Monday, December 19, 2011


ದರ್ಶನ ಶಾಸ್ತ್ರ - ಪಾಶ್ಚ್ಯಾತ್ಯ ದೃಷ್ಠಿಕೋನ
(ಆಧಾರ: ಎಂ. ಪ್ರಭಾಕರ ಜೋಷಿ & ಎಂ.ಎಂ. ಹೆಗಡೆ _ಭಾರತೀಯ ತತ್ವ ಶಾಸ್ತ್ರ ಪರಿಚಯ :೦೮೧೮೩ :೨೨೬೯೬೫)

೧ ತತ್ವ ಮೀಮಾಂಸೆ ( ಒeಣಚಿಠಿhಥಿsiಛಿs ): ತತ್ವಗಳಾವುವು - ಅವು ಹೇಗಿವೆ?
ಜ್ಞಾನ ಮೀಮಾಂಸೆ ( ಇಠಿisಣomoಟgಥಿ) : ಪ್ರಮಾಣಗಳೆಷ್ಠು -ಯಾವುವು-ಹೇಗಿವೆ?
ಜ್ಞಾನವುಂಟಾಗುವುದು ಹೇಗೆ?
ತರ್ಕ (ಐogiಛಿ) : ಸತ್ಯ ಅಸತ್ಯಗಳ ಪರಿಶೀಲನಾ ವಿಧಾನ.
ಮನೋವಿಜ್ಞಾನ (Psಥಿಛಿhoಟogಥಿ) : ಮನೋ ವ್ಯಾಪಾರ- ಪ್ರವೃತ್ತಿಗಳ ಅಧ್ಯಯನ.
ನೀತಿ ನಿಯಮ (ಇಣhiಛಿs) : ಲೌಕಿಕ - ಪಾರಮಾರ್ಥಿಕ ಜೇವನಕ್ಕೆ ಬೇಕಾದ
ನೀತಿ ನಿಯಮಗಳು, ಆಚಾರಗಳು.
೬ ಸೌಂದರ್ಯ ಶಾಸ್ತ್ರ (ಂesಣheಣiಛಿs) : ಭೌತ - ಅಭೌತ ಅನುಭವಗಳ -
ಸೌಂದರ್ಯಾತ್ಮಕ ಮೌಲ್ಯ ಮಾಪನ

ತತ್ವ ಶಾಸ್ತ್ರವೇ ಎಲ್ಲದಕ್ಕಿಂತ ಶ್ರೇಷ್ಠ ವಿದ್ಯೆ, ಎಂಬ ಅಭಿಪ್ರಾಯ ಸಲ್ಲದು. ಎಲ್ಲಾ ಶಾಸಗಳೂ ಶ್ರೇಷ್ಠವೇ. ತತ್ವ ಶಾಸ್ತ್ರವು ವೃದ್ಧರು ಮಾತ್ರರವಲ್ಲದೇ ಎಲ್ಲರೂ ಅಭ್ಯಾಸ ಮಾಡಬಹುದಾದ ಶಾಸ್ತ್ರ. ( ಎಂ. ಪ್ರಭಾಕರ ಜೋಷಿ & ಎಂ.ಎಂ. ಹೆಗಡೆ _ಭಾರತೀಯ ತತ್ವ ಶಾಸ್ತ್ರ ಪರಿಚಯ )


ಭಾರತದ ದರ್ಶನಗಳು.
೧ . ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ, ಜೈನ, ಬೌದ್ಧ, ಚರ್ವಾಕ, ಇವು ಒಂಭತ್ತು ಪ್ರಮುಖ ದರ್ಶನಗಳು.
೨ . ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ, ವೇದಾಂತ , ಇವು ರೂಢಿಯಲ್ಲಿ ಬಂದ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು)
೩ . ಆಸ್ತಿಕ : ದೇವರು , ಪಾಪ ಪುಣ್ಯ ಗಳನ್ನು ಒಪ್ಪುವ ಅಥವಾ ವೇದಗಳನ್ನು ಒಪ್ಪುವವನು.
೪ . ನಾಸ್ತಿಕ : ಮೇಲಿನವುಗಳನ್ನು ಒಪ್ಪದವನು. ನಾಸ್ತಿಕೋ ವೇದ ನಿಂದಕಃ. ಮನು ಸ್ಮೃತಿ.
೫ . ನಾಸ್ತಿಕ ದರ್ಶನಗಳು ಅಥವಾ ಅವೈದಿಕ ದರ್ಶನಗಳು : ಜೈನ , ಬೌದ್ಧ, - ಪರಲೋಕ, ದೇವತೆಗಳು, ಧರ್ಮ , ಪಾಪ ಪ್ಮಣ್ಯಗಳನ್ನು ಒಪ್ಪಿದರೂ ವೇದಗಳನ್ನು ಪ್ರಮಾಣವೆಂದು ಒಪ್ಪುವುದಿಲ್ಲ. ಚಾರ್ವಾಕರು ದೇವರನ್ನೂ, ವೇದಗಳನ್ನೂ , ಪರಲೋಕವನ್ನೂ ಒಪ್ಪುವುದಿಲ್ಲ.
೬ . ನಿರೀಶ್ವರ ದರ್ಶನ ಆದರೂ ಆಸ್ತಿಕ ದರ್ಶನಗಳು : ಸಾಂಖ್ಯ, ಮತ್ತು ನ್ಯಾಯ, ಮೀಮಾಂಸ, ಇವರು ವೇದಗಳನ್ನು ಒಪ್ಪುತ್ತೆವೆ ಆದರೆ ದೇವರು ಅಥವಾ ಜಗನ್ನಿಯಾಮಕನನ್ನು ಒಪ್ಪುವುದಿಲ್ಲ
೭ . ಸೇಶ್ವರ ದರ್ಶನ : ಈಶ್ವರ, ದೇವರು, ಜಗನ್ನಿಯಾಮಕನನ್ನು ಒಪ್ಪುತ್ತವೆ. ಯೋಗ, ವೈಶೇಷಿಕ, ವೇದಾಂತ, ವೇದಗಳು, ಅವಕ್ಕೆ ಆಧಾರ -ಪ್ರಮಾಣ ಎಂದು ಒಪ್ಪುತ್ತವೆ.







ಸೂತ್ರ ಮತ್ತು ವ್ಯಾಖ್ಯಾನ
೧. ಸೂತ್ರಗಳು , ದರ್ಶನಗಳ ಬಗ್ಗೆ ಹೇಳುವ ಸಂಕ್ಷಿಪ್ತ ಹೇಳಿಕೆ, ಪದಗಳ ಗುಂಪು.
೨. ವ್ಯಾಖ್ಯಾನ : ಸೂತ್ರಗಳ ವಿವರಣೆ. ಒಂದೆ ಸೂತ್ರಕ್ಕೆ, ಬೇರೆ ಬೇರೆ ದರ್ಶನದವರು , ಬೆರೆ ಬೇರೆ ವ್ಯಾಖ್ಯಾನ-ವಿವರಣೆ ನೀಡಬಹುದು. ಹಾಗೆ ಬೇರೆ ಬೇರೆ ಪಂಥಗಳಾಗುವುವು. ಇವಕ್ಕೆ ಬಾಷ್ಯಗಳೆಂದೂ , ಬಾಷ್ಯಗಳನ್ನು ವಿವರಿಸಿದರೆ ವಾರ್ತಿಕಗಳೆಂದೂ, ವಾರ್ತಿಕಗಳನ್ನು ಅರ್ಥೈಸಿದರೆ ವ್ಯಾಖ್ಯಾನ / ಟೀಕೆ ಎಂದೂ ಆಗುವುದು.

ಆಧಾರಗಳು (ಪ್ರಾಚೀನ)
೧. ಯೋಗ ದರ್ಶನಕ್ಕೆ : ಪಾತಂಜಲಿಯ ಯೋಗ ಸೂತ್ರ.
೨. ಮೀಮಾಂಸಕ್ಕೆ : ಜೈಮಿನಿಯ ಧರ್ಮ ಸೂತ್ರ.
೩. ವೇದಾಂತಕ್ಕೆ : ಬಾದರಾಯಣರ ಬ್ರಹ್ಮ ಸೂತ್ರ.
೪. ನ್ಯಾಯಕ್ಕೆ : ಗೌತಮರ ನ್ಯಾಯ ಸೂತ್ರ.
೫. ವೈಶೇಷಿಕಕ್ಕೆ : ಕಣಾದನ ಸೂತ್ರ.
೬. ಸಾಂಖ್ಯ- ಚಾರ್ವಾಕ ದರ್ಶನ ಸೂತ್ರ ಗಳು ನಷ್ಟವಾಗಿವೆ.

ತತ್ವ ಚರ್ಚೆಯ ಮುಖ್ಯ ಅಂಶಗಳು
೧. ಜಡತ್ವ :- ಜೀವವಿಲ್ಲದ್ದು.
೨. ಚೇತನತ್ವ :- ಜೀವ ಅಥವಾ ಚಿತ್ ಭಾವ ವುಳ್ಳದ್ದು (ಮನಸ್ಸು ಉಳ್ಳದ್ದು)
೩. ಬೌದ್ಧರು - ಶಂಕರರ ಅದ್ವೈತ -ಚೈತನ್ಯ ಪ್ರಧಾನ ವಾದಿಗಳು.
೪. ಸಾಂಖ್ಯರು - ಚಾರ್ವಾಕರು -ಜಡ ಪ್ರದಾನ ವಾದಿಗಳು.
೫. ನ್ಯಾಯ , ವೈಶೇಷಿಕ , ಮೀಮಾಂಸ , ದ್ವೈತ, ಜೈನ ದರ್ಶನಗಳು ಉಭಯ ವಾದಿಗಳು, ಎರಡೂ ಪ್ರಧಾನ ವೆನ್ನುವರು.

ಭಾರತದ ಮುಖ್ಯ ದರ್ಶನಗಳು ಮತ್ತು ವಿಚಾರಗಳು (ಮೇಲಿನ ಆಧಾರ ಗ್ರಂಥದಲ್ಲಿರುವ ವಿಭಾಗಗಳು)
೧. ಚಾರ್ವಾಕ ದರ್ಶನ ೨. ಜೈನ ಧರ್ಮ ೩. ಬೌದ್ಧ ಧರ್ಮ ೪. ಬೌದ್ಧ ದರ್ಶನ ೫. ಸಾಂಖ್ಯ ದರ್ಶನ ೬. ಯೋಗ ದರ್ಶನ
೭. ನ್ಯಾಯ ದರ್ಶನ. (ತರ್ಕಶಾಸ್ತ್ರ) ೮. ವೈಶೇಷಿಕ ದರ್ಶನ ೯.ಮೀಮಾಂಸಾ ದರ್ಶನ
೧೦. ವೇದಾಂತ ದರ್ಶನ ೧೧. ಅದ್ವೈತ ದರ್ಶನ ೧೨. ಅದ್ವೈತ ದರ್ಶನದಲ್ಲಿ
ಶಾಂಕರ ಸಿದ್ಧಾಂತ
೧೩. ವಿಶಿಷ್ಠಾದ್ವೈತ ದರ್ಶ ೧೪. ದ್ವೈತ ದರ್ಶನ (ಮಾಧ್ವ ಸಿದ್ಧಾಂತ.) ೧೫.ಇತರ ದ್ವೈತ ಪಂಥಗಳು
೧೬ ಶೈವ ಸಿದ್ಧಾಂತಗಳು ೧೭. ವೀರ ಶೈವ.(ಶಕ್ತಿ ವಿಶಿಷ್ಠಾದ್ವೈತ) ೧೮. ದರ್ಶನಗಳ ಉಪಸಂಹಾರ. ೧೯ . ದರ್ಶನ ಶಾಸ್ತ್ರಗಳ ಕಲವು ಆಧಾರಗಳು. ೨೦.ಕರ್ಮ ಸಿದ್ಧಾಂತ ೨೧.ಪರಮಾತ್ಮ-ಈಶ್ವರ ಅಥವಾ ದೇವರು ೨೨.ಈಶ್ವರನ ಅಸ್ತಿತ್ವ-ಸಮರ್ಥನೆ-ನಿರಾಕರಣೆ ೨೩.ಜಗತ್ತು -ದರ್ಶನಗಳ ದೃಷ್ಠಿಕೋನ ೨೪.ಜೀವಾತ್ಮ, ೨೫. ಮೋಕ್ಷ. ೨೬. ಜ್ಙಾನ ಕರ್ಮ ವಿವಾದ ೨೭. ಮಾಯಾವಾದ

No comments:

Post a Comment