
ಅಂಟೇನಾಳಿಗೆ:
ಬದುಕೆನ್ನು ಮನದನ್ನೆ ನಿನಗಾಗಿ ಬದುಕುವೆನು,
ಸಂತಸದೆ ನೀ ನುಡಿದ ತೆರದೆ, (ಮತ ವಿಹೀನಳಾದರು ಸರಿಯೆ),
ಒಲಿಮೆಯನು ಕೇಳುವೆಯ ನಾ ನಿನಗೆ ನೀಡುವೆನು,
ಪ್ರೇಮಮಯ ಹೃದಯವನು ಮುದದೆ. (೧)
ಮೃದು ಮಧುರ ಹೃದಯವದು ಅನುಕಂಪ ತುಂಬಿಹುದು,
ಪರಿಪೂರ್ಣ ಅಕಲಂಕ ಸದಯೆ,
ಜಗದಿ ನೀನಾವೆಡೆಯು ಕಾಣದಂದಲಿಹುದು,
ಹೃ ದಯವದ ನಾ ನಿನಗೆ ಕೊಡುವೆ ಪ್ರಿಯಳೆ. (೨)
ನಿನ್ನ ಹೃ ದಯದೆ ತಾಣವನು ನೀಡಲಿಹುದದು,
ಸನ್ಮಾನಿಸುತ ಸತತ ನಿನಗೆ..
ಅಲ್ಲದೆಡೆ ನೀರವದಿ ತೆರಳು ನೀನೆಂದೆನಲು,
ನಿನಗಾಗಿ ಸರಿವು ದಂತೆ ಕಡೆಗೆ. (೩)
ಶೋಕಿಸಲು ಕೇಳನ್ನ ನಾನಂತು ಶೋಕಿಸುವೆ
ಈ ಎರಡು ಕಣ್ಣಿರುವ ವರೆಗೆ.
ಸೀಯಲವು ಏನಂತೆ ಈ ಒಂದು ಹೃ ದಯದಲೆ,
ಕರೆಯುವೆನು , ಕೆನ್ನೀರ ನಿನಗೆ. (೪)
ನೀ ನುಡಿಯೆ ನಿರಸೆಯನು ಕಳೆವೆ ನಾ ವಿರಹದಲಿ,
ಆ ಹಸಿರು ಮಾಮರದ ಕೆಳಗೆ;
ವಿಧಿಸೆ ನೀ ಮಿತ್ತುವನೆ ನಿಶ್ಚಯವು ನಿಮಿಷದಲಿ,
ಸಾಯುವೆನು ನಿನ್ನೊಂದು ನುಡಿಗೆ. (೫)
ಜೀವನವು ನೀನೆನಗೆ ಎನ್ನ ಒಲಿಮೆಯು ನೀನೆ,
ಈ ಹೃತ್ ಕಣ್ಣು ಗಳು ನೀನೆ ಎನಗೆ,
ಕಣ ಕಣದಲಿಹ ಸ್ಪೂರ್ತಿ ನಿನ್ನಿಂ ದ ತುಂಬಿಹು ದು,
ನಿನಾಗಾಗಿ ಉಳಿಯ ಲಳಿಯ ಲೆಲಗೆ (೬)
(ಉಳಿಯಲು-ಅಳಿಯಲು-ಎಲಗೆ-ಎಲೆ ಬಾಲೆ).
(ಮೂಲ ಹದಿನೇಳನೆ ಶತಮಾನದ ಕವಿ ಹೆರಿಕ್ ತನ್ನ ಪ್ರಿ ಯತಮೆ ಆಂತೆ ಳನ್ನು
ಕುರಿತು ಬರೆ ದ ಕವನ)
ಭಾವಾನುವಾದ : ಬಿ .ಎಸ್. ಚಂದ್ರ ಶೇಖರ
ಸಾಗರ
(ದಿ . ೩೦-೦೫-೧೯೫೯)
TO ANTHEA, WHO MAY COMMAND HIM ANY
THING.
(do not copy, Copyright: among
friends only)
---------------
No comments:
Post a Comment