್ವನಿಪ್ರಮೀಯತೇನಾಗ್ನೌ ಪ್ರಮೀಯತೇ ನಾಪ್ರುಪ್ರಮೀಯತೇ  ನಾನಪತ್ಯಃ ಪ್ರಮೀಯತೇ  ಲಘ್ವಾನ್ನೋ ಭವತಿ ಧೃವಸ್ತ್ವಮಸಿ ಧೃವಸ್ಯಕ್ಷಿ ತ್ವಮಸಿ ತ್ವಂ ಭೂತಾನಾಮಧಿಪತಿರಸಿ ತ್ವಂ ಭೂತಾನಾಗುಂ ಶ್ರೇಷ್ಠೋಸಿ ತ್ವಾಂ ಭೂತಾನ್ಯುಪಪರ್ಯಾವರ್ತಂತೇ ನಮಸ್ತೇ ನಮಃ ಸರ್ವಂತೇ ನಮೋನಮಃ  ಶಿಶುಕುಮಾರಾಯನಮಃ  ||ಯಿತಿ ಶಿಶುಕುಮಾರಂ ಪ್ರಾರ್ಥ್ಯ ||  
||ಉತ್ತಿಷ್ಠನ್||
ಯಾಗುಂ  ಸದಾ ಸರ್ವಭೂತಾನಿ ಸ್ಥಾವರಾಣಿಚ | ಸಾಯಂ ಪ್ರಾತಃ ನಮಸ್ಯಂತಿ ಸಾಮಾ ಸಂಧ್ಯಾಭಿರಕ್ಷತು || ಶ್ರಿ ಸಾಮಾಸಂಧ್ಯಾ ಅಭಿರಕ್ಷತೋನ್ನಮೋನಮಃ ||   ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತ ಮೂರ್ಧನಿ| ಬ್ರಾಹ್ಮಣೇಭ್ಯೋSಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಂ | ಸ್ತುತೋ ಮಯಾ ವರದಾ ವೇದಮಾತಾ ಪ್ರಚೋದಯಂತೀ ಪವನೇ ದ್ವಿಜಾತಾ | ಆಯುಃ ಪೃಥಿವ್ಯಾಂ ದ್ರವಿಣಂ ಬ್ರಹ್ಮ ವರ್ಚಸಂ ಮಹ್ಯಂ ದತ್ವಾ ಪ್ರಜಾತಂ ಬ್ರಹ್ಮಲೋಕಂ || ಚತುಃ ಸಾಗರ ಪರ್ಯಂತಂ ಗೋ ಬ್ರಾಹ್ಮಣೇಭ್ಯ ಶುಭಂ ಭವತು || ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |   ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ || ಅಥೋಪವಿಶ್ಯ || ಆಚಮ್ಯ||
|| ಯಿತಿ ಸಂಧ್ಯಾವಂದನಮ್ ||  
*************************
|| ಅಥ ಅಷ್ಟಾಕ್ಷರೀ ಜಪಂ ||
 ||ಅಥ ಅಷ್ಟಾಕ್ಷರೀ ಜಪಂ ಕರಿಷ್ಯೇ ||
ಓಂ ಸಾಧ್ಯಾನಾರಾಯಣ  ಋಷಿಃ | ಗಾಯತ್ರೀ ಛಂದಃ | ಪರಬ್ರಹ್ಮ  ಪರಮಾತ್ಮಾ ದೇವತಾ  || ಓಂ ಕೃದ್ವೋಲ್ಕಾಯಸ್ವಾಹಾ ಅಂಗುಷ್ಠಿಕಾಭ್ಯಾಂ ನಮಃ | ಹೃದಯಾಯನಮಃ || ಓಂ ಮಹೋಲ್ಕಾಯಸ್ವಾಹಾ | ತರ್ಜನೀಭ್ಯಾಂ ನಮಃ | ಶಿರಸೇ ಸ್ವಾಹಾ ||  ಓಂ ವೀರವಲ್ಕಾಯ ಸ್ವಾಹಾ ಮಧ್ಯಮಾಭ್ಯಾಂ ನಮಃ ಶಿಖಾಯೈ ವೌಷಟ್ || ಓಂ ಜೋಲ್ಕಾಯ ಸ್ವಾಹಾ | ಅನಾಮಿಕಾಬ್ಯಾಂ ನಮಃ | ಕವಚಾಯ ಹುಂ || ಓಂ ಜ್ಞಾನವಲ್ಕಾಯ ಸ್ವಾಹಾ ಕನಿಷ್ಠಿಕಾಭ್ಯಾಂ ನಮಃ | ನೇತ್ರತ್ರಯಾಯೈ ವೌಷಟ್ || ಓಂ ಸಹಸ್ರವಲ್ಕಾಯ  ಸ್ವಾಹಾ | ಕರತಲಕರಪೃಷ್ಠಾಭ್ಯಾಂ ನಮಃ | ಅಸ್ತ್ರಾಯ ಫಟ್ || ಓಂ ಭೂರ್ಭುವಸ್ಸುವರೋಂ | ಇತಿ ದಿಗ್ಬಂಧಃ ||
|| ಅಥ ಧ್ಯಾನಂ ||
ಅರ್ಕೌಘಾಭಾಂ [ಭಂ] ಕಿರೀಟಾನ್ವಿತ ಮಕರಲ ಸತ್ಕುಂಡಲಂ ದೀಪ್ತಿ ರಾಜತ್ | ಕೇಯೂರಂ ಕೌಸ್ತುಭಾಭಾಂ ಶಬಲರುಚಿರ ಹಾರಂ ಸಪೀತಾಂಬರಂ ಚ ನಾನಾ ರತ್ನಾಂಶು ಭಿನ್ನಾಭರಣ ಶತಯುಜಂ ಶ್ರೀಧರಾಶ್ಲಿಷ್ಟಪಾರ್ಶ್ವಂ | ವಂದೇದೋಃ ಸಕ್ತ ಚಕ್ರಾಂಬುರಹ ಧರ ಗದಂ ವಿಶ್ವವಂದ್ಯಂ ಮುಕುಂದಂ || ಯಿತಿ ಧ್ಯಾನಂ ||
ಓಂ ಆಷ್ಟಾಕ್ಷರೀಮಾವಾಹಯಾಮಿ | ಶ್ರೀಯಮಾವಾಹಯಾಮಿ | ಓಮಾವಾವಾಹಯಾಮಿ || ಯಿತಿ ಆವಾಹ್ಯ ||
|| ಓಂ ನಮೋ ನಾರಾಯಣಾಯ || ಯಿತಿ ಜಪಂ|| ಗಾಯತ್ರೀ ಜಪ ದ್ವಿಗುಣಂ ಜಪಿತ್ವಾ ||  ದಶಾಂಶ ಅರ್ಘ್ಯ||  ಪುನಃ ಪೂರ್ವಾತ್ಕರಷಡಂಗ ಧ್ಯಾನಂ ತಂ ಕೃತ್ವಾ || ಓಂ ಅಷ್ಟಾಕ್ಷರೀಮುದ್ವಾಹಯಾಮಿ | ಶ್ರೀಯಮುದ್ವಾಹಯಾಮಿ ಓಮುದ್ವಾಹಯಾಮಿ || ಯಿತಿ ಅಷ್ಟಾಕ್ಷರೀ ಜಪಂ || ಯಿತಿ ಅಷ್ಟಾಕ್ಷರೀ ಜಪಂ ಕರ್ಮಣಾ  ಶ್ರೀ ಪರಮೇಶ್ವರ ಪ್ರೀಯತಾಂ ||
***********************

|| ಅಥ ಪಂಚಾಕ್ಷರೀ ಜಪಂ ||
|| ಆಚಮ್ಯ || ಅಥ ಪಂಚಾಕ್ಷರೀ ಜಪಂ ಕರಿಷ್ಯೇ || ಓಂ ವಾಮದೇವ ಋಷಿಃ || ಪಂಕ್ತೀ ಛಂದಃ || ಶ್ರೀಸದಾಶಿವ ರುದ್ರೋ ದೇವತಾ || ಓಂ ಅಂಗುಷ್ಟಿಕಾಭ್ಯಾಂ ನಮಃ | ಹೃದಯಾಯ ನಮಃ || ನಂ ತರ್ಜನೀಭ್ಯಾಂ ನಮಃ | ಶಿರಸೇ ಸ್ವಾಹಾ || ಮಂ ಮಧ್ಯಮಾಭ್ಯಾಂ ನಮಃ || ಶಖಾಯೈ ವೌಷಟು ||  ಶಿಂ ಅನಾಮಿಕಾಭ್ಯಾಂನಮಃ | ಕವಚಾಯ ಹುಂ||  ವಾಂ ಕನಿಷ್ಟಿಕಾಭ್ಯಾಂ ನಮಃ | ನೇತ್ರತ್ರಯಾಯೈ ವೌಷಟು || ಯಃ ಕರತಲಕರ ಪೃಷ್ಠಾಭ್ಯಾಂ ನಮಃ | ಅಸ್ತ್ರಾಯ ಫಟು || ಓಂ ಭೂರ್ಭುವಸ್ಸುವರೋಂ  ಇತಿ ದಿಗ್ಬಂಧಃ ||  ಅಥ ದ್ಯಾನಂ ||
 ಬಿಭ್ರದ್ದೋಭ್ರಿಃ ಕುಠಾರಂ  ಮೃಗಮಭಯವರೌ ಸುಪ್ರಸನ್ನೋ ಮಹೇಶಃ | ಸರ್ವಾಲಂಕಾರದೀಪ್ತಿಃ ಸರಸಿಜನಿಲಯೋ ವ್ಯಾಘ್ರಚರ್ಮಾತ್ತವಾಸಃ || ಧ್ಯೇಯೋ ಮುಕ್ತಾಪರಾಗಾಮೃತ ರಸಕಲಿತಾದ್ರಿಪ್ರಭಃ ಪಂಚವಕ್ತ್ರಃ ಸ್ತ್ರ್ಯಕ್ಷಃ ಕೋಟೀರಕೋಟಿ ಘಟಿತ ತುಹಿನರೋಚಿತ್ಕಲೋತ್ತುಂಗ ಮೌಲಿಃ ||
|| ಯಿತಿ ಧ್ಯಾನಂ || ಓಂ ಪಂಚಾಕ್ಷರೀಮಾವಹಯಾಮಿ || ಶ್ರೀಯಮಾವಾಹಯಾಮಿ || ಓಮಾವಾಹಯಾಮಿ || ಇತ್ಯಾವಾಹನಂ ||  ಓಂ ನಮಃ ಶಿವಾಯ || ಯಿತಿ ಜಪಂ |ಅಷ್ಟಾಕ್ಷರೀ ಜಪಾದ್ವಿಗುಣ ಕುರ್ಯಾತ್ || ದಶಾಂಶ ತರ್ಪಣಂ || ಪುನಃ ಪೂರ್ವವತ್ಕರಷಡಂಗ ನ್ಯಾಸ ಧ್ಯಾನಂ ತಂ ಕೃತ್ವಾ || ಓಂ ಪಂಚಾಕ್ಷರೀಮುದ್ವಾಹಯಾಮಿ | ಶ್ರೀಯಮುದ್ವಾಹಯಾಮಿ | ಓಂ ಉದ್ವಾಹಯಾಮಿ ||   ಯಿತಿ ಪಂಚಾಕ್ಷರೀ||
ಭಗವದರ್ಪಣಂ.
 ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ ತಪೋ ಸಂಧ್ಯಾಕ್ರಿಯಾದಿಷು | ನ್ಯೂನಂ ಸಂಪುರ್ಣ ತಾಂಯಾತಿ ಸದ್ಯೋ ವಂದೇ ತಮಚ್ಯುತಂ || 
ಅನೇನ ಪ್ರಾತಃ \ಮದ್ಯಾಹ್ನ \ ಸಾಯಂ  ಸಂಧ್ಯಾವಧಿಕರ್ಮಣಃ ಶ್ರೀ ಪರಮೇಶ್ವರ ಪ್ರೀಯತಾಂ || ಪ್ರೀಯತೋ ವರದೋ ಭವತು || ದ್ವಿರಾಚಮ್ಯ || ಪ್ರಾಣಾಯಾಮಂ ಕುರ್ಯಾತ್ || ಯಿತಿ ಸಂಧ್ಯಾವಂದನಂ ||
||ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| ಶ್ರೀ|| 


[ಚಿತ್ರಭಾನು ಸಂವತ್ಸರದ ಆಶ್ವೀಜ ಬಹುಳ ಎರಡು ಸೋಮವಾರ ದಿವಾಘಟಿ ೧೨ಕ್ಕೆಬರೆದ ಸಂಧ್ಯಾದನವಧಿಗೆಆಚಂದ್ರಾರ್ಕಮ ||ಸತ್||
ಅಗ್ನಿ ಮೂಷಿಕಚೋರೇಭ್ಯೋ ಶಿವೋ ರಕ್ಷತು ಪುಸ್ತಕಂ|| ದಸ್ತೂರು ಖುದ್ದು ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು ೨೬/೧೦/೧೯೪೨. ಶ್ರೀಜಗದಂಬಾರ್ಪಣಮಸ್ತು || ಶಾರದಾಂಬಾಯೈ ನಮಃ||  ಶ್ರೀ|| ಶ್ರೀ|| ಶ್ರೀ|| ಶ್ರೀ||]
[ಬೆಗಡೀಪಾಲು ತಿಮ್ಮಯ್ಯನ ಸಹಿ ಇದೆ]
(ಕಂಪ್ಯುಟರಿಗೆ ತಿದ್ದುಪಡಿಯೊಂದಿಗೆ ಹಾಕಿದವರು ಬಿ.ಎಸ್.ಚಂದ್ರಶೇಖರ ಸಾಗರ || ೦೬ - ೦೭ - ೨೦೧೦ ಸೋಮವಾರ ದಿಂದ ೧೧ -೦೭-೨೦೧೦ಭಾನುವಾರ) To Blog   31-1-2012