Sunday, December 11, 2011

Astrology & Uncertainty - ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ

ಫಲ ಜ್ಯೋತಿಷ್ಯದಲ್ಲಿ ಕೆಲವು ಸಂದಿಗ್ಧತೆ 
( ಲೇ: ಬಿ.ಎಸ್. ಚಂದ್ರ ಶೇಖರ. ಸಾಗರ: ದಿನಾಂಕ: ೧೫-೮-೧೯೯೮ ರ ವನಕೃಪ ರಾಜ್ಯೋತ್ಸವದ ವಿಶೇಷಾಂಕ ವಿಶೇಷ ಸಂಚಿಕೆಯಲ್ಲಿ ಪ್ರಕಟಿತ ಲೇಖನಕಂಪ್ಯೂಟರಿಗೆ ಹಾಕಿದ ದಿನ ೪-೦೪-೨೦೧೦)
ನಾಗರೀಕತೆ ಪ್ರಾರಂಭವಾದಾಗಿನಿಂದಲೂ ಭವಿಷ್ಯವನ್ನು ಇಣುಕಿನೋಡುವ ಕುತೂಹಲ ಮಾನವನಿಗೆ ಸಹಜವಾಗಿ ಬಂದಿದೆ.   ನಾಳೆ ಎನ್ನುವುದು ಸದಾ ರಹಸ್ಯದ ಆಗರ.  ಇಂದಿದ್ದವನು ನಾಳೆ ಇಲ್ಲ.  ಬಡವ ಬಲ್ಲಿದನಾಗುವನು ; ಬಲ್ಲಿದ ದರದ್ರನಾಗುವನು. ಈ ವಿಚಿತ್ರವನ್ನುತಿಳಯಲು ಮಾನವನ ಪ್ರಯತ್ನ ಅಗಾಧ.  ಭೂತ ಪ್ರೇತ ಆರಾಧನೆ, ಯೋಗ, ಸಿದ್ಧಿ, ಹೀಗೆ ಹಲವು . ಕೊನೆಗೆ ಹೋರಾಶಾಸ್ತ್ರ ಬಂದಿತು.  ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ತಿಳಿದು ಅದರ ಗುಣಾವಗುಣಗಳನ್ನು ಲೆಖ್ಖಹಾಕಿ, ಮನುಷ್ಯನ  ಭೂತ, ಭವಷ್ಯತ್, ವರ್ತಮಾನಗಳನ್ನು ತಿಳಿಯುವ ಪ್ರಯತ್ನವೇ ಹೋರಾಶಾಸ್ತ್ರ.  ಅಥವಾ ಫಲಜೋತಿಷ್ಯ.  ಗ್ರಹ ನಕ್ಷತ್ರಗಳ ಸ್ಥಾನ ಚಲನೆಗಳನ್ನು ತಿಳಿಸುವುದಷ್ಟೇ ಜ್ಯೋತಿಷ್ಯ ಶಾಸ್ತ್ರದ ಕೆಲಸ.  ಅವುಗಳ ಆಧಾರದ ಮೇಲೆ ವ್ಯಕ್ತಿಯ ಮೇಲಾಗುವ ಪರಿಣಾಮಗಳನ್ನು ತಿಳಿಸುವುದು ಫಲಜ್ಯೋತಿಷ್ಯ.
ಖಗೋಲವೃತ್ತದ ೩೬೦ ಡಿಗ್ರಿ(ಅಂಶ)ಗಳನ್ನು ಮೇಷಾದಿ ರಾಶಿಗಳಾಗಿ ಹನ್ನೆರಡು ಭಾಗ ಮಾಡಿ ಗ್ರಹಗಳ ಸ್ಥಾನ ಗುರುತಿಸಿದರೆ, ಅದು ರಾಶಿ ಕುಂಡಲಿ.  ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು ೧೦೮ ಭಾಗಮಾಡಿ  ಪ್ರತಿ ಭಾಗದಲ್ಲಿ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ.  ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ಆರೂಕಾಲು ಗಂಟೆಗಳ ಕಾಲ ಇರುತ್ತಾನೆ.  ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ  ಅಶ್ವಿನಿ ನಕ್ಷತ್ರದ ಒಂದನೇ ಪಾದ.  ಉಳಿದ ಗ್ರಹಗಳ ಚಲನೆ ಚಂದ್ರನಿಗಿಂತ ನಿಧಾನವಾದ್ದರಿಂದ ಕಾಲು ಅರ್ಧ ಗಂಟೆಗಳ ವ್ಯತ್ಯಾದಲ್ಲಿ ಮಗುವಿನ ರಾಶಿ ನವಾಂಶ ಕುಂಡಲಿಗಳಲ್ಲಿ  ಬಹಳ ಬದಲಾವಣೆ  ಆಗುವದಿಲ್ಲ.  ಅವರ ಭವಿಷ್ಯಗಳೂ ಒಂದೇ ಇರಬೇಕಲ್ಲಒಂದೇ ಆಸ್ಪತ್ರೆ  ಆಥವಾ ಊರಿನಲ್ಲಿ  ಏಕ ಕಾಲದಲ್ಲಿ ಜನಿಸಿದವರ ಜೀವನ ಕ್ರಮದಲ್ಲಿ ಜನಿಸಿದವರ ವ್ಯತ್ಯಾಸವಿರುವದು ಕಂಡು ಬಂದಿದೆ.  ಈ ಇಬ್ಬರಲ್ಲಿ ಒಬ್ಬ ಬಡವ, ಇನ್ನೊಬ್ಬ ಶ್ರೀಮಂತ.  ಒಬ್ಬ ಅನಕ್ಷರಸ್ಥ , ಇನ್ನೊಬ್ಬ ವಿದ್ವಾಂಸ.  ಎಂಥ ವಿಚಿತ್ರ.  ಒಬ್ಬರು ಜ್ಯೋತಿಷಿಗಳೇ ಏಕಾಂತದಲ್ಲಿ ತಮ್ಮದೇ ಉದಾಹರಣೆ  ಕೊಟ್ಟರು. ಏಕ ಕಾಲದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ, ತಾವೂ ಇನ್ನೊಬ್ಬರೂ ಜನನವಾಗಿದ್ದು ; ಅವರು ಡಾಕ್ಟರು , ಶ್ರೀಮಂತರು; ತಾವು ಬಡ ಜ್ಯೋತಿಷಿ.  ಇದರ ರಹಸ್ಯ ತಮಗೂ ತಿಳಿಯದೆಂದರು. 
ಪಂಚಾಂಗ ರಚನೆಯಲ್ಲಿ ಅನೇಕ ಸಿದ್ಧಾಂತಗಳದ್ದು ಅವುಗಳಲ್ಲಿ ಚಂದ್ರ ಮತ್ತು ನಕ್ಷತ್ರ ದ ಕಾಲಮಾನಗಳಲ್ಲಿ ವ್ಯತ್ಯಾಸವಿರುತ್ತದೆ.  ಎಲ್ಲರೂ ತಮ್ಮ ಕ್ರಮವೇ ಸರಿ ಎನ್ನುತ್ತಾರೆ.  ಇದು ಹೇಗಾದರೂ ಇರಲಿ ಪಂಚಾಂಗ ಕರ್ತರು ಸ್ಥಿರಬಿಂದುವಿನಿಂದ ಪ್ರಾರಂಭವಾಗುವ ನಿರಯನ ಪದ್ದತಿಯನ್ನೇ  ಅನುಸರಿಸುತ್ತಾರೆ.  ಆದರೆ ಖಗೋಲ ಶಾಸ್ತ್ರದ ಪ್ರಕಾರ ಸುಮಾರು ೭೨ ವರ್ಷಕ್ಕೆ ಒಂದು ಅಂಶದಷ್ಟು (ಡಿಗ್ರಿ) ನಕ್ಷತ್ರ ಉದಯದಲ್ಲಿ ಮುಂದೆಸರಿಯುತ್ತದೆ.  ಭಾಸ್ಕರಾಚಾರ್ಯರು ಹಿಂದೆ ಪಂಚಾಂಗ ರಚನೆ ಮಾಡುವಾಗ ಈ ವ್ಯತ್ಯಾಸವನ್ನು ಅಯನಾಂಶ ಎಂದು ಲೆಕ್ಕ ಹಾಕಿ ಪಂಚಾಂಗ ರಚಿಸಿದ್ದರು.  ಇದಕ್ಕೆ ಸಾಯನ ಪದ್ದತಿ ಎಂದು ಹೆಸರು.  ಅವರು  ನಂತರ ಕಾಲ ಕಾಲಕ್ಕೆ ಪಂಚಾಂಗ ಪರಿಷ್ಕರಣವನ್ನು ಸೂಚಿಸಿದ್ದರು.  ಆದರೆ ಅದು ಆಗಿಲ್ಲ.   ೧೯೯೮ನೇ ಸಾಲಿಗೆ ಭಾಸ್ಕಾರಾಚಾರ್ಯರು ರಚಿಸಿದ ನಕ್ಷತ್ರ, ಗ್ರಹ, ರಾಶಿಗಳ ಲೆಕ್ಕಕ್ಕೂ ಖಗೋಲ ಶಾಸ್ತ್ರದ ಪ್ರಕಾರ  ಸುಮಾರು ೨೩ಅಂಶ(ಡಿಗ್ರಿ), ೪೯ ಕಲೆಗಳಷ್ಟು ವ್ಯತ್ಯಾಸ ವಾಗಿದೆ.  ಎಂದರೆ ಈಗಿನ ನಿರಯನ ಪದ್ದತಿಯಲ್ಲಿ  ಅಶ್ವಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವನ ನಕ್ಷತ್ರ , ಸಾಯನ ಪದ್ದತಿಯಲ್ಲಿ ಎಂದರೆ ಖಗೋಲ ಶಾಸ್ತ್ರದ ಪ್ರಕಾರ ಭರಣಿ ನಕ್ಷತ್ರದ ಮೂರನೇ ಪಾದವಾಗಬೇಕು.   ಕುಂಡಲಿಯಲ್ಲಿ ಎಲ್ಲಾ ಗ್ರಹಗಳನ್ನೂ ೨೩ ಅಂಶ ೪೯ ಕಲೆಗಳಷ್ಟು ಮುಂದೆ ಗುರುತಿಸಬೇಕಾಗುವುದು.  ಉದಾಹರಣೆಗೆ ೧೦-೦೬-೯೮ ಬೆಳಿಗ್ಗೆ  ೬ಗಂಟೆ ೬ ನಿಮಿಷಕ್ಕೆ ಜನಿಸಿದವನ ಕುಂಡಲಿಯಲ್ಲಿ ನಿರಯನ ಪ್ರಕಾರ ಜನ್ಮ ನಕ್ಷತ್ರ ಜೇಷ್ಠಾ ೩ನೇ ಪಾದ, ಆದರೆ ವೈಜ್ಞಾನಿಕವಾಗಿ ಪೂರ್ವಾಷಾಢ ೨ನೇ ಪಾದವಾಗುತ್ತದೆ.  ಆವ್ಯಕ್ತಿಯ ಕುಂಡಲಿ ಈ ರೀತಿ ಇರುತ್ತದೆ :-

UÀÄgÀÄ 4
±À¤ 2
±ÀÄ 6
PÀÄ 3 ®UÀß 5 gÀ« 5 §Ä 5
UÀÄgÀÄ 11 PÉÃvÀÄ 5
±À¤ 10
±ÀÄ 1
gÀ.12
§Ä.12
PÀÄ 10 ®UÀß 12
PÉÃvÀÄ10
10-6-98gÀ
¤gÀAiÀÄ£À PÀÄAqÀ°
¨É½UÉÎ 6UÀªÀÄ. 6¤. PÉÌ d£À£À
10-6-98gÀ
¸ÁAiÀÄ£À PÀÄAqÀ°
¨É½UÉÎ 6UÀA. 6¤. PÉÌ d£À£À
gÁ. 4
ZÀAzÀæ 11
ZÀAzÀæ 6
gÁºÀÄ 11

ಒಬ್ಬನೇ ವ್ಯಕ್ತಿಯ ಈ ಎರಡೂ ಕುಂಡಲಿಗಳ ಭವಿಷ್ಯ ಫಲ  ಒಂದೇ ಆಗಿರುತ್ತದೆ; ಆದರೆ ಗ್ರಹ ನಕ್ಷತ್ರಗಳು ಬೇರೆ ಬೇರೆ ರಾಶಿಗಳಲ್ಲಿವೆ.
೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ  ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ.   ಆದರೆ ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇಫಲ ಹೇಳುವುದು ಸಾಧ್ಯವಿಲ್ಲ.
ಇನ್ನು ರಾಹು ಕೇತುಗಳ ವಿಚಾರ.  ಇವುಗಳನ್ನು ಛಾಯಾ ಗ್ರಹಗಳೆಂದೂ, ಕಣ್ಣಿ ಗೆ ಅಗೋಚರವೆಂದೂ ಹೇಳಲಾಗತ್ತಿದೆ.  ಆದರೆ ಇವು ಗ್ರಹಗಳೇ ಅಲ್ಲ.  ಇವು ಆಕಾಶದಲ್ಲಿ ಎರಡು ಊಹಾ ಬಿಂದುಗಳು.  ಖಗೋಲ ಶಾಸ್ತ್ರದ ಪ್ರಕಾರ ಆಕಾಶದಲ್ಲಿ ಭೂಮಧ್ಯ ರೇಖೆಯನ್ನು ಆಕಾಶಕ್ಕೆ ವಿಸ್ತರಿಸಿದ, ವಿಷುವದ್ ವೃತ್ತ ಮತ್ತು ಊಹಾ ಕ್ರಾಂತಿ ವೃತ್ತಗಳನ್ನು  ಎಳೆದಾಗ  ಅವು ಒಂದನ್ನೊಂದು ಎರಡು ಬಿಂದುಗಳಲ್ಲಿ ಕತ್ತರಿಸುತ್ತವೆ. ಅವು ಖಗೊಲ ಶಾಸ್ತ್ರದ ದೃಷ್ಟಿಯಿಂದ ಪ್ರಾಮುಖ್ಯವಾದುವು.  ಅವು ಮಾನವನ ಜೀವನದ ಮೇಲೆ ಹೇಗೆ ಪರಿಣಾಮ ಮಾಡುವುದೋ ಅರ್ಥವಾಗುವುದಿಲ್ಲ.  ಹೋರಾಶಾಸ್ತ್ರದ ಮೂಲ ಗ್ರಂಥವಾದ ವರಾಮಿಹಿರನ ಬೃಹಜ್ಜಾತಕ ಗ್ರಂಥದಲ್ಲಿ ರಾಹುಕೇತುಗಳನ್ನು ಗ್ರಹಗಳಾಗಿ ಪರಿಗಣಿಸಿಲ್ಲ.  ಆದರೆ ನಂತರ ಯಾರೋ ಅವನ್ನು  ಹೋರಾಶಾಸ್ತ್ರದಲ್ಲಿ ಗ್ರಹಗಳೆಂದು ಸೇರಿಸಿದ್ದಾರೆ.
ದಶಾ ಪದ್ದತಿಯ ವಿಷಯವನ್ನು  ತೆಗೆದುಕೊಂಡರೆ ಎಲ್ಲಾ ಕುಂಡಲಿಗಳಿಗೂ ವಿಂಶೋತ್ತರಿ ದಶಾ ಪದ್ದತಿಯನ್ನು ಅನುಸರಿಸಿ ಫಲ ಹೇಳುತ್ತಾರೆ.  ಆದರೆ ವರಾಹ ಮಿಹಿರ ಭಟ್ಟರು ಬೃಹಜ್ಜಾತಕದಲ್ಲಿ  ಗ್ರಹಗಳ ಬಲಾಬಲಗಳನ್ನು ತಿಳದು ಪ್ರತಿ ಜಾತಕಕ್ಕೂ  ಪ್ರತ್ಯೇಕ ದಶಾವಿಂಗಡಣೆಯನ್ನು ಹೇಳುತ್ತಾರೆ.  ಅದು ತುಂಬಾ ಕಷ್ಟದ ಲೆಕ್ಕಾಚಾರ.  ವಿಂಶೋತ್ತರಿ ದಶಾ ಪದ್ದತಿಯನ್ನು ಚಂದ್ರ ನಕ್ಷತ್ರದ ನೇಲೆ ಅವಲಂಬಿಸಿ ಹೇಳುವುದು ಸರಿಯಷ್ಟೆ.  ಚಂದ್ರ ನಕ್ಷತ್ರವೇ ವೈಜ್ಞಾನಿಕವಾಗಿ ತಪ್ಪಾದ ಮೇಲೆ, ಅದರ ಆಧಾರದಿಂದ ಹೇಳುವ ದಶಾ ಪದ್ದತಿ ಹೇಗೆ ಸರಿ ಹೋಗಬಹುದುಜ್ಯೋತಿರ್ಗನ್ನಡಿ ಯನ್ನು ಬರೆದ ರಮಾಕಾಂತ ರವರು, ಸೂರ್ಯ ನಕ್ಷತ್ರದ ಮೇಲೆ ಕುಂಡಲಿಯ ಲಕ್ಷಣಕ್ಕೆ ಹೊಂದುವ ಬೇರೆಬೇರೆ ದಶಾಪದ್ದತಿಯನ್ನು ಅನುಸರಿಸಬೇಕೆಂದು ಸೂಚಿಸಿದ್ದಾರೆ.
ಈಗ ಅನುಸರಿಸುತ್ತಿರುವ  ನಿರಯನ ಪದ್ದತಿಯಲ್ಲಿ ಜನ್ಮ ನಕ್ಷತ್ರ, ಸೂರ್ಯ ನಕ್ಷತ್ರ, ಲಗ್ನಗಳೇ ಕೆಟ್ಟುಹೋದ ಮೇಲೆ, ಅದನ್ನು ಅನುಸರಿಸಿ ಹೇಳಿದ ಭವಿಷ್ಯ ಸರಿಹೋಗುವುದು ಹೇಗೆ?
ಸಾಯನ ಪದ್ದತಿಯಲ್ಲಿ ಕುಂಡಲಿಯನ್ನು ರಚಿಸುವುದು ಸ್ವಲ್ಪ ಕಷ್ಟ.  ಅಲ್ಲದೆ ಕೆಲವು ಜ್ಯೋತಿಷಿಗಳು  ತಮ್ಮ ಅನುಭವದ ಪ್ರಕಾರ  ವ್ಯಕ್ತಿಯ ಜೀವನಕ್ಕೆ ಅದು ಹೊಂದುವುದಿಲ್ಲವೆಂದೂ ಹೇಳುತ್ತಾರೆ.
ಫಲ ಜ್ಯೋತಿಷ್ಯದ ಶಾಸ್ತ್ರವನ್ನು ಅಥವಾ ಹೋರಾಶಾಸ್ತ್ರವನ್ನು  ರಚಿಸಿದ ಹಿಂದಿನ ಋಷಿಗಳುವರಾಹ ಮಿಹಿರ ಭಟ್ಟರುಗ್ರಹ, ನಕ್ಷತ್ರ, ರಾಶಿಗಳ ಗುಣ, ಬಲಾಬಲ, ಗ್ರಹಗಳ ಸ್ಥಾನದೃಷ್ಟಿ -ಬಲ, ಮೊದಲಾದವುಗಳನ್ನು ಅಸಾಧಾರಣ ಜಾಣ್ಮೆ ಯಿಂದ ರಚಿಸಿದ್ದಾರೆ.  ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವುದು ಕಷ್ಟ, ಅಸಾಧ್ಯ, ವಿಶೇಷ ಮೇಧಾವಿಗಳು ತಿಳಿದುಕೊಂಡರೂ ನಿಖರವಾಗಿ ಫಲಗಳನ್ನು ನಿರ್ಧರಿಸಲು ಆಗದಷ್ಟು ಜಟಿಲತೆ ಸಂದಿಗ್ಧತೆ ಇದೆ. ಕೆಲವು ಗ್ರಹಗಳಿಗೆ ಎರಡೆರಡು ರಾಶಿಗಳ ಆಧಿಪತ್ಯಗಳನ್ನೂ   ಹಲವು ಬಗೆಯ ದೃಷ್ಟಿಗಳನ್ನೂ  ವಿಶೇಷ ಜಾಣ್ಮೆಯಿಂದ ಕೊಡಲಾಗಿದೆಅದರಿಂದ ಏಕಕಾಲದಲ್ಲಿ ಒಂದು ಗ್ರಹವು ಶುಭಕಾರಕವೂ, ಅಶುಭಕಾರಕವೂ ಆಗಿರುತ್ತದೆ.  ಬೇರೆ ಬೇರೆ ಜ್ಯೋತಿಷಿಗಳು ಅವರವರ ದೃಷ್ಟಿ ಕೋನಕ್ಕೆ ತಕ್ಕಂತೆ ಫಲಗಳನ್ನು ಹೇಳಬಹುದು.  ನಿಖರತೆ ಅಸಾಧ್ಯ .  ಈ ಶಾಸ್ತ್ರ ರಚನೆಯ ಕೌಶಲ್ಯವೇ ಹಾಗಿದೆ.  ಆದ್ದರಿಂದ ಫಲಜ್ಯೋತಿಷ್ಯದ ಬಗ್ಗೆ  ಪಂಚಂ ಭವತಿ, ಪಂಚಂ ನ ಭವತಿ ಎಂದು ಹೇಳಿದ್ದಾರೆ.  ವಿಧಾತನನ್ನು ಕುರಿತು, ಕೋ ವೇತ್ತಾ ತಾರತಮ್ಯಸ್ಯ ತಮೇಕಂ ವೇಧಸಂ ವಿನಾ.  ಎಂದರೆ ಬ್ರಹ್ಮ ದೇವನ ವಿನಾ ಫಲ ತಾರತಮ್ಯವನ್ನು ಬೇರೆ ಯಾರಿಗೂ ಹೇಳಲು ಸಾಧ್ಯವಿಲ್ಲ.ಎಂದು ಅರ್ಥ.  ಯೋಗ, ಸಿದ್ಧಿಜ್ಞಾನ ಸಾಧನೆಗಳಿಂದ ಭವಿಷ್ಯ ಹೇಳಬಹುದೆಂದರೆ, ಅವರಿಗೆ ಗ್ರಹ ಕುಂಡಲಿಯ ಅಗತ್ಯವೂ ಇಲ್ಲ.
 ಸಾರಾಶವೆಂದರೆ ಫಲಜ್ಯೋತಿಷ್ಯವನ್ನು ನಂಬುವುದಕ್ಕಿಂತ  ದಾಸ ವರೇಣ್ಯರೆಂದಂತೆ  ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ  ಎಂದು ಪರಮಾತ್ಮನ ಶರಣು ಹೋಗುವುದೇ ಕ್ಷೇಮ.  ಆದರೆ  ಜನರಿಗೆ ಭವಿಷ್ಯದ ಬಗ್ಗೆ ಕುತೂಹಲ, ಭಯ ಇರುವವರೆಗೂ  ಕಷ್ಟಗಳಿಗೆ ಸುಲಭ ಪರಿಹಾರ ಸಿಗುವುದೆಂಬ ಭಾವನೆ, ಮನಸ್ಸಿಗೆ ಹೇಗೋ ನೆಮ್ಮದಿ ಪಡೆವ ಮನೋಭಾವ ಇರುವವರೆಗೂ  ಫಲಜ್ಯೋತಿಷ್ಯಕ್ಕೆಜ್ಯೋತಿಷಿಗಳಿಗೆ ಪ್ರಾಮುಖ್ಯತೆ ಇದ್ದೇ ಇರುತ್ತದೆ.
           
ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ  ದೆಹಲಿಯ ಜಂತರ್ ಮಂತರ್ಗ್ರಹ ನಕ್ಷತ್ರಗಳ ಚಲನೆ, ಸ್ಥಾನ ತಿಳಯಲು ಹಿಂದೆ ರಚಿಸಿದ  ದೆಹಲಿಯ ಜಂತರ್ ಮಂತರ್

No comments:

Post a Comment