Friday, July 31, 2015

ಚೈತ್ರ ಮಾಸ

  ಚೈತ್ರ ಮಾಸ
           
ಕಾಮನ ಬಿಲ್ಲದು
ಹುಬ್ಬಿನ ಕುಣಿತವು    
 ಹೃದಯದಿ ನೂಪುರ ನಾದವ ಕೇಳಸಿದೇ
ಗಿಲಿಗಿಲಿ ನಆದವ ಕೇಳಿಸಿದೇ||

ಹೂವಿನ ಕಣೆಗಳು
ಕಣ್ಣಿನ ನೋಟವು
 ಹೃ ದಯದಿ ಮೋಹನ ರಾಗವಬ್ಬಿಸಿದೇ
 ರಾಗದ ಅಲೆಅಲೆ ಎಬ್ಬಿಸಿದೇ||

ಬಿರಿಯುವ ಮುಗುಳದು
ಮೃದು ಮಧು ಹಾಸವು
ಮೈಯನು ಮನವನು ಪುಳುಕದಿ ತೇಲಿಸಿದೇ
ಪುಳುಕದ ಹೊನಲಲಿ ತೇಲಿಸಿದೇ||

ಕೋಗಿಲೆ ಯಿಂಚರ
ನುಡಿಯುವ ಇನಿದನಿ
ಲೋಕವ ಮುದವಹ ಗಾನದಿ ಮುಳುಗಿಸಿದೇ
ಸುಧೆಯಹ ಗಾನದಿ ಮುಳುಗಿಸಿದೇ||

ಅರುಣನ ಕಿರಣವು
ದೇಹದ ಕಾಂತಿಯು
ಜಗವನು ಮರೆಸುವ ತೋಷವ ತಂದಿಹುದೋ
ಕಣ್ಣಿಗೆ ಉತ್ಸವ ತಂದಿಹುದೋ||
 

ಹೂಗಳ ಮಧುವೋ
ಒತ್ತುವ ಅಧರವು
ಸಗ್ಗದ ಸೊಗಸನು ಮೀರಿಸಿದೇ
ಅಮರ್ದಿನ ಸವಿಯನು ಮೀರಿಸಿದೇ||
(ರಚನೆ;- ಬಿ . ಎಸ್. ಚಂದ್ರ ಶೇಖರ ಸಾಗರ,

No comments:

Post a Comment