Sunday, December 11, 2011

Astrology & Uncertainty - ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ

ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ 
( ಲೇ: ಬಿ.ಎಸ್. ಚಂದ್ರ ಶೇಖರ. ಸಾಗರ: ದಿನಾಂಕ: ೧೫-೮-೧೯೯೮ ರ ವನಕೃಪ ರಾಜ್ಯೋತ್ಸವದ ವಿಶೇಷಾಂಕ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನಕಂಪ್ಯೂಟರಿಗೆ ಹಾಕಿದ ದಿನ ೪-೦೪-೨೦೧೦)
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ.   ನಾಳೆ ಎನ್ನುವುದು ಸದಾ ರಹಸ್ಯದ ಆಗರ.  ಇಂದಿದ್ದವನು ನಾಳೆ ಇಲ್ಲ.  ಬಡವ ಬಲ್ಲಿದನಾಗುವನು ; ಬಲ್ಲಿದ ದರದ್ರನಾಗುವನು. ಈ ವಿಚಿತ್ರವನ್ನುತಿಳಯಲು ಮಾನವನ ಪ್ರಯತ್ನ ಅಗಾಧ.  ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು . ಕೊನೆಗೆ ಹೋರಾಶಾಸ್ತ್ರ ಬಂದಿತು.  ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ತಿಳಿದು ಅದರ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ  ಭೂತ, ಭವಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ.  ಅಥವಾ ಫಲಜೋತಿಷ್ಯ.  ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ್ಯ ಶಾಸ್ತ್ರದ ಕೆಲಸ.  ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ್ಯ.
ಖಗೋಲವೃತ್ತದ ೩೬೦ ಡಿಗ್ರಿ(ಅಂಶ)ಗಳನ್ನು ಮೇಷಾದಿ ರಾಶಿಗಳಾಗಿ ಹನ್ನೆರಡು ಭಾಗ ಮಾಡಿ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ.  ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ  ಪ್ರತಿ ಭಾಗದಲ್ಲಿ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ.  ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ಆರೂಕಾಲು ಗಂಟೆಗಳ ಕಾಲ ಇರುತ್ತಾನೆ.  ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ  ಅಶ್ವಿನಿ ನಕ್ಷತ್ರದ ಒಂದನೇ ಪಾದ.  ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ  ಬಹಳ ಬದಲಾವಣೆ  ಆಗುವದಿಲ್ಲ.  ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲಒಂದೇ ಆಸ್ಪತ್ರೆ  ಆಥವಾ ಊರಿನಲ್ಲಿ  ಏಕ ಕಾಲದಲ್ಲಿ ಜನಿಸಿದವರ ಜೀವನ ಕ್ರಮದಲ್ಲಿ ಜನಿಸಿದವರ ವ್ಯತ್ಯಾಸವಿರುವದು ಕಂಡು ಬಂದಿದೆ.  ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ.  ಒಬ್ಬ ಅನಕ್ಷರಸ್ಥ , ಇನ್ನೊಬ್ಬ ವಿದ್ವಾಂಸ.  ಎಂಥ ವಿಚಿತ್ರ.  ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ  ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರೂ ಜನನವಾಗಿದ್ದು ; ಅವರು ಡಾಕ್ಟರು , ಶ್ರೀಮಂತರು; ತಾವು ಬಡ ಜ್ಯೋತಿಷಿ.  ಇದರ ರಹಸ್ಯ ತಮಗೂ ತಿಳಿಯದೆಂದರು. 
ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳದ್ದು ಅವುಗಳಲ್ಲಿ ಚಂದ್ರ ಮತ್ತು ನಕ್ಷತ್ರ ದ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ.  ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ.  ಇದು ಹೇಗಾದರೂ ಇರಲಿ ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ  ಅನುಸರಿಸುತ್ತಾರೆ.  ಆದರೆ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆಸರಿಯುತ್ತದೆ.  ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು.  ಇದಕ್ಕೆ ಸಾಯನ ಪದ್ದತಿ ಎಂದು ಹೆಸರು.  ಅವರು  ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು.  ಆದರೆ ಅದು ಆಗಿಲ್ಲ.   ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ  ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸ ವಾಗಿದೆ.  ಎಂದರೆ ಈಗಿನ ನಿರಯನ ಪದ್ದತಿಯಲ್ಲಿ  ಅಶ್ವಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ , ಸಾಯನ ಪದ್ದತಿಯಲ್ಲಿ ಎಂದರೆ ಖಗೋಲ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು.   ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು.  ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ  ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ.  ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ :-

UÀÄgÀÄ 4
±À¤ 2
±ÀÄ 6
PÀÄ 3 ®UÀß 5 gÀ« 5 §Ä 5
UÀÄgÀÄ 11 PÉÃvÀÄ 5
±À¤ 10
±ÀÄ 1
gÀ.12
§Ä.12
PÀÄ 10 ®UÀß 12
PÉÃvÀÄ10
10-6-98gÀ
¤gÀAiÀÄ£À PÀÄAqÀ°
¨É½UÉÎ 6UÀªÀÄ. 6¤. PÉÌ d£À£À
10-6-98gÀ
¸ÁAiÀÄ£À PÀÄAqÀ°
¨É½UÉÎ 6UÀA. 6¤. PÉÌ d£À£À
gÁ. 4
ZÀAzÀæ 11
ZÀAzÀæ 6
gÁºÀÄ 11

ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ  ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ.
೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ  ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ.   ಆದರೆ ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇಫಲ ಹೇಳುವುದು ಸಾಧ್ಯವಿಲ್ಲ.
ಇನ್ನು ರಾಹು ಕೇತುಗಳ ವಿಚಾರ.  ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿ ಗೆ ಅಗೋಚರವೆಂದೂ ಹೇಳಲಾಗತ್ತಿದೆ.  ಆದರೆ ಇವು ಗ್ರಹಗಳೇ ಅಲ್ಲ.  ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು.  ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದ, ವಿಷುವದ್ ವೃತ್ತ ಮತ್ತು ಊಹಾ ಕ್ರಾಂತಿ ವೃತ್ತಗಳನ್ನು  ಎಳೆದಾಗ  ಅವು ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. ಅವು ಖಗೊಲ ಶಾಸ್ತ್ರದ ದೃಷ್ಟಿಯಿಂದ ಪ್ರಾಮುಖ್ಯವಾದುವು.  ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ.  ಹೋರಾಶಾಸ್ತ್ರದ ಮೂಲ ಗ್ರಂಥವಾದ ವರಾಮಿಹಿರನ ಬೃಹಜ್ಜಾತಕ ಗ್ರಂಥದಲ್ಲಿ ರಾಹುಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ.  ಆದರೆ ನಂತರ ಯಾರೋ ಅವನ್ನು  ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ.
ದಶಾ ಪದ್ದತಿಯ ವಿಷಯವನ್ನು  ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ.  ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ  ಗ್ರಹಗಳ ಬಲಾಬಲಗಳನ್ನು ತಿಳದು ಪ್ರತಿ ಜಾತಕಕ್ಕೂ  ಪ್ರತ್ಯೇಕ ದಶಾವಿಂಗಡಣೆಯನ್ನು ಹೇಳುತ್ತಾರೆ.  ಅದು ತುಂಬಾ ಕಷ್ಟದ ಲೆಕ್ಕಾಚಾರ.  ವಿಂಶೋತ್ತರಿ ದಶಾ ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳುವುದು ಸರಿಯಷ್ಟೆ.  ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದುಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತ ರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ.
ಈಗ ಅನುಸರಿಸುತ್ತಿರುವ  ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟುಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ?
ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ.  ಅಲ್ಲದೆ ಕೆಲವು ಜ್ಯೋತಿಷಿಗಳು  ತಮ್ಮ ಅನುಭವದ ಪ್ರಕಾರ  ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ.
ಫಲ ಜ್ಯೋತಿಷ್ಯದ ಶಾಸ್ತ್ರವನ್ನು ಅಥವಾ ಹೋರಾಶಾಸ್ತ್ರವನ್ನು  ರಚಿಸಿದ ಹಿಂದಿನ ಋಷಿಗಳುವರಾಹ ಮಿಹಿರ ಭಟ್ಟರುಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನದೃಷ್ಟಿ -ಬಲ, ಮೊದಲಾದವುಗಳನ್ನು ಅಸಾಧಾರಣ ಜಾಣ್ಮೆ ಯಿಂದ ರಚಿಸಿದ್ದಾರೆ.  ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಅಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಆಧಿಪತ್ಯಗಳನ್ನೂ   ಹಲವು ಬಗೆಯ ದೃಷ್ಟಿಗಳನ್ನೂ  ವಿಶೇಷ ಜಾಣ್ಮೆಯಿಂದ ಕೊಡಲಾಗಿದೆಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ.  ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು.  ನಿಖರತೆ ಅಸಾಧ್ಯ .  ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ.  ಆದ್ದರಿಂದ ಫಲಜ್ಯೋತಿಷ್ಯದ ಬಗ್ಗೆ  ಪಂಚಂ ಭವತಿ, ಪಂಚಂ ನ ಭವತಿ ಎಂದು ಹೇಳಿದ್ದಾರೆ.  ವಿಧಾತನನ್ನು ಕುರಿತು, ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ.  ಎಂದರೆ ಬ್ರಹ್ಮ ದೇವನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ.ಎಂದು ಅರ್ಥ.  ಯೋಗ, ಸಿದ್ಧಿಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ.
 ಸಾರಾಶವೆಂದರೆ ಫಲಜ್ಯೋತಿಷ್ಯವನ್ನು ನಂಬುವುದಕ್ಕಿಂತ  ದಾಸ ವರೇಣ್ಯರೆಂದಂತೆ  ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ  ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮ.  ಆದರೆ  ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ  ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ  ಫಲಜ್ಯೋತಿಷ್ಯಕ್ಕೆಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ.
           
ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ  ದೆಹಲಿಯ ಜಂತರ್ ಮಂತರ್ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ  ದೆಹಲಿಯ ಜಂತರ್ ಮಂತರ್

Saturday, December 10, 2011

ಗೀತಾ ಜಯಂತಿ

ಗೀತಾ ಜಯಂತಿ
(ಲೇ: ಬಿ.ಎಸ್. ಚಂದ್ರಶೇಖರ ಸಾಗರ. ೧೯೯೯ಡಿಸೆಂಬರ್ ನಲ್ಲಿ ನಡೆಯುವ ಗೀತಾ ಜಯಂತಿಯ ಸಂದರ್ಭದಲ್ಲಿ ಸಾಗರ ವಾರ ಪತ್ರಿಕೆ ಸಾಗರ ಇದಕ್ಕೆ ಮಿತ್ರ ಶ್ರೀ ಶ್ರೀನಿವಾಸ ಉಡುಪರ ಒತ್ತಾಸೆಯ ಮೇಲೆ ಬರೆದ ಲೇಖನ. ೨೭/೧೨/೯೯-//೨೦೦೦ದ ಸಂಚಿಕೆಯಲ್ಲಿ ಪ್ರಕಟಿತ. ಕಂ||ಗೆ ಹಾಕಿದ ದಿನ ೧೧-೦೪-೨೦೧೦.)
ಮಹಾತ್ಮರು ಹುಟ್ಟಿದ ದಿನವನ್ನು ಜಯಂತಿ ಎಂದು ಆಚರಿಸುವಂತೆ [[ಭಗವದ್ಗೀತೆ]] ಯು ಹುಟ್ಟಿದ ದಿನವನ್ನು ಗೀತಾ ಜಯಂತಿ ಎಂದು ಆಚರಿಸುತ್ತಾರೆ. ಇದೇ ಡಿಸೆಂಬರ್ ಹದಿನೆಂಟರಂದು (೧೯೯೯) ಗೀತಾ ಜಯಂತಿಯು ಆಚರಿಲ್ಪಡುವುದು. ಮಾರ್ಗಶಿರ ಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ, ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. ದಿನದ ಬಗ್ಗೆ ಸ್ವಲ್ಪ ವಿವಾದವಿದ್ದಂತೆ ಕಾಣುವುದು. ಮಹಾಭಾರತದಲ್ಲಿ, ಮಾರ್ಗಶಿರ ತ್ರಯೋದಶಿ ಮತ್ತು ಚತುರ್ದಶಿ ಸೇರಿದ ದಿನದಂದು ಯುದ್ಧವು ಆರಂಭವಾಯಿತೆಂದು ಹೇಳಿದೆ. ಹದಿನೆಂಟು ದಿನ ಯುದ್ಧ ನಡೆದು ಅದೇ ಮಾರ್ಗಶಿರ ಅಮಾವಾಸ್ಯೆಯಂದು ದುರ್ಯೋಧನನ ವಧೆಯಾಗುವುದು. ಜಯದ್ರಥನ ವಧೆ ಹರಿನಾಲ್ಕನೆಯ ದಿನ ಆಯಿತು. ಅಂದು ಕೃಷ್ಣನ ಮಾಯೆಯಿಂದ ಸೂರ್ಯನು ಸ್ವಲ್ಪ ಹೊತ್ತು ಮರೆಯಾಗಿ ನಂತರ ಪನಃ ಸಂಜೆ ಸೂರ್ಯನು ಪುನಃ ಕಾಣಿಸಿಕೊಂಡಾಗ, ಅರ್ಜುನನು ಜಯದ್ರಥನನ್ನು ಕೊಂದನೆಂದು ಹೇಳಿದೆ. ಕೆಲವರು ಅಂದು ಖಾಗ್ರಾಸ ಸೂರ್ಯ ಗ್ರಹಣ ವಾಗಿರಬಹುದೆಂದು ಊಹಿಸುತ್ತಾರೆ. ಹಾಗಿದ್ದರೆ ಅಂದು ಅಮಾವಾಸ್ಯೆಯಾಗಿರಬೇಕು; ಹಾಗಿದ್ದರೆ ಕುರುಕ್ಷೇತ್ರ ಯುದ್ಧವು ಮಾರ್ಗಶಿರ ಬಹುಳ ಬಿದಿಗೆಯಂದು ಆರಂಭವಾಗಿ ಅಂದೇ ಗೀತೋಪದೇಶವಾಗಿರಬೇಕು. ಆದರೆ ಮಾರ್ಗಶರ ಶುದ್ಧ ದಶಮಿ/ ಏಕಾದಶಿಯಂದು ಗೀತಾಜಯಂತಿಯನ್ನು ಆಚರಿಸುವ ಪದ್ದತಿ ಹೇಗೆ ಬಂದಿತೆಂಬುದು ಸಂಶೋಧಕರಿಗೆ ಬಿಟ್ಟ ವಿಷಯ.
ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ. ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನೆಡೆದದ್ದೆಂದು ಸಾಧಿಸುತ್ತಾರೆ.
ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ , ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು ? ನಿಶ್ಚಿತವಾಗಿ ಹೇಳು. ಎಂದ. ಶ್ರೀ ಕೃಷ್ಣನನ್ನು ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಅದರಿಂದಲೇ ಶ್ರೀ ಕ್ರಷ್ನನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.
ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರನೆಗಾಗಿ , ಅವನ ಪ್ರಶ್ನೆ ಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.
ಯುದ್ಧಾರಂಭ ಸಮಯದಲ್ಲಿ ಏಳು ನೂರು ಶ್ಲೋಕಗಳನ್ನು ಹೇಳಿದ್ದುಂಟೇ? ಎಂಬ ಸಂಶಯ ಮೊದಲಿನಿಂದಲೂ ಇದೆ. ಸ್ವಾಮಿ ಆದಿದೇವಾನಂದರು, ತಮ್ಮ ಗೀತಾ ಪೀಠಿಕೆಯಲ್ಲಿ ಶ್ರೀ ಕೃಷ್ಣನು ಸಂಕ್ಷೇಪಿಸಿ ಹೇಳಿದುದನ್ನು ವ್ಯಾಸರು ವಿವರವಾಗಿ ಬರೆದಿರಬಹುದೆಂದು ಹೇಳುತ್ತಾರೆ. ಪ್ರಾಚೀನ ಪ್ರಸಿದ್ಧ ಟೀಕಕಾರರಾದ ಶ್ರೀಧರ ಸ್ವಾಮಿಯವರೂ ಇದೇ ಅಭಿಪ್ರಾಯ ಪಡುತ್ತಾರೆಂದು ಹೇಳಿದ್ದಾರೆ. ಭಗವಂತನ ಸ್ವರೂಪರಾದ ವ್ಯಾಸರು ಮಹಾಭಾರತದ ಸಾರವನ್ನು ಗೀತೆಯಲ್ಲಿ ತುಂಬಿರುವರೆಂದು ವಿನೋಬಾರ ಅಭಿಪ್ರಾಯ. ಶ್ರೀಶಂಕರರು ಶ್ರೀಮನ್ನಾರಾಯಣನೇ ಶ್ರೀ ಕೃಷ್ನನಾಗಿ ಅವತರಿಸಿ, ಜಗತ್ತಿನಲ್ಲಿ ಬ್ರಹ್ಮಜ್ಞಾನ ಪ್ರಚಾರಮಾಡಲು ಮತ್ತು ಅರ್ಜುನನ ಮೋಹವನ್ನು ಕಳೆಯಲು ಮಾಡಿದ ಉಪದೇಶವನ್ನು , ಸರ್ವಜ್ಞರಾದ ವೇದವ್ಯಾಸರು ಭಗವಂತನು ಹೇಳಿದಂತೆಯೇ ಏಳುನೂರು ಶ್ಲೋಕಗಳಲ್ಲಿ ಗೀತೆಯನ್ನು ರಚಿಸಿದರೆನ್ನುತ್ತಾರೆ.
ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ.ಅದರಲ್ಲಿ ಅನೇಕ ಬಗೆಯ ಯೋಗ ಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ.
ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನಿರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗ ವನ್ಮ್ನ ಆರಿಸಿಕೊಳ್ಳಬಹ್ಮದು. ಸದ್ಧರ್ವ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನ ವಾಗಬಹುದೆಂದು ನನ್ನ ಭಾವನೆ. ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆ ಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ.
ಓಂ ತತ್ ಸತ್

Thursday, December 8, 2011

Immortality of soul and rebirth

Immortality of soul and rebirth

The whole theory of eternal quality of soul is based on the logic of ‘nothing can be created from nothingness’ (the unreal has no existence and the real never ceases to be.: Geeta 2nd Ch 16th stanza) . But we have observed that all matters are changing and some times destroyed and converted into energy ; which energy itself according to philosophy is a non-living thing that is ‘asat’. The energy cannot think by itself. What is life (jeeva) or soul is still a mystery. Man cannot think or accept that he who existed at a time will become null and void after death , which is against any logic. When man thinks of life - death and soul and re-rebirth, he thinks about only his own mind and human body. But what about the germs. Insects, invertebrate, animals and plants which are created multiplied in millions and die or vanish in a short time without any ‘Karma’? How they come from the ‘absolute’(super power or Brahma) and go without any purpose or goal. In this Universe of trillions and trillions of stars and nebulas, man is a ‘speck’ compared to the vastness of universe and so I do not see much difference to an insect and a man, placed in the universe. But how I wonder that even a small insect ex: an ant or a man is perfectly biologically mechanized to protect and reproduce it self with a maximum accuracy of mathematical calculations and programmed genes beyond the reach of the wisest man. When we talk of goal of life and rebirth, I think that we should think of all kinds of living beings to suit the General Philosophy of life cycle . As we are social beings we must have an individual goal and social principles to live peacefully and happily. The creation of life (and its body) by nature is with perfect chemistry and mathematical precision and inherent programs; it takes to derive that there is a super power having super-intelligence that is GOD or ‘Brahma’ with a super consciousness and intelligence. The goal of life is to be found by the individual himself. Regarding rebirth, though there are some exceptional examples of memory of previous life, and ‘NDE’(near death experiences), final word cannot be said ; it goes on the explanation and experience of soul itself. Neither we can experience it nor experiment it. We only have to accept or rely on the scriptures or the sayings of the saints without any arguments. The meaning and goal of life is probably well explained in the first two stanzas of Isha Upanishat:

îsHâ vâsyamidaM sarvaM yat kiñca jagatyâM jagat,

tena tyaktena bhuñjîthâ mâ gRidhaH kasya sviddhanam. 1.

The whole universe from the tiniest to the colossal is to be (thought) covered by Isha or the Brahma(Sri Shankara); So you have to live by lending help to others renouncing profit or return; and enjoy yourself the life with contentment (bhunjeetha – feed yourself and help others; one has to work hard and earn more than he needs and keep himself healthy and help others.). Be not greedy. Because the riches does not belong to any one (as it is to be parted with death). ( I have interpreted this stanza with simple meaning as a family man and a social being; the ascetics interpret differently to their convenience, to renounce everything and leave(neglect) the word ‘bhunjeetha’. It (the ideal) is for the ‘Grihastas’. The seer of these stanzas is a ‘grihasta’ having duties of a king )

kûrvanneveha karmâni jijîviSecchataM samâH,

evaM tvayi nânyatheto'sti na karma lipyate nare. (2.)

2. Doing sincerely the duties (social and religious) in this world one should wish to live for a hundred years. Thus it is the only the way and no other way is there than this; action (karma) cleaves not to a man (soul).

Probably these two stanzas summarize the second and third- the two chapters of Geeta; the Jnana yoga and karma yoga.

“**pretyâbhigacchanti ye ke câtmahano janâH”. (3)

Those who do not understand the true nature of soul (slayers of soul will be passed to the world of darkness) will enter the birth cycle of this world of ignorance. .

« agne naya supathâ râye asmân** » (18)

O Brahman (agni the eternal fire or light) lead us in good path (assist us to follow the path of truth and virtue)

This is the final request and probably the goal of life for every Indivdual( to follow the good path).

The final question is :-

(1) Is there re-birth for a person who leads an honest and clean life? Because knowingly or unknowingly he follows the karma yoga.

(2) Do all the souls of living beings from the smallest germ to the biggest mammal have the rebirth or have they no souls?

(3) where do the trillions of these souls come from and go to? How are they created according to philosophy? They are born in seconds in billions and die in minutes.

Why is man is only an exception regarding rebirth and sin (and good) in philosophy?