Saturday, September 20, 2014

ಕನ್ನಡದ ಕಣ್ವ’ 
*ಅವರನ್ನು ಕನ್ನಡ ಜನ ಅಭಿಮಾನದಿಂದ ’ಕನ್ನಡದ ಕಣ್ವ’ ಎಂದು ಕರೆದರು. ಪುರಾಣದ ಕಥೆಯಲ್ಲಿ ಶಕುಂತಳೆ, ವಿಶ್ವಾಮಿತ್ರ-ಮೇನಕೆ ಯರ ಮಗಳು. ತಂದೆಯಾಯಿ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋದರು. ಮಗುವನ್ನು ಪ್ರೀತಿಯಿಂದ ಬೆಳೆಸಿದವರು ಮಹರ್ಷಿ ಕಣ್ವರು. ಮಗು ಶಕುಂತಳೆಯಂತೆ ನೋಡಿಕೊಳ್ಳುವವರು ಇಲ್ಲದಿದ್ದಾಗ ಕನ್ನಡವನ್ನು ಬೆಳೆಸಿದವರು ’ಶ್ರೀ’ ಅವರು ಎಂದು ಜನ ಅವರಿಗೆ ಹೀಗೆ ಗೌರವ ತೋರಿಸಿದರು. ಸುಮಾರು ವರ್ಷಗಳ ಹಿಂದೆ ಕನ್ನಡನಾಡಿನಲ್ಲೂ ಕನ್ನಡವನ್ನು ಕೇಳುವವರಿರಲಿಲ್ಲ. 
*ಕನ್ನಡದಲ್ಲಿ ಎಂ.ಎ. ಮಾಡಲು ತರಗತಿಗಳೇ ಇರಲಿಲ್ಲ. ಕನ್ನಡ ಅಧ್ಯಾಪಕರಿಗೆ ಇಂಗ್ಲಿಷ್ ಅಧ್ಯಾಪಕರಿಗಿಂತ ಕಡಿಮೆ ಸಂಬಳ. ’ಓದುವುದಕ್ಕೆ ಕನ್ನಡದಲ್ಲಿ ಏನಿದೆ?’ ಎಂದೇ ಬಹು ಮಂದಿಯ ಭಾವನೆ. ಕನ್ನಡದಲ್ಲಿ ಬರೆಯುವುದು-ಮಾತ ನಾಡುವುದು ಹಾಸ್ಯಕ್ಕೆ ವಸ್ತು. ಇಂತಹ ಕಾಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀಕಂಠಯ್ಯನವರು ನಾಡಿನ ಮೂಲೆಮೂಲೆಗಳನ್ನೂ ಸುತ್ತಿ ದರು. ಕನ್ನಡದಲ್ಲಿ ಭಾಷಣ ಮಾಡಿದರು, ಬರೆದರು. *ಹೀಗೆ ಕನ್ನಡ ಅನಾಥವಾಗಿದ್ದಾಗ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟು , ಕಣ್ವರು ಅನಾಥ ಶಕುಂತಲೆಯನ್ನು ಬೆಳಸಿದಂತೆ ಅನಾಥವಾಗಿದ್ದ ಕನ್ನಡ ಭಾಷೆಯನ್ನು ಬೆಳೆಸಲು ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆಯೆರೆದರು