Friday, July 31, 2015

ಚೈತ್ರ ಮಾಸ

  ಚೈತ್ರ ಮಾಸ
           
ಕಾಮನ ಬಿಲ್ಲದು
ಹುಬ್ಬಿನ ಕುಣಿತವು    
 ಹೃದಯದಿ ನೂಪುರ ನಾದವ ಕೇಳಸಿದೇ
ಗಿಲಿಗಿಲಿ ನಆದವ ಕೇಳಿಸಿದೇ||

ಹೂವಿನ ಕಣೆಗಳು
ಕಣ್ಣಿನ ನೋಟವು
 ಹೃ ದಯದಿ ಮೋಹನ ರಾಗವಬ್ಬಿಸಿದೇ
 ರಾಗದ ಅಲೆಅಲೆ ಎಬ್ಬಿಸಿದೇ||

ಬಿರಿಯುವ ಮುಗುಳದು
ಮೃದು ಮಧು ಹಾಸವು
ಮೈಯನು ಮನವನು ಪುಳುಕದಿ ತೇಲಿಸಿದೇ
ಪುಳುಕದ ಹೊನಲಲಿ ತೇಲಿಸಿದೇ||

ಕೋಗಿಲೆ ಯಿಂಚರ
ನುಡಿಯುವ ಇನಿದನಿ
ಲೋಕವ ಮುದವಹ ಗಾನದಿ ಮುಳುಗಿಸಿದೇ
ಸುಧೆಯಹ ಗಾನದಿ ಮುಳುಗಿಸಿದೇ||

ಅರುಣನ ಕಿರಣವು
ದೇಹದ ಕಾಂತಿಯು
ಜಗವನು ಮರೆಸುವ ತೋಷವ ತಂದಿಹುದೋ
ಕಣ್ಣಿಗೆ ಉತ್ಸವ ತಂದಿಹುದೋ||
 

ಹೂಗಳ ಮಧುವೋ
ಒತ್ತುವ ಅಧರವು
ಸಗ್ಗದ ಸೊಗಸನು ಮೀರಿಸಿದೇ
ಅಮರ್ದಿನ ಸವಿಯನು ಮೀರಿಸಿದೇ||
(ರಚನೆ;- ಬಿ . ಎಸ್. ಚಂದ್ರ ಶೇಖರ ಸಾಗರ,

ಎಳೆಯ ಮನಸು

ಎಳೆಯ ಮನಸು
            (ಫ್ರಾಯಿಡ ನ ನೆನೆದು)

     ಬಣ್ಣ ಬಣ್ಣದ ಕುಂಚ  ಚಿತ್ತ ಭಿತ್ತಿಯ ಮೇಲೆ,

ನೆನೆದು ಚಿತ್ರಿಪುದು  ಆ ನಿನ್ನ ಚಿತ್ರ ಮಾಲೆ ,

ಬಾಲ ಲೀಲೆಯ ಪುಷ್ಪಗಳ ನಲ್ಲಲ್ಲಿ ಆಯ್ದು ತಂದು,

ಮಾಲೆಯನು ನೇಯುವುದು ಆ ನಿನ್ನ ಚಿತ್ರಕೆಂದು;

ಕನಸಿನಲಿ ತೊಡಗುವುದು -ನೇಯುವುದು ನೆನಹು ಮಾಲೆ,

ಪುಷ್ಪಗಳು  ಅಲ್ಲೊಂದು -ಇಲ್ಲೊಂದು ಬಾಲಲೀಲೆ:

    ಸಂಚರಿಸಿ ನಿನ್ನೆಡೆಗೆ ಎನ್ನಮನ ವೈ ತಂದು-

ಸಂತಸದೆ ನಿಲ್ಲುವುದು ನಿನ್ನೊಡನೆ ಪುಳುಕಗೊಡು

ಇಂತೇಕೆ - ಹೀಗೇಕೆ?. ಎಂದಾನು ಎನ್ನ ಮನದೆ,

 ಚಿಂತಿಸಿದೆ ಕಾಲಮೀರಿರೆ ತಿಳಿದೆ ಕಟ್ಟ –ಕಡೆಗೆ.

     ಅ ಂದೊಂದು ದಿನ ನಿನ್ನ ನಾನೆನ್ನ ಬಳಿಗೆ ಕರೆಯೆ,

 ಆಗ ನೀ ಮೃದು ಮಧುರ ಹಾಸದಲಿ ಬಳಿಗೆ ಸರಿಯೆ,

     ಎತ್ತಿ ಮುದ್ದಿಸುತ ‘ಕೊಡು ಮುತ್ತ’ ನೆನಲು.

ಕದ್ದಿರುವೆ ಹೃದಯವನೆ ಅಂದೆ,  ನೀ ಮುದ್ದ ನಿಡಲು.

ಅಂ ದಿನಿಂ ಸಂದಿಹುದು ಇಪ್ಪತ್ತು ವರುಷ,

ಇಂದಿಗೂ ಅದ ನೆನೆ ಯೆ ಮನದೊಳಗೆ ಹರುಷ.

ಆದರೂ ಅಪಹೃತವ ತಿಳಯಲಿಷ್ಟು ವರುಷ,

ತಿಳಿದರೂ ಕಳ್ಳತನ ಸಿಟ್ಟಿಲ್ಲ ಎನಗೆ ಹರುಷ,                                                                                                                                                                                                                                                                                                                                                                                                        

    ನಿನ್ನರಸಿ ನಾ ಬಂದು ಸಂಧಿಸಲು ಕಣ್ಣು ನಿಮಿಷ,

ನಿನ್ನಧರವರಳುವುದು ಕಣ್ಣೊಲಗೆ ಮಿನುಗೆ ಹರುಷ.

ಇಬ್ಬರೇ ನಾವಿರಲು ಅರಿಯದೆಯೆ ನಮ್ಮ ಬಳಿಗೆ,

ಅಂದಿನಾದಿನಗಳವು ನುಸುಳುವವು ನಮ್ಮ ಕೇಳದೆಯೆ.

   (ರಚನೆ;- ಬಿ . ಎಸ್. ಚಂದ್ರ ಶೇಖರ ಸಾಗರ,

Thursday, July 30, 2015

ಏಕ ಶ್ಲೋಕೀ ರಾಮಾಯಣ:-ಏಕ ಶ್ಲೋಕೀ ಮಹಾಭಾರತ:-ಏಕ ಶ್ಲೋಕೀ ಭಾಗವತ:

ಏಕ ಶ್ಲೋಕೀ ರಾಮಾಯಣ:
ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|
ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||
ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ|
ಪಶ್ಚಾದ್ರಾವಣಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||
ಹಿಂದೆ ಶ್ರೀ ರಾಮನು (ತಂದೆಯ ವಚನವನ್ನು ಉಳಿಸಲು ಸೀತೆಯೊಡನೆ, ಹದಿನಾಲ್ಕು ವರ್ಷಕಾಲ) ತಪೋವನಕ್ಕೆ ಹೋದನು. (ಅಲ್ಲಿ ಸೀತೆಯ ಕೋರಿಕೆಯನ್ನು ಈಡೇರಿಸಲು ಜಿಂಕೆಯನ್ನು ಹಿಡಿಯಲು ಹೋಗಿ ಸಿಗದೆ ) ಆ ಕಾಂಚನ (ಚಿನ್ನದ) ಜಿಂಕೆಯನ್ನು ಕೊಂದನು.
ಆ ಸಮಯದಲ್ಲಿ (ರಾವಣನಿಂದ ಪರ್ಣಕುಟೀರದಲ್ಲಿದ್ದ ) ಸೀತೆಯ ಅಪಹರಣವಾಯಿತು. (ಅವಳನ್ನು ರಕ್ಷಿಸಲು ಹೋದ) ಜಟಾಯುವಿನ ಮರಣವಾಯಿತು. (ಸೀತೆಯನ್ನು ಹುಡುಕುತ್ತಾ ಲಕ್ಮಣನೊಡನೆ ಹೋದ ರಾಮನಿಗೆ) ಸುಗ್ರೀವನೊಡನೆ ಸಂಧಿ ಮಾತಾಡಿ ಸ್ನೇಹವಾಯಿತು.
(ನಂತರ ರಾಮನು ಸುಗ್ರೀವನ ಅಣ್ಣ ಮತ್ತು ಶತ್ರು) ವಾಲಿಯನ್ನು ವಧಿಸಿದನು. (ಸೀತಾನ್ವೇಶಣೆಗೆ ಹೋದ ಹನುಮಂತನು)ಸಮುದ್ರವನ್ನು ಲಂಘಿಸಿ (ಹಾರಿ, ಲಂಕೆಯಲ್ಲಿ ಸೀತಯನ್ನು ಕಂಡು ಹಿಂತಿರುಗಿ ಬರುವಾಗ ) ಲಂಕೆಯನ್ನು ದಹಿಸಿದನು(ಸುಟ್ಟನು.
(ಆಮೇಲೆ ಲಕ್ಷ್ಮಣನ ಜೊತೆಗೂಡಿ, ರಾಮನು ಸುಗ್ರೀವ ಮತ್ತು ಅವನ ಸೈನ್ಯದೊಡನೆ ಲಂಕೆಗೆ ಹೋಗಿ) ರಾವಣ ಕುಂಭಕರ್ಣರನ್ನು ಕೊಂದನು. (ಸೀತೆಯನ್ನು ಮರಳಿ ಪಡೆದು ಹದಿನಾಲ್ಕು ವರ್ಷ ಕಳೆದಾಗ ಅಯೋದ್ಯೆಗೆ ಮರಳಿ ಬಂದು ಪಟ್ಟಾಭಿಷಕ್ತನಾದನು)
ಇದಕ್ಕೆ ಮಜ್ಜಿಗೆ ರಾಮಾಯಣವೆಂದೂ ಹೆಸರಿದೆ.
ಕಾರಣ – ಒಮ್ಮೆ ಒಬ್ಬ ಪಂಡಿತನು ಬಿಸಿಲಲ್ಲಿ ಬಸವಳಿದು ಬಾಯಾರಿ ಬರುತ್ತಿರುವಾಗ ದಾರಿಯಲ್ಲಿ ಒಬ್ಬ ಶ್ರೋತ್ರೀಯನ ಮನೆಯ ಮುಂದೆ ಆ ಮನೆಯ ಒಬ್ಬ ಬಾಲಕಿ ನಿಂತಿರುವುದನ್ನು ಕಂಡನು. ಆಗ ಅವನು ಆ ಬಾಲಕಿಯನ್ನು ಕುರಿತು ತನಗೆ ಬಹಳ ಬಾಯಾರಿಕೆ ಯಾಗಿರುವುದಾಗಿಯೂ , ಕುಡಿಯಲು ನೀರು ಕೊಡಬೇಕೆಂದೂ ಕೇಳಿದನು. ಅದಕ್ಕೆ ಬಾಲಕಿಯು, ‘ನೀರೇಕೆ ನಿಮಗೆ ಒಳ್ಳೆಯ ಮಜ್ಜಿಗೆಯನ್ನೇ ಕೊಡುತ್ತೇನೆ ; ಆದರೆ ಒಂದು ನಿಯಮ (óಷರತ್ತು), ನೀವು ನನಗೆ ಮಜ್ಜಿಗೆ ಕುಡಿದ ನಂತರ ರಾಮಾಯಣದ ಕಥೆಯನ್ನು ಹೇಳಬೇಕು’, ಎಂದಳಂತೆ ಅದಕ್ಕೆ ಪಂಡಿತನು ಒಪ್ಪಿದನು. ಆ ಬಾಲಕಿ ಆ ಪಂಡಿತನಿಗೆ ಬಾಯಾರಿಕೆ ನೀಗುವಷ್ಟು ಹೊಟ್ಟೆ ತುಂಬಾ ಮಜ್ಜಿಗೆ ಕೊಟ್ಟಳು. ಅವನನ್ನು ಕುರಿತು, ‘ರಾಮಾಯಣದ ಕಥೆ ಹೇಳಿ’, ಎಂದಳು . ಆಗ ಆ ಪಂಡಿತನು ಈ ಮೇಲಿನ ಶ್ಲೋಕವನ್ನು ಹೇಳಿ - ‘ಇದೇ ರಾಮಾಯಣದ ಕಥೆ’, ಎಂದನಂತೆ . ಅದಕ್ಕೆ ಈ ಏಕ ಶ್ಲೋಕದ ರಾಮಾಯಣಕ್ಕೆ “ಮಜ್ಜಿಗೆ ರಾಮಾಯಣ” ಎಂಬ ಹೆಸರು ಬಂದಿದೆ ಎನ್ನುತ್ತಾರೆ. (ಹಳೆಯ ಚಂದಮಾಮ ಕಥೆ).
ಮಹಾಭಾರತ ::ಭಾಗವತ[ಬದಲಾಯಿಸಿ]
ಏಕ ಶ್ಲೋಕೀ ಮಹಾಭಾರತ:
ಆದೌ ಪಾಂಡವ ಧಾರ್ತರಾಷ್ಟ್ರ ಜನನಂ ಲಾಕ್ಷಾಗೃಹೇ ದಾಹನಂ|
ದ್ಯೂತೇ ಶ್ರೀ ಹರಣಂ ವನೇ ವಿಹರಣಂ ಮತ್ಸ್ಯಾಲಯೇ ವರ್ಧನಂ ||
ಲೀಲಾ ಗೋಗ್ರಹಣಂ ರಣೇ ವಿತರಣಂ ಸಂಧಿಕ್ರಿಯಾ ಜೃಂಭಣಂ|
ಭೀಷ್ಮ ದ್ರೋಣ ಸುಯೋಧನಾದಿ ಮಥನಂ ಏತನ್ಮಹಾಭಾರತಂ ||
ಏಕ ಶ್ಲೋಕೀ ಭಾಗವತ:
ಆದೌ ದೇವಕೀ ದೇವೀ ಗರ್ಭ ಜನನಂ ಗೋಪೀ ಗೃಹೇ ವರ್ಧನಂ |
ಮಾಯಾ ಪೂತನೀ ಜೀವಿತಾಪಹರಣಂ ಗೋವರ್ಧನೋದ್ಧಾರಣಂ||
ಕಂಸಚ್ಛೇದನ ಕೌರವಾದಿ ಹನನಂ ಕುಂತೀ ಸುತಪಾಲನಂ|
ಏತದ್ಭಾಗವತ ಪುರಾಣ ಕಥಿತಂ ಶ್ರೀ ಕೃಷ್ಣ ಲೀಲಾಮೃತಮ್||
(ಇದರಲ್ಲಿ ಶ್ರೀ ಕೃಷ್ಣನ ಕಥೆಯನ್ನು ಮಾತ್ರಾ ಹೇಳಿದೆ)
ಭಾಗವತದ ಬಗೆಗೆ ವಿವಾದ[ಬದಲಾಯಿಸಿ]
ಶ್ರೀ ಭಾಗವತವನ್ನು ರಚಿಸಿದವನು ಗೀತಾಗೋವಿಂದ ಕಾವ್ಯವನ್ನು ಬರೆದಿರುವ ಜಯದೇವನ ಸೋದರನಾದ
ಬೋಪದೇವನು . ಅವನ ‘ಹಿಮಾದ್ರಿ’ ಎಂಬ ಗ್ರಂಥದಲ್ಲಿ ಈವಿಚಾರದ ಶ್ಲೋಕವನ್ನು ಬರೆದಿದ್ದಾನೆ.
ಶ್ರೀಮದ್ಭಾಗವತ ನಾಮಂ ಪುರಾಣಂ ಚ ಮಯೇರಿತಂ|(ಮಯೇರಚಿತಂ)
ವಿದುಷಾ ಬೋಪದೇವೇನ ಶ್ರೀ ಕೃಷ್ಣಸ್ಯ ಯಶೋSನ್ವಿತಮ್||
ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ’,ಗ್ರಂಥದಲ್ಲಿ ಬರೆದಿದ್ದಾರೆ.(ಪುಟ277) ಕನ್ನಡಾನುವಾದ ಪರಿಷ್ಕøತ ಮುದ್ರಣ 2003; ಅನುವಾದಕರು : ಪಂಡಿತ ಸುಧಾಕರ
ಚತುರ್ವೇದಿ ; ಪ್ರಕಾಶಕರು : ಆರ್ಯಸಮಾಜ ಶ್ರದ್ಧಾನಂದ ಭವನ, ವಿಶ್ವೇಶ್ವರಪುರಂ , ಬೆಂಗಳೂರು, 560004 (ಫೋ.6526380)
ಭಾಗವತ ಪುರಾಣವು ವೋಪದೇವ (ಬೋಪದೇವ ಇದರ ಬಂಗಾಳಿ ರೂಪ) ನು ಮಾಡಿದುದು ಎಂಬ ನಾಣ್ಣುಡಿಯುಂಟು ಇವನು ದೇವಗಿರಿಯ ರಾಜನಾದ ಹೇಮಾದ್ರಿಯ ಸಭಾಸದನು ವೋಪದೇವನು 13ನೆಯ ಶತಮಾನದವನು. ಆದರೆ ಅನೇಕರು ಇದನ್ನು ಒಪ್ಪುವುದಿಲ್ಲ; ಭಾಗವತ ದ್ವೇಷಿಗಳಾದ ಶಾಕ್ತರು ಈ ವದಂತಿಯನ್ನು ಹರಡಿರುವರೆಂದು ವೈಷ್ಣವರು ಹೇಳುವರು. ---ಟೀಕಕಾರರಾದ ಶ್ರೀಧರಸ್ವಾಮಿ ಮೊದಲನೆಯ ಶ್ಲೋಕದ ಟೀಕಿನಲ್ಲಿಯೆ ‘ಭಾಗವತಂ ನಾಮಾನ್ಯದಿತ್ಯಪಿ ನಾ ಶಂಕನೀಯಮ್’, ಎಂದು ಬರೆದಿದ್ದಾರೆ-ಇದರಿಂದ ಭಾಗವತವು ಪುರಾಣವಲ್ಲವೆಂತಲೂ ಶ್ರೀಧರಸ್ವಾಮಿಗಿಂತ ಮುಂಚೆಯೇ ಸಂಶಯ ಉಂಟಾಗಿತ್ತೆಂದು ತಿಳಿದು ಬರುತ್ತದೆ.
ಶ್ರೀ ಬಂಕಿಮಚಂದ್ರರ ‘ಶ್ರೀ ಕೃಷ್ಣ ಚರಿತ್ರೆ –ಅನುವಾದ ಶ್ರೀ ಆರ್.ವ್ಯಾಸರಾವ್ , ಪುಟ 84,85 ;1965ನೇ ಮುದ್ರಣ; ಚೇತನಾ ಪ್ರಿಂಟರ್ಸ್ ಬೆರಂಗಳೂರು-9 ಪ್ರಕಾಶಕರು ಆರ್.ವಿ. ಪ್ರಭಾಕರರಾವ್. ವ್ಯಾಸ ಕೃಪ; 656, 11ನೇ ಮೈನ್ ರಸ್ತೆ ಜಯನಗರ 4ನೇ ಬ್ಲಾಕು, ಬೆಂಗಳೂರು -11
ಆದರೆ ಮಹಾಭಾರತದಲ್ಲಿ ಬರುವ ಶ್ರೀ ಕೃಷ್ಣನ ಚರಿತ್ರೆಗೆ ಮಹರ್ಷಿ ದಯಾನಂದರ ಅಥವಾ ಶ್ರೀ ಬಂಕಿಮರ ಆಕ್ಷೇಪವಿಲ್ಲ. ಭಾಗವತದಲ್ಲಿ ಬರವ ಶ್ರೀ ಕೃಷ್ಣನ ಅಮಾನುಷ-ಯಾ- ಅತಿಮಾನುಷ ಅಥವಾ ಅಸಹಜ ಘಟನೆ/ಕಥೆಗಳಿಗೆ ಅವರ ವಿರೋಧವಿದೆ; ಅವುಗಳಿಂದ ಕೃಷ್ಣನ ವ್ಯಕ್ತಿತ್ವಕ್ಕೆ ಹಾನಿಯಾಗಿದೆಯೆಂದು ಹೇಳುತ್ತಾರೆ. ಅವು ಪ್ರಕ್ಷಿಪ್ತವೆಂದೂ ,ನಂತರ ಸೇರಿಸಿರುವುದೆಂದೂ ಅವರ ಅಭಿಪ್ರಾಯ.

2015-ಶುಭಮಕ್ಕೆ ಸಕಲರ್ಗೆ


2015 ಶುಭಮಕ್ಕೆ ಸಕಲರ್ಗೆ
---------------
ಜಗಕೆ , ಜನತೆಗೆ , ಸೋದರರಿಂಗೆ,
ಎನ್ನ ಹೆತ್ತ ಈ ನಾಡಿಂಗೆ -
ನಿಮಗೆ, ನೇಹಿಗರಿಂಗೆ, ಮುದ್ದಣುಗರಿಗೆ,
ಮತ್ತೆ ನಾಡ ಹಿರಿಯರ್ಗೆ-
ಎರಡು ಸಾಸಿರದ ಹತ್ತು ಮತ್ತು ಐದರ ಹೊಸ್ತಿಲಲಿ,
ಸಂಪದಮಕ್ಕೆ , ಸತ್ ಶಾಂತಿಯಕ್ಕೆ , -
ಶುಭಮಕ್ಕೆ, ಸುಖಮಕ್ಕೆ, ಆನಂದಮಕ್ಕೆ ,
ಸತ್ಯಕ್ಕೆ ನಿತ್ಯ ಜಯಮಕ್ಕೆ -
ಪ್ರಿಯಮಕ್ಕೆ , ನಿಮ್ಮೆಲ್ಲರೊಡ ನೆನಗೆ ಸಕಲ ಕಾಲಕೆ ,
ಸವಿ ಬಾಳ್ಕೆಯಕ್ಕೆ -
ಬಯಕೆ :ಬಿ.ಎಸ್.ಚಂದ್ರಶೇಖರ ; ಸಾಗರ
ಇವರ ಕನಸು : ನಿಜಮಕ್ಕೆ ;
ಸದಸ್ಯ:Bschandrasgr (ಕನ್ನಡ ವಿಕಿಪೀಡಿಯಾ)
(ತಾಣದಲಿ ಎನ್ನ ಕಾಣಿರೆ - -
ಬಿ.ಎಸ್ ಚಂದ್ರಶೇಖರ

ರಮ್ಯ ಕಾವ್ಯ

ಇಂಗ್ಲಿಷ್` ಕವನದ ಸೊಬಗು[ಬದಲಾಯಿಸಿ]
ಉದಾಹರಣೆಗಾಗಿ:
ಒಂದು ಬಯಕೆ
ಸಲಿಲ ಕಲರವದಿಂದ ಸನಿಹದಲೊಂದು ತೊರೆಯು ತಾ ಹರಿಯಲಿ
(ಸನಿಹದಲೊಂದು ತೊರೆಯು ತಾ ಗಿರಣಿಯೊಂದನು ನೆಡಸಲಿ)
ಬಳಿಯ ಮಲೆಯಲಿ ನೀರಬೀಳದು ನೂರು ಸಾವಿರ ದುಮುಕಲಿ.
-
ಅಲ್ಲೆ ಬಳಿಯಲಿ ಬಿಟ್ಟು ಬಿಡದೆಯೆ ಕಲ್ಲು ಪೊಟರೆಯ ಗೂಡಲಿ,
ಪಂಚವರ್ಣದ ಶಕವು ತಾ-ನಿಂಪುದನಿಯಲಿ ಗಳಪಲಿ,
ದೂರ ಪಯ ಣದ ಹಸಿದ ಯಾತ್ರಿಕ ಇಲ್ಲಿ ಬೀಡನು ಮಾಡಲಿ,
ಎನಗೆ ಆದರದತಿಥಿ ಜೊತೆಯಲಿ ಸುಖದ ಭೋಜನವಾಗಲಿ.
-
ಎನ್ನ ಗುಡಿಸಲ ದಾರಿಚಪ್ಪರ ಹೂವು ಮಲ್ಲಿಗೆ ಬಳ್ಳಿಯಾಗಲಿ,
ಮಂಜು ಹನಿಗಳ ಕುಡಿದ ಹೂಗಳು ಸುತ್ತ ಕಂಪನು ಸೂಸಲಿ,
ಎನ್ನ ನಲ್ಲೆಯು ಚರಕ-ನೂಲುತ ತುಂಬು ಹೃ ದಯದಿ ಹಾಡಲಿ,
ಹಸಿರು ನೀಲಿಯ ಬಣ್ಣಬಣ್ಣದ ಕಣ್ಣು ತಣಿಸುವ ಉಡುಪಲಿ.
-
ಹಸಿರು ಮಾಮರ ಸುತ್ತುವರಿದಿಹ ಎನ್ನ ಊರಿನ ಗುಡಿಯಲಿ,
ಎಮ್ಮ ಮದುವೆಯ ಮೊಟ್ಟ ಮೊದಲಿನ ವಚನದೀಕ್ಷೆಯು ನಡೆಯಿತೊ
ಅಲ್ಲಿ ಸತತವು ಮಂದಮಾರುತ ಕಂಪು ಬೀರುತ ಬೀಸಲಿ;
ಎಮ್ಮ ನಲುಮೆಯ ಸಗ್ಗ ಸುಖವನು ಅಮರ ನಾಡಿಗು ಉಲಿಯಲಿ.
- ಮೂಲ:
A W I S H
Mine be a cot beside the hill;
A bee hive’s hum shall soothe my ear ;
A willowy brook that turns mill,
With many a fall shall linger near.
-
The swallow oft , beneath my thatch
Shall twitter from her clay-built nest;
Oft shall a pilgrim lift the latch,
And share my meal, a welcome guest.
-
Around my ivied porch shall spring
Each fragrant flower that drinks the dew:
And Lucy, at her wheel, shall sing
In russet-gown and apron blue.
-
The village-church among the trees,
Where first our marriage-vows were given,
With merry peals shall swell the breeze,
And point with taper spire to Heaven.
-
S.Rogers
(18th C. Poet)
(Golden Treasury: 1874 Edition.Edited
by Mr. F.T. Palgrave. Poem: A W I S H
145 (cxlv)
Page:140. )
-
(ಹದಿನೆಂಟನೆಯ ಶತಮಾನದ ಕವಿ ಎಸ್. ರೋಜರ‍್ಸ್ ನ ಕವಿತೆಯ ಭಾವಾನುವಾದ)
ಅನುವಾದಕ: ಬಿ. ಎಸ್. ಚಂದ್ರಶೇಖರ ಸಾಗರ ನೋಡಿ
Bschandrasgr ೦೪:೨೮, ೧೮ ಜುಲೈ ೨೦೧೪ (UTC)
ಇನ್ನೊಂದು ಕವನ -ಉದಾಹರಣೆಗೆ[ಬದಲಾಯಿಸಿ]
ಸೀ ಲಿ ಯಾ ಳಿ ಗೆ
ಮಧುವನೀಂಟೆಲೆ ಸಖಿಯೆ
(ನನಗಾಗಿ) ನಯನಗಳಲೇ,
ಮುದದೆ ನಾ ಸ್ಪರ್ಧಿಸುವೆ
ನನ್ನ ಕ್ಷಿಗಳಲೇ ;
ಮತ್ತೆ ನಿನ್ನಧರ ಮಧುವನು
ನೀ ನೀಡಲೆನಗೆ
ಅದನುಳಿದು ಮದಿರೆಯನು
ನಾ ನೋಡೆನೆಲಗೆ;
ಹೃ ದಯದಲುದಿಸಿದೀ(ಈ)
ದಾಹ ವೆಲೆ ಚಲುವೆ,
ಬಯಸುತಿದೆ ತಾ ಸ್ವರ್ಗಸೀಮೆಯ
ಮಧುವ ಸಖಿಯೇ,
ಸವಿದಿರಲಿ ಸೋಮವನು (ಅಮೃತ)
ಈ ಮುನ್ನ ರನ್ನೆ ,
ಸೇವಿಸೆನದನು ನಿನ್ನುಳಿದು
ನಾನಿನ್ನು ಚನ್ನೆ .
-
ಕಳುಹಿದೆನು ರೋಜ ಗುಚ್ಛವನೊಂದ
ನಾ ನಿನ್ನ ಬಳಿಗೆ,
ತಿಳಿದಿರುವೆ ದೋಷವನು ಅಲ್ಲವೆಂದದು
ತ ಕ್ಕ ಸನ್ಮಾನ ನಿನಗೆ
ಎನ್ನೊಲವು ನಿನ್ನ ಬಳಿ ಬಾಡದಿರಲೆಂಬಾಸೆ
ಯಿಂದ ಸದಯೆ,
ಕಳುಹಿದೆನು ಎನ್ನ ಪ್ರೇಮದ ಗುಚ್ಛ
ಬೆಳೆಯಲೆಂದಲ್ಲಿ ಸಖಿಯೆ,
ಆದರದಿ ಅದನೊಮ್ಮೆ ನೀನಾಘ್ರಾಣಿಸಿ
ಕಳುಹಿರಲೆನಗೆ ಮುಗುದೆ
ಅಂದಿನಿಂದದು ಬೆಳೆಯುವುದು
ಬೀರುವುದು ಗಂಧವನೆನ್ನಹೃದಯೇ
ಆ ಪರಿಮಳವು ಅಲ್ಲವದರದು ನುಡಿವೆ
-ನೆನ್ನಾಣೆ ಸದಯೇ,
ಸತ್ಯವಿದು ; ಅಂದಿನಿಂದದು ನಿಜದೆ
ನಿನ್ನದೇ ಪ್ರಾಣ ಪ್ರಿಯಳೇ!
-
(೧೭ ನೇ ಶತಮಾನದ ಕವಿ ಬಿ..ಜಾನ್ಸನ್ ತನ್ನ ಪ್ರಿ ಯತಮೆ
ಸೀಲಿಯಾಳಿಗೆ ಬರೆದ ಕವನ; ಭಾವಾನುವಾದ
ಬಿ. ಎಸ್ . ಚಂದ್ರಶೇಖರ ಸಾಗರ
ಟಿಪ್ಪಣಿ: ಅದನುಳಿದು ; ಅದನು + ಉಳಿದು (ಬಿಟ್ಟು)
ಮೂಲ[ಬದಲಾಯಿಸಿ]
TO CELIA
Drink to me only with thine eyes,
And I will pledge with mine;
Or leave a kiss but in the cup
And I ‘ll not look for wine.
The thirst that from the soul doth rise
Doth ask a drink divine;
But might I of Jove’s necter sup,
I would not change for thine.
I sent thee late a rosy wreath,
Not so much honouring thee
As giving it a hope that there
It could not wither’d be ;
But thou thereon didst only breathe
And sent’st it back to me;
Since when it grows, and smells; I sware,
Not of itself but thee!
B. Jonson
(A 17th c. poet )
(Golden Treasury 1874 Edition, poem 140(xc) pg 75)
(Edited by FRANCIS TURNER PALGRAVE)
Bschandrasgr ೦೪:೩೦, ೧೮ ಜುಲೈ ೨೦೧೪ (UTC)ಸದಸ್ಯ:Bschandrasgr-ನೋಡಿ